ಬಿಗ್ ಬಾಸ್ ಟಾಪ್ 5 ಯಾರು? ಗೆಲ್ಲೋದು ಯಾರು? ಭವಿಷ್ಯ ನುಡಿದ ಸೋನಿಕಾ
ಸೋನಿಕಾ ಗೌಡ ‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಿಂದ ಎಲಿಮಿನೇಟ್ ಆಗಿದ್ದಾರೆ. ದೊಡ್ಮನೆಯಿಂದ ಹೊರಬಂದ ಬಳಿಕ ಟಿವಿ9 ಜತೆ ಮಾತನಾಡಿರುವ ಅವರು ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಸೀಸನ್ನಲ್ಲಿ ಯಾರು ಟಾಪ್ 5 ಸ್ಪರ್ಧಿಗಳಾಗಿರುತ್ತಾರೆ ಎಂಬ ಪ್ರಶ್ನೆಗೆ ಸೋನಿಕಾ ಉತ್ತರಿಸಿದ್ದಾರೆ.
ನಟಿ ಸೋನಿಕಾ ಗೌಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಿಂದ ಎಲಿಮಿನೇಟ್ ಆಗಿದ್ದಾರೆ. ದೊಡ್ಮನೆಯಿಂದ ಹೊರಬಂದ ಬಳಿಕ ಟಿವಿ9 ಜೊತೆ ಮಾತನಾಡಿರುವ ಅವರು ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಸೀಸನ್ನಲ್ಲಿ ಯಾರು ಟಾಪ್ 5 ಸ್ಪರ್ಧಿಗಳಾಗಿರುತ್ತಾರೆ ಹಾಗೂ ಯಾರು ವಿನ್ ಆಗುತ್ತಾರೆ ಎಂಬ ಪ್ರಶ್ನೆಗೆ ಸೋನಿಕಾ ಉತ್ತರಿಸಿದ್ದಾರೆ. ‘ಗಗನ್ ಚಿನ್ನಪ್ಪ, ಧನುಷ್, ತಾಂಡವ್ ರಾಮ್ ಮತ್ತು ಸೌಂದರ್ಯಾ ಶೆಟ್ಟಿ ಅವರು ಚೆನ್ನಾಗಿ ಆಟ ಆಡುತ್ತಿದ್ದಾರೆ. ಇವರೇ ಟಾಪ್ 4 ಸ್ಪರ್ಧಿಗಳಾಗಿರುತ್ತಾರೆ. ಇನ್ನುಳಿದ ಎಲ್ಲರೂ ಅಷ್ಟಕ್ಕಷ್ಟೇ. ನಾನು ಆಟವನ್ನು ಒಳಗಡೆಯಿಂದ ನೋಡಿರುವುದರಿಂದ ಗೆಲ್ಲಬೇಕಾಗಿರುವುದು ಧನುಷ್’ ಎಂದು ಸೋನಿಕಾ ಅವರು ಹೇಳಿದ್ದಾರೆ. ಹಣಕ್ಕಾಗಿ ತಾವು ಬಿಗ್ ಬಾಸ್ ಮನೆಗೆ ಹೋಗಿರಲಿಲ್ಲ. ಕಿಚ್ಚನ ಚಪ್ಪಾಳೆ ತೆಗೆದುಕೊಳ್ಳಬೇಕು ಎಂಬ ಆಸೆ ತಮಗೆ ಇತ್ತು ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
