Bigg Boss OTT Kannada: ರಿಯಲ್​ ಲೈಫ್​ನಲ್ಲಿ ಸಾನ್ಯಾ ಅಯ್ಯರ್​ ಲವ್​ ಮಾಡಿದ ಹುಡುಗನಿಂದ ಆಗಿತ್ತು ದೈಹಿಕ ಶೋಷಣೆ

| Updated By: ಮದನ್​ ಕುಮಾರ್​

Updated on: Aug 07, 2022 | 7:56 PM

Sanya Iyer | Deepa Iyer: ‘ಬಿಗ್​ ಬಾಸ್​ ಒಟಿಟಿ ಕನ್ನಡ’ ಸ್ಪರ್ಧಿ ಸಾನ್ಯಾ ಅಯ್ಯರ್​ ಅವರು ಜೀವನದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಿದ್ದಾರೆ. ಆ ಘಟನೆಗಳ ಬಗ್ಗೆ ತಾಯಿ ದೀಪಾ ಅಯ್ಯರ್​ ವಿವರಿಸಿದ್ದಾರೆ.

ನಟಿ ಸಾನ್ಯಾ ಅಯ್ಯರ್​ (Sanya Iyer) ಅವರ ಖಾಸಗಿ ಬದುಕಿನ ಅನೇಕ ಸತ್ಯಗಳು ಹೊರಬರುತ್ತಿವೆ. ‘ಪುಟ್ಟಗೌರಿ ಮದುವೆ’ ಸೀರಿಯಲ್​ ಮೂಲಕ ಫೇಮಸ್​ ಆದ ಅವರು ಈಗ ‘ಬಿಗ್​ ಬಾಸ್​ ಒಟಿಟಿ ಕನ್ನಡ ಸೀಸನ್​ 1’ (Bigg Boss OTT Kannada) ಶೋ ಮೂಲಕ ಇನ್ನಷ್ಟು ಖ್ಯಾತಿ ಪಡೆಯುತ್ತಿದ್ದಾರೆ. ಸಾನ್ಯಾ ಅಯ್ಯರ್​ ಜೀವನದ ಅನೇಕ ಕಹಿ ಘಟನೆಗಳ ಬಗ್ಗೆ ಅವರ ತಾಯಿ ದೀಪಾ ಅಯ್ಯರ್ (Deepa Iyer)​ ಮಾತನಾಡಿದ್ದಾರೆ. ಮಗಳು ಲವ್​ ಮಾಡಿದ್ದ ಹುಡುಗ ದೈಹಿಕವಾಗಿ ಶೋಷಣೆ ಮಾಡುತ್ತಿದ್ದ ಎಂಬುದನ್ನು ಅವರು ಬಾಯ್ಬಿಟ್ಟಿದ್ದಾರೆ.