ಬಿಗ್ ಬಾಸ್ ಕನ್ನಡ: ತಾಂಡವ್, ಗಗನ್ ಸ್ನೇಹದಲ್ಲಿ ಬಿರುಕು; ಇನ್ಮುಂದೆ ಬೇರೆ ಆಟ
‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ತಾಂಡವ್ ರಾಮ್ ಮತ್ತು ಗಗನ್ ಚಿನ್ನಪ್ಪ ಆರಂಭದಿಂದಲೂ ಸ್ನೇಹಿತರಾಗಿದ್ದಾರೆ. ಆದರೆ ಈ ಶೋನಲ್ಲಿ ಸ್ನೇಹಕ್ಕೆ ಗಂಟುಬಿದ್ದು ಆಟ ಮುಂದುವರಿಸುವುದು ಬಹಳ ಕಷ್ಟ. ತಾಂಡವ್ ರಾಮ್ ಮತ್ತು ಗಗನ್ ಚಿನ್ನಪ್ಪ ಅವರಿಗೂ ಸಹ ಈಗ ಸ್ನೇಹದ ಅಗ್ನಿ ಪರೀಕ್ಷೆ ಆಗುತ್ತಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋಗೆ ಬಂದಿರುವ ತಾಂಡವ್ ರಾಮ್ ಹಾಗೂ ಗಗನ್ ಚಿನ್ನಪ್ಪ ಅವರು ಆರಂಭದಿಂದಲೂ ಸ್ನೇಹಿತರಾಗಿದ್ದಾರೆ. ಆದರೆ ಈ ಶೋನಲ್ಲಿ ಸ್ನೇಹಕ್ಕೆ ಗಂಟುಬಿದ್ದು ಆಟ ಮುಂದುವರಿಸುವುದು ಕಷ್ಟ. ತಾಂಡವ್ ರಾಮ್ ಮತ್ತು ಗಗನ್ ಚಿನ್ನಪ್ಪ ಅವರಿಗೆ ಕೂಡ ಸ್ನೇಹದ ಅಗ್ನಿ ಪರೀಕ್ಷೆ ಆಗುತ್ತಿದೆ. ದಿನ ಕಳೆದಂತೆಲ್ಲ ಸ್ನೇಹವನ್ನು ನಿಭಾಯಿಸುವುದು ಕಷ್ಟ ಆಗುತ್ತಿದೆ. ಈಗ ಅವರಿಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿದೆ. ‘ನಾನು ಗಗನ್ ಚಿನ್ನಪ್ಪ ಅವರಿಗಿಂತ ಸರ್ವಶ್ರೇಷ್ಠ’ ಎಂದು ತಾಂಡವ್ ರಾಮ್ ಅವರು ಹೇಳಿಕೊಂಡಿದ್ದಾರೆ. ‘ಹಿಂದಿನಿಂದ ಮಾತನಾಡೋದು ಒಳ್ಳೆಯದಲ್ಲ. ನೀವು ನನ್ನ ಸ್ನೇಹಿತನೇ ಆಗಿದ್ದರೆ ಪ್ರಶಾಂತ್ ಬಂದಾಗ ನನಗೆ ನೇರವಾಗಿ ಹೇಳಬೇಕಿತ್ತು’ ಎಂದು ಗಗನ್ ಅವರು ಮಾತಿಗೆ ಮಾತು ಬೆಳೆಸಿದ್ದಾರೆ. ನವೆಂಬರ್ 10ರ ಬಿಗ್ ಬಾಸ್ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
