ಪುರುಷ ಸ್ಪರ್ಧಿಗಳಿಗೆ ಹೊಡೆದು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ಆಸಿಯಾ ನಿರ್ಧಾರ
‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಆಸಿಯಾ ಅವರ ಕೋಪ ನೆತ್ತಿಗೇರಿದೆ. ಅವರನ್ನು ಲಿಖಿತ್ ಮತ್ತು ಮಂಜ ರೇಗಿಸಿದ್ದಾರೆ. ಅಣಕಿಸುವುದನ್ನು ನಿಲ್ಲಿಸುವಂತೆ ಆಸಿಯಾ ಎಷ್ಟೇ ಸೂಚನೆ ನೀಡಿದರೂ ಲಿಖಿತ್ ಸುಮ್ಮನಾಗಿಲ್ಲ. ಮಂಜ ಕೂಡ ಅತಿಯಾದ ಮಾತುಗಳಿಂದ ಆಸಿಯಾ ಅವರನ್ನು ಕೆಣಕಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಆಸಿಯಾ ಅವರ ಕೋಪ ನೆತ್ತಿಗೇರಿದೆ. ಅವರನ್ನು ಲಿಖಿತ್ ಮತ್ತು ಮಂಜ ರೇಗಿಸಿದ್ದಾರೆ. ಅಣಕಿಸುವುದನ್ನು ನಿಲ್ಲಿಸುವಂತೆ ಆಸಿಯಾ ಎಷ್ಟೇ ಸೂಚನೆ ನೀಡಿದರೂ ಲಿಖಿತ್ ಸುಮ್ಮನಾಗಿಲ್ಲ. ಮಂಜ ಕೂಡ ಅತಿಯಾದ ಮಾತುಗಳಿಂದ ಆಸಿಯಾ ಅವರನ್ನು ಕೆಣಕಿದ್ದಾರೆ. ಇದರಿಂದ ಆಸಿಯಾ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ‘ನಾನು ಈ ಮನೆಯಿಂದ ಹೊರಗಡೆ ಹೋದರೂ ಪರವಾಗಿಲ್ಲ. ಇಬ್ಬರು ಹುಡುಗರನ್ನು ಹೊಡೆದುಹೋದೆ ಅಂತ ಆಗಲಿ’ ಎಂದು ಆಸಿಯಾ ಅವರು ಹೇಳಿದ್ದಾರೆ. ಅಕ್ಟೋಬರ್ 2ರ ಸಂಚಿಕೆಯ ಈ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಈ ವಾರಾಂತ್ಯದಲ್ಲಿ ಬಿಗ್ ಬಾಸ್ ಮನೆಯಿಂದ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಈ ಮೊದಲು ಮನೆಯಿಂದ ಹೊರಗೆ ಹೋಗಿದ್ದ ತಾಂಡವ್ ರಾಮ್ ಅವರು ಮತ್ತೆ ದೊಡ್ಮನೆಗೆ ಎಂಟ್ರಿ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
