ಬಿಗ್ ಬಾಸ್ ಮನೆಯಲ್ಲಿ ಗಾನವಿಗೆ ಮೆಮೋರಿ ಲಾಸ್? ಟಾಸ್ಕ್ ಬಳಿಕ ಏನೂ ನೆನಪಿಲ್ಲ
‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಟಾಸ್ಕ್ ವೇಳೆ ಗಾನವಿ ಅವರಿಗೆ ಪೆಟ್ಟಾಗಿತ್ತು. ಆ ಬಳಿಕ ಅವರು ಮೆಮೋರಿ ಲಾಸ್ ಆದವರ ರೀತಿ ನಡೆದುಕೊಂಡಿದ್ದಾರೆ. ‘ಏನಾಯ್ತು? ನನಗೆ ಏನೂ ನೆನಪಿಗೆ ಬರುತ್ತಿಲ್ಲ. ಯಾವ ಟಾಸ್ಕ್? ನಾನು ಯಾವಾಗ ಒಳಗೆ ಹೋದೆ?’ ಎಂದೆಲ್ಲ ಅವರು ಪ್ರಶ್ನೆ ಮಾಡಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಟಾಸ್ಕ್ ವೇಳೆ ಗಾನವಿ ಅವರಿಗೆ ಪೆಟ್ಟಾಗಿತ್ತು. ಅದರಿಂದಾಗಿ ಅವರು ತುಂಬಾ ಬೇಸರ ಮಾಡಿಕೊಂಡರು. ತಮಗೆ ಪೆಟ್ಟಾಗುವ ರೀತಿಯಲ್ಲಿ ಬೇರೆ ಸ್ಪರ್ಧಿಗಳು ನಡೆದುಕೊಂಡಿದ್ದಕ್ಕೆ ಗಾನವಿ ಅವರು ಕಣ್ಣೀರು ಹಾಕಿದ್ದಾರೆ. ಅವರನ್ನು ಸಮಾಧಾನ ಮಾಡಲು ಮಂಜ ಪ್ರಯತ್ನಿಸಿದ್ದಾರೆ. ಆ ಬಳಿಕ ಗಾನವಿ ಅವರು ಮೆಮೋರಿ ಲಾಸ್ ಆದವರ ರೀತಿ ನಡೆದುಕೊಂಡಿದ್ದಾರೆ. ‘ಏನಾಯ್ತು? ನನಗೆ ಏನೂ ನೆನಪಿಗೆ ಬರುತ್ತಿಲ್ಲ. ಯಾವ ಟಾಸ್ಕ್? ನಾನು ಯಾವಾಗ ಒಳಗೆ ಹೋದೆ?’ ಎಂದೆಲ್ಲ ಅವರು ಪ್ರಶ್ನೆ ಮಾಡಿದ್ದಾರೆ. ‘ಆಡಿದ್ದು ನೆನಪು ಇಲ್ಲವಾ? ನನ್ನ ಜೊತೆ ಜಗಳ ಮಾಡಿದ್ದು ನೆನಪಿಲ್ಲವಾ?’ ಎಂದು ಪ್ರಶಾಂತ್ ಅವರು ಪ್ರಶ್ನಿಸಿದ್ದಾರೆ. ಅದಕ್ಕೆ ‘ಇಲ್ಲ’ ಎಂದು ಗಾನವಿ ಉತ್ತರಿಸಿದ್ದಾರೆ. ‘ಇವಳು ಯಾಕೆ ಈ ರೀತಿ ಮಾಡುತ್ತಿದ್ದಾಳೆ’ ಎಂದು ಪ್ರಶಾಂತ್ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
