AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಚ್ಚನ ಚಪ್ಪಾಳೆಗೆ ಅವಮಾನ ಮಾಡಿದ ಗಾನವಿ; ವೀಕೆಂಡ್​​ನಲ್ಲಿ ಕ್ಲಾಸ್ ಫಿಕ್ಸ್?

ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ವಿಚಾರವಾಗಿ ನಡೆದ ಜಗಳದ ವೇಳೆ ತಾಂಡವ್ ಪಡೆದಿದ್ದ ಕಿಚ್ಚನ ಚಪ್ಪಾಳೆಯನ್ನು ಗಾನವಿ ಫ್ಲ್ಯೂಕ್ ಎಂದಿರುವುದು ಸುದೀಪ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ನಿರೂಪಕರ ತೀರ್ಪನ್ನು ಹಗುರವಾಗಿ ಪರಿಗಣಿಸಿರುವ ಗಾನವಿಗೆ ಈ ವಾರದ ವಾರಾಂತ್ಯದ ಪಂಚಾಯಿತಿಯಲ್ಲಿ ಸುದೀಪ್ ಅವರಿಂದ ತಕ್ಕ ಪಾಠ ಸಿಗುವುದು ಖಚಿತವೆಂದು ಪ್ರೇಕ್ಷಕರು ಚರ್ಚಿಸುತ್ತಿದ್ದಾರೆ.

ಕಿಚ್ಚನ ಚಪ್ಪಾಳೆಗೆ ಅವಮಾನ ಮಾಡಿದ ಗಾನವಿ; ವೀಕೆಂಡ್​​ನಲ್ಲಿ ಕ್ಲಾಸ್ ಫಿಕ್ಸ್?
ಗಾನವಿ-ಸುದೀಪ್
ರಾಜೇಶ್ ದುಗ್ಗುಮನೆ
|

Updated on: Nov 11, 2026 | 7:33 AM

Share

ಮುಖ್ಯಾಂಶಗಳು

  • ಕಿಚ್ಚನ ಚಪ್ಪಾಳೆಗೆ ದೊರೆತ ಅಪಮಾನ
  • ಗಾನವಿ ಹೇಳಿಕೆಗೆ ಸುದೀಪ್ ಫ್ಯಾನ್ಸ್ ಗರಂ
  • ಡೈಮಂಡ್ ಟಾಸ್ಕ್ ಸಾಧನೆಗೆ ಸಿಕ್ಕಿತ್ತು ಮನ್ನಣೆ

ಬಿಗ್ ಬಾಸ್ ಕನ್ನಡ ಮನೆಯಲ್ಲಿ ನಿರೂಪಕ ಕಿಚ್ಚ ಸುದೀಪ್ ನೀಡುವ ‘ಕಿಚ್ಚನ ಚಪ್ಪಾಳೆ’ಗೆ ಬೆಲೆ ಮತ್ತು ಗೌರವವಿದೆ. ಸ್ಪರ್ಧಿಗಳು ವಾರವಿಡೀ ತೋರುವ ಅತ್ಯುತ್ತಮ ಆಟ, ಶ್ರಮ ಮತ್ತು ಪ್ರಾಮಾಣಿಕತೆಗೆ ಮನ್ನಣೆ ನೀಡುವ ಸಲುವಾಗಿ ಸುದೀಪ್ ಈ ಗೌರವವನ್ನು ನೀಡುತ್ತಾರೆ. ಅರ್ಹತೆ ಇಲ್ಲದ ಯಾವುದೇ ಪ್ರದರ್ಶನಕ್ಕೆ ಅವರು ಎಂದಿಗೂ ಚಪ್ಪಾಳೆ ತಟ್ಟುವುದಿಲ್ಲ ಎಂಬುದು ಈಗಾಗಲೇ ಹಲವು ಬಾರಿ ಸಾಬೀತಾಗಿದೆ. ಹೀಗಾಗಿ ಪ್ರತಿಯೊಬ್ಬ ಸ್ಪರ್ಧಿಗೂ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಳ್ಳುವುದು ಒಂದು ಹೆಮ್ಮೆಯ ವಿಷಯವಾಗಿರುತ್ತದೆ. ಆದರೆ, ಈ ಚಪ್ಪಾಳೆಗೆ ಗಾನವಿ ಅವಮಾನ ಮಾಡಿದ್ದಾರೆ.

ಈ ಮೊದಲು ನಡೆದಿದ್ದ ಅತ್ಯಂತ ಸವಾಲಿನ ಡೈಮಂಡ್ ಕದಿಯುವ ಟಾಸ್ಕ್‌ನಲ್ಲಿ ಸ್ಪರ್ಧಿ ತಾಂಡವ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ತಮ್ಮ ಜಾಣ್ಮೆ, ತಂತ್ರ ಹಾಗೂ ಶ್ರಮದ ಮೂಲಕ ಆಟವನ್ನು ಕಂಟ್ರೋಲ್ ಮಾಡಿ ವೀಕ್ಷಕರ ಮನ ಗೆದ್ದಿದ್ದರು. ಈ ಕಾರಣಕ್ಕಾಗಿಯೇ ಕಿಚ್ಚ ಸುದೀಪ್ ಅವರು ವಾರಾಂತ್ಯದ ಪಂಚಾಯ್ತಿಯಲ್ಲಿ ತಾಂಡವ್ ಅವರ ಆಟವನ್ನು ಬಹುವಾಗಿ ಮೆಚ್ಚಿಕೊಂಡು, ಕಿಚ್ಚನ ಚಪ್ಪಾಳೆ ನೀಡಿ ಗೌರವಿಸಿದ್ದರು. ಈ ಗೌರವ ತಾಂಡವ್ ಅವರ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚು ಮಾಡಿತ್ತು.

ಆದರೆ, ನವೆಂಬರ್ 10ರ ಎಪಿಸೋಡ್‌ನಲ್ಲಿ ನಾಮಿನೇಷನ್ ವಿಚಾರವಾಗಿ ಗಾನವಿ ಮತ್ತು ತಾಂಡವ್ ನಡುವೆ ದೊಡ್ಡ ಮಟ್ಟದ ಕಿರಿಕ್ ಉಂಟಾಗಿದೆ. ಇಬ್ಬರೂ ಪರಸ್ಪರ ವಾಗ್ದಾಳಿ ನಡೆಸಿಕೊಳ್ಳುವಾಗ ತಾಂಡವ್ ತಮಗೆ ಸಿಕ್ಕ ಕಿಚ್ಚನ ಚಪ್ಪಾಳೆಯನ್ನು ಉದಾಹರಣೆಯಾಗಿ ನೀಡಿ ತಮ್ಮ ಆಟವನ್ನು ಸಮರ್ಥಿಸಿಕೊಂಡಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಗಾನವಿ, ‘ಅದು ನಿನ್ನ ಆಟಕ್ಕೆ ಸಿಕ್ಕಿದ್ದಲ್ಲ, ಫ್ಲ್ಯೂಕ್‌ನಲ್ಲಿ ಸಿಕ್ಕ ಚಪ್ಪಾಳೆ’ ಎಂದು ಲಘುವಾಗಿ ಹೇಳಿಕೆ ನೀಡುವ ಮೂಲಕ ತಾಂಡವ್ ಅವರಿಗೆ ಸಿಕ್ಕ ಗೌರವವನ್ನು ತಳ್ಳಿಹಾಕಿದ್ದಾರೆ.

ಗಾನವಿ ನೀಡಿರುವ ಈ ಹೇಳಿಕೆ ಈಗ ಬಿಗ್ ಬಾಸ್ ವೀಕ್ಷಕರು ಹಾಗೂ ಕಿಚ್ಚ ಸುದೀಪ್ ಅವರ ಅಭಿಮಾನಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸುದೀಪ್ ಅವರು ಯಾರಿಗೆಂದರಲ್ಲಿ ಎಂದಿಗೂ ಫ್ಲ್ಯೂಕ್‌ನಲ್ಲಿ ಚಪ್ಪಾಳೆ ಕೊಡುವುದಿಲ್ಲ, ಪ್ರತಿಯೊಂದು ಮೆಚ್ಚುಗೆಯ ಹಿಂದೆಯೂ ನ್ಯಾಯಸಮ್ಮತವಾದ ಕಾರಣವಿರುತ್ತದೆ ಎಂದು ಫ್ಯಾನ್ಸ್ ಕಿಡಿಕಾರಿದ್ದಾರೆ. ಗಾನವಿ ಅವರ ಈ ಮಾತು ನೇರವಾಗಿ ನಿರೂಪಕ ಸುದೀಪ್ ಅವರ ನಿರ್ಧಾರವನ್ನೇ ಪ್ರಶ್ನಿಸಿದಂತಿದ್ದು, ಇದು ಅವರಿಗೆ ಮಾಡಿದ ಸ್ಪಷ್ಟ ಅವಮಾನ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುತ್ತಿದ್ದಾರೆ.

ಇದನ್ನೂ ಓದಿ: ಹಾಸನಾಂಬೆಯ ದರ್ಶನ ಪಡೆದ ಪ್ರಿಯಾ ಸುದೀಪ್; ಅತ್ತೆ ಸಂಪ್ರದಾಯ ಮುಂದುವರಿಸಿದ ಸೊಸೆ

ಈ ಮೊದಲು ಕೂಡ ಶನಿವಾರದ ಸಂಚಿಕೆಯಲ್ಲಿ ಸುದೀಪ್ ಅವರು ಮಾತನಾಡುತ್ತಿದ್ದಾಗ ಗಾನವಿ ಮಧ್ಯದಲ್ಲಿ ಮಾತನಾಡಿ ಅವರಿಗೆ ಗೌರವ ನೀಡದೆ ನಡೆದುಕೊಂಡಿದ್ದರು. ಆ ಸಂದರ್ಭದಲ್ಲಿ ಸುದೀಪ್ ಅವರಿಂದ ಗಾನವಿ ವೇದಿಕೆಯಲ್ಲೇ ಕಠಿಣವಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಇದೀಗ ಕಿಚ್ಚನ ಚಪ್ಪಾಳೆಯನ್ನೇ ‘ಫ್ಲ್ಯೂಕ್’ ಎಂದು ಕರೆದು ಸುದೀಪ್ ಅವರ ತೀರ್ಪನ್ನೇ ಹಗುರವಾಗಿ ಕಂಡಿರುವ ಗಾನವಿಗೆ ಮುಂಬರುವ ವಾರಾಂತ್ಯದ ಪಂಚಾಯಿತಿಯಲ್ಲಿ ಮತ್ತೊಮ್ಮೆ ಬಿಸಿ ಮುಟ್ಟುವುದು ಖಚಿತ ಎಂದು ವೀಕ್ಷಕರು ಚರ್ಚಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಇಂದು ಈ ರಾಶಿಯವರು ಇತರರಿಂದ ಸಾಲ ಪಡೆಯದಿರಿ
ಇಂದು ಈ ರಾಶಿಯವರು ಇತರರಿಂದ ಸಾಲ ಪಡೆಯದಿರಿ
ಮಲ್ಲೇಶ್ವರಂ ಮಂತ್ರಿ ಮಾಲ್ ಮೆಟ್ರೋ ನಿಲ್ದಾಣದಲ್ಲಿ ಜೀವ ಭಯ
ಮಲ್ಲೇಶ್ವರಂ ಮಂತ್ರಿ ಮಾಲ್ ಮೆಟ್ರೋ ನಿಲ್ದಾಣದಲ್ಲಿ ಜೀವ ಭಯ
ಸಂಸತ್ ಭವನದಲ್ಲಿ ಮಹನೀಯರ ಫೋಟೋ ಜತೆ ಟಿಪ್ಪು ಫೋಟೋ ಇಡಬೇಕು: ವಾಟಾಳ್ ನಾಗರಾಜ್
ಸಂಸತ್ ಭವನದಲ್ಲಿ ಮಹನೀಯರ ಫೋಟೋ ಜತೆ ಟಿಪ್ಪು ಫೋಟೋ ಇಡಬೇಕು: ವಾಟಾಳ್ ನಾಗರಾಜ್
ರಾಜ್​ ಸಂಬಂಧಿ ಮನೆಯಲ್ಲಿ ಸ್ಫೋಟ: ಸ್ಥಳ ಮಹಜರು ವೇಳೆ ಹೈಡ್ರಾಮಾ
ರಾಜ್​ ಸಂಬಂಧಿ ಮನೆಯಲ್ಲಿ ಸ್ಫೋಟ: ಸ್ಥಳ ಮಹಜರು ವೇಳೆ ಹೈಡ್ರಾಮಾ
ಎನ್​ಡಿಎ ಪರೀಕ್ಷೆಯಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭದ್ರಾವತಿಯ ಶ್ರೇಯಾ
ಎನ್​ಡಿಎ ಪರೀಕ್ಷೆಯಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭದ್ರಾವತಿಯ ಶ್ರೇಯಾ
ಬರ ಪರಿಹಾರದಲ್ಲಿ ವ್ಯತ್ಯಾಸ: ಆಕ್ರೋಶ; ಸರ್ಕಾರಕ್ಕೆ ಚೆಕ್ ಬರೆದ ಅನ್ನದಾತರು
ಬರ ಪರಿಹಾರದಲ್ಲಿ ವ್ಯತ್ಯಾಸ: ಆಕ್ರೋಶ; ಸರ್ಕಾರಕ್ಕೆ ಚೆಕ್ ಬರೆದ ಅನ್ನದಾತರು
ರೈಲಿನಡಿ ಬಿದ್ದು ಸಾಯುತ್ತಿದ್ದ ಮಹಿಳೆಯ ಜೀವ ಕಾಪಾಡಿದ ಆರ್​ಪಿಎಫ್​ ಸಿಬ್ಬಂದಿ
ರೈಲಿನಡಿ ಬಿದ್ದು ಸಾಯುತ್ತಿದ್ದ ಮಹಿಳೆಯ ಜೀವ ಕಾಪಾಡಿದ ಆರ್​ಪಿಎಫ್​ ಸಿಬ್ಬಂದಿ
ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿ ಎಂದು ಹಾಸನಾಂಬೆಗೆ ಹರಕೆ ಹೊತ್ತ ಅಭಿಮಾನಿ
ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿ ಎಂದು ಹಾಸನಾಂಬೆಗೆ ಹರಕೆ ಹೊತ್ತ ಅಭಿಮಾನಿ
ಕೆಎಸ್‌ಆರ್‌ಟಿಸಿ ಲಗೇಜ್ ಶುಲ್ಕ ಹೆಚ್ಚಳ: ಇಂದಿನಿಂದಲೇ ಹೊಸ ದರ ಜಾರಿ
ಕೆಎಸ್‌ಆರ್‌ಟಿಸಿ ಲಗೇಜ್ ಶುಲ್ಕ ಹೆಚ್ಚಳ: ಇಂದಿನಿಂದಲೇ ಹೊಸ ದರ ಜಾರಿ
ಬಿಗ್ ಬಾಸ್ ಕನ್ನಡ: ತಾಂಡವ್, ಗಗನ್ ಸ್ನೇಹದಲ್ಲಿ ಬಿರುಕು; ಇನ್ಮುಂದೆ ಬೇರೆ ಆಟ
ಬಿಗ್ ಬಾಸ್ ಕನ್ನಡ: ತಾಂಡವ್, ಗಗನ್ ಸ್ನೇಹದಲ್ಲಿ ಬಿರುಕು; ಇನ್ಮುಂದೆ ಬೇರೆ ಆಟ