ಬಿಗ್ ಬಾಸ್ ಎಲಿಮಿನೇಷನ್: ಅಪಾಯದಲ್ಲಿ ಕಿರಣ್ ಶಾಸ್ತ್ರಿ, ಸಂಗೀತಾ ಭಟ್, ಲಿಖಿತ್

Updated on: Oct 04, 2026 | 2:46 PM

‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂಬ ಕೌತುಕ ಹೆಚ್ಚಿದೆ. ಸಂಗೀತಾ ಭಟ್, ಕಿರಣ್ ಶಾಸ್ತ್ರಿ ಹಾಗೂ ಲಿಖಿತ್ ಅವರು ಡೇಂಜರ್ ಝೋನ್​ನಲ್ಲಿ ಇದ್ದಾರೆ. ಆ ಪೈಕಿ ಒಬ್ಬರಿಗೆ ಈ ವಾರ ಗೇಟ್ ಪಾಸ್ ನೀಡಲಾಗುತ್ತದೆ. ಈ ಬಾರಿ ಎಲಿಮಿನೇಷನ್ ಸ್ವಲ್ಪ ಭಿನ್ನವಾಗಿ ಇರಲಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂಬ ಕೌತುಕ ಹೆಚ್ಚಿದೆ. ಸಂಗೀತಾ ಭಟ್, ಕಿರಣ್ ಶಾಸ್ತ್ರಿ ಹಾಗೂ ಲಿಖಿತ್ ಅವರು ಡೇಂಜರ್ ಝೋನ್​ನಲ್ಲಿ ಇದ್ದಾರೆ. ಆ ಪೈಕಿ ಒಬ್ಬರಿಗೆ ಈ ವಾರ ಗೇಟ್ ಪಾಸ್ ನೀಡಲಾಗುತ್ತದೆ. ಈ ಬಾರಿ ಎಲಿಮಿನೇಷನ್ ಸ್ವಲ್ಪ ಭಿನ್ನವಾಗಿ ಇರಲಿದೆ. ಆ ಬಗ್ಗೆ ಪ್ರೋಮೋ ಮೂಲಕ ಸುಳಿವು ನೀಡಲಾಗಿದೆ. ಇದು ವಿಮಾನಯಾನದ ಕಾನ್ಸೆಪ್ಟ್ ಆಗಿರುವುದರಿಂದ ಕಮಾಂಡೋಗಳ ಮಾದರಿಯಲ್ಲಿ ವೇಷ ಧರಿಸಿದವರು ಬಿಗ್ ಬಾಸ್ ಮನೆಗೆ ಬಂದು, ಎಲಿಮಿನೇಟ್ ಆಗುವ ಸದಸ್ಯರನ್ನು ಹೊರಗೆ ಕರೆದುಕೊಂಡು ಹೋಗಲಿದ್ದಾರೆ. ಸಂಗೀತಾ ಭಟ್, ಲಿಖಿತ್ ಮತ್ತು ಕಿರಣ್ ಶಾಸ್ತ್ರಿಗೆ ಢವಢವ ಶುರುವಾಗಿದೆ. ಎಲಿಮಿನೇಟ್ ಆದವರು ವೇದಿಕೆಗೆ ಬಂದು ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More