ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ

|

Updated on: Oct 05, 2024 | 4:04 PM

ಬಿಗ್​ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾಗಿ ವಾರವಾಗುತ್ತಾ ಬಂದಿದ್ದು ಇಂದು ಈ ಸೀಸನ್​ನ ಮೊದಲ ವಾರದ ಪಂಚಾಯ್ತಿ ನಡೆಯುತ್ತಿದ್ದು ಬಿಗ್​ಬಾಸ್ ಎಕ್ಸ್​ಪೋಸ್ ಮಾಡುವೆ ಎಂದ ಲಾಯರ್​ನ ವಿಚಾರಣೆ ನಡೆಸುವ ಮುನ್ಸೂಚನೆ ನೀಡಿದ್ದಾರೆ.

ಬಿಗ್​ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾಗಿ ವಾರವಾಗುತ್ತಾ ಬಂದಿದೆ. ಇದೀಗ ಈ 11ನೇ ಸೀಸನ್​ನ ಮೊದಲ ವಾರದ ಪಂಚಾಯಿತಿ ಇಂದು ನಡೆಯಲಿದೆ. ಇದೀಗ ಮೊದಲ ಪಂಚಾಯಿತಿಯ ಪ್ರೋಮೋ ಬಿಡುಗಡೆ ಆಗಿದ್ದು, ಸುದೀಪ್ ಪ್ರತಿ ಬಾರಿಯಂತೆ ಸ್ಟೈಲ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಪ್ರೋಮೋನಲ್ಲಿ ಜಗದೀಶ್ ಅವರು ಮಾತನಾಡಿದ ವಿಚಾರವನ್ನೇ ಪ್ರಮುಖವಾಗಿ ಪ್ರಸ್ತಾಪ ಮಾಡಿರುವ ಕಿಚ್ಚ ಸುದೀಪ್, ‘ಬಿಗ್​ಬಾಸ್ ಬೇಕು ಎಂದು ಬಂದವರೇ ಈಗ ಬಿಗ್​ಬಾಸ್ ಎಕ್ಸ್​ಪೋಸ್ ಮಾಡುತ್ತೀನಿ ಎಂದು ನಿಂತಿದ್ದಾರೆ’ ಎಂದಿದ್ದಾರೆ. ಆ ಮೂಲಕ ಇಂದಿನ ಎಪಿಸೋಡ್​ನಲ್ಲಿ ಲಾಯರ್ ಜಗದೀಶ್ ಅನ್ನು ವಿಚಾರಣೆ ಮಾಡುವ ಸುಳಿವನ್ನು ಸುದೀಪ್ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Oct 05, 2024 03:14 PM