AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನೀವು ಯಾರೂ ಅರ್ಹರಲ್ಲ’: ಸ್ಪರ್ಧಿಗಳಿಗೆ ನೇರವಾಗಿ ಛೀಮಾರಿ ಹಾಕಿದ ಬಿಗ್ ಬಾಸ್

ಬಿಗ್ ಬಾಸ್ ನೀಡಿದ ಟಾಸ್ಕ್ ಅನ್ನು ಸ್ಪರ್ಧಿಗಳು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಆದ್ದರಿಂದ ಕ್ಯಾಪ್ಟೆನ್ಸಿ ಟಾಸ್ಕ್ ರದ್ದು ಮಾಡಲಾಗಿದೆ. ಬಿಗ್ ಬಾಸ್ ನಿಯಮಗಳಿಗೆ ಸ್ಪರ್ಧಿಗಳು ಸರಿಯಾಗಿ ಗೌರವ ನೀಡಿಲ್ಲ ಎಂಬುದನ್ನು ನೇರವಾಗಿಯೇ ಹೇಳಲಾಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 13’ ಲೇಟೆಸ್ಟ್ ಸಂಚಿಕೆಯಲ್ಲಿ ಈ ರೀತಿ ಆಗಿದೆ.

‘ನೀವು ಯಾರೂ ಅರ್ಹರಲ್ಲ’: ಸ್ಪರ್ಧಿಗಳಿಗೆ ನೇರವಾಗಿ ಛೀಮಾರಿ ಹಾಕಿದ ಬಿಗ್ ಬಾಸ್
Likhit, ManjaImage Credit source: Colors Kannada
ಮದನ್​ ಕುಮಾರ್​
|

Updated on: Oct 01, 2026 | 10:35 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋಗೆ ಬಂದಿರುವ ಸ್ಪರ್ಧಿಗಳ ಬಗ್ಗೆ ಪ್ರೇಕ್ಷಕರಿಗೆ ಅಸಮಾಧಾನ ಇದೆ ಎಂಬುದು ಸೋಶಿಯಲ್ ಮೀಡಿಯಾ ನೋಡಿದರೆ ತಿಳಿಯುತ್ತದೆ. ಈಗ ಸ್ವತಃ ಬಿಗ್ ಬಾಸ್ ಕಡೆಯಿಂದಲೂ ಅಸಮಾಧಾನದ ಮಾತುಗಳು ಬಂದಿವೆ. ಅಕ್ಟೋಬರ್ 1ರ ಸಂಚಿಕೆಯಲ್ಲಿ ಬಿಗ್ ಬಾಸ್ ನೀಡಿದ ಟಾಸ್ಕ್ ಅನ್ನು ಸರಿಯಾಗಿ ನಿಭಾಯಿಸಲು ಇಡೀ ಮನೆಯ ಸದಸ್ಯರು ವಿಫಲರಾಗಿದ್ದಾರೆ. ಇದರಿಂದಾಗಿ ಬಿಗ್ ಬಾಸ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಸ್ಪರ್ಧಿಗಳು ಸೂಕ್ತ ರೀತಿಯಲ್ಲಿ ಟಾಸ್ಕ್ ನಿಭಾಯಿಸಲು ಅರ್ಹರಲ್ಲ ಎಂದು ಬಿಗ್ ಬಾಸ್ ಹೇಳಿದ್ದಾರೆ.

ಬಿಗ್ ಬಾಸ್ ಮನೆಯ ಮುಂದಿನ ಕ್ಯಾಪ್ಟನ್ ಯಾರು ಎಂಬುದನ್ನು ನಿರ್ಧರಿಸಲು ‘ಹೊಸಬೆಳಕು’ ಎಂಬ ಟಾಸ್ಕ್ ನೀಡಲಾಗಿತ್ತು. ಎಂದಿನಂತೆ ಟಾಸ್ಕ್ ಆರಂಭ ಆಗುವುದಕ್ಕೂ ಮುನ್ನ ನಿಯಮಗಳನ್ನು ಬರೆದು ಕಳಿಸಲಾಯಿತು. ಅದನ್ನು ಮಂಜ ಅವರು ಓದಿ ಹೇಳಿದರು. ಆದರೆ ಟಾಸ್ಕ್ ಆರಂಭ ಆದ ಬಳಿಕ ಸಾಕಷ್ಟು ಗೊಂದಲಗಳು ಎದುರಾದವು.

ಲಿಖಿತ್ ಮತ್ತು ಮಂಜ ಅವರು ಈ ಟಾಸ್ಕ್ ಉಸ್ತುವಾರಿ ವಹಿಸಿದ್ದರು. ಎರಡು ತಂಡಗಳ ನಾಯಕತ್ವವನ್ನು ಗಾನವಿ ಮತ್ತು ಪ್ರಶಾಂತ್ ವಹಿಸಿಕೊಂಡಿದ್ದರು. ಸೋನಿಕಾ, ಆಸಿಯಾ, ಧನುಷ್ ಮತ್ತು ಕಿರಣ್ ಶಾಸ್ತ್ರಿ ಅವರು ಈ ಟಾಸ್ಕ್ ಆಡಿದರು. ಟಾಸ್ಕ್ ಮುಗಿದರೂ ಕೂಡ ಯಾರು ವಿನ್ ಎಂಬುದನ್ನು ಘೋಷಿಸಲು ಸಾಧ್ಯವಾಗಲೇ ಇಲ್ಲ. ಎಲ್ಲವೂ ಹಳ್ಳ ಹಿಡಿದಿದೆ ಎಂಬುದು ಆಗ ಎಲ್ಲರಿಗೂ ತಿಳಿಯಿತು. ಆಗ ಬಿಗ್ ಬಾಸ್ ಮಧ್ಯ ಪ್ರವೇಶಿಸಿದರು.

‘ಮಂಜುನಾಥ್ ಹಾಗೂ ಲಿಖಿತ್ ಅವರಿಗೆ ಈ ಟಾಸ್ಕ್ ಸರಿಯಾಗಿ ಅರ್ಥ ಆಗಿತ್ತಾ? ಟಾಸ್ಕ್ ಪತ್ರ ಓದಿದ ಮಂಜ ಅವರಿಗೆ ಟಾಸ್ಕ್ ಅರ್ಥ ಆಗಿರಲಿಲ್ಲವೇ? ಹೈಜಾಕರ್ ಗಾನವಿ ಹಾಗೂ ಹೈಜಾಕರ್ ಪ್ರಶಾಂತ್ ಕೂಡ ತಂಡದ ನಾಯಕರಾಗಿ ಟಾಸ್ಕ್ ಏನು ಎಂಬುದನ್ನು ಸರಿಯಾಗಿ ಕೇಳಿಸಿಕೊಂಡಿಲ್ಲವೇ? ಟಾಸ್ಕ್ ಆಡಿದ ಆಸಿಯಾ, ಧನುಷ್, ಕಿರಣ್ ಹಾಗೂ ಸೋನಿಕಾ ಕೂಡ ಅರ್ಥ ಮಾಡಿಕೊಳ್ಳಲಿಲ್ಲವೇ?’ ಎಂದು ಬಿಗ್ ಬಾಸ್ ಪ್ರಶ್ನಿಸಿದರು.

ಇದನ್ನೂ ಓದಿ: ಬಿಗ್ ಬಾಸ್ 4ನೇ ವಾರದ ನಾಮಿನೇಷನ್: ಈ ಸ್ಪರ್ಧಿಗಳಿಗೆ ಶುರುವಾಗಿದೆ ಢವಢವ

‘ಇದು ಕ್ಯಾಪ್ಟೆನ್ಸಿ ಸಲುವಾಗಿ ನೀಡಿದ ಟಾಸ್ಕ್ ಆಗಿತ್ತು. ಆಟದ ನಿಯಮದ ಬಗ್ಗೆ ಸ್ಪರ್ಧಿಗಳಿಗೆ ಗೌರವ ಇಲ್ಲ ಎಂಬುದು ಸ್ಪಷ್ಟವಾಗಿದೆ. ಈ ಟಾಸ್ಕ್ ನಡೆಯಬೇಕಾದ ರೀತಿಯಲ್ಲಿ ನಡೆದಿಲ್ಲ. ಹಾಗಾಗಿ ಟಾಸ್ಕ್ ರದ್ದು ಮಾಡಲಾಗಿದೆ. ಟಾಸ್ಕ್ ಬಗ್ಗೆ ಗೌರವ ಇಲ್ಲ ಎಂಬ ಕಾರಣದಿಂದ ಈ ವಾರದ ಕ್ಯಾಪ್ಟೆನ್ಸಿ ಓಟವನ್ನೇ ರದ್ದು ಮಾಡಲಾಗಿದೆ. ಯಾರೂ ಕೂಡ ಕ್ಯಾಪ್ಟನ್ ಆಗಲು ಸಾಧ್ಯವಿಲ್ಲ. ನೀವು ಯಾರೂ ಅರ್ಹರಲ್ಲ’ ಎಂದು ಬಿಗ್ ಬಾಸ್ ಖಡಕ್ ಆಗಿ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ