ಒನ್‌ವೇಲಿ ಬಂದ ಬೈಕ್ ಸವಾರ: ತಡೆದಿದ್ದಕ್ಕೆ ಅವಾಚ್ಯ ಶಬ್ದಗಳಿಂದ ಕಾನ್ಸ್‌ಟೇಬಲ್​ಗೆ ನಿಂದನೆ​​

|

Updated on: Jun 13, 2023 | 10:53 PM

ಒನ್‌ವೇನಲ್ಲಿ ಬಂದಿದ್ದ ಬೈಕ್ ಸವಾರನನ್ನು ಕಾನ್ಸ್‌ಟೇಬಲ್​ ತಡೆದಿದ್ದಕ್ಕೆ ಸವಾರ ಅವಾಚ್ಯ ಶಬ್ದಗಳಿಂದ ನಿಂದಿಸಿರುವಂತಹ ಘಟನೆ ನಗರದ ಹೆಚ್‌ಎಎಲ್‌ನ ಖಾಸಗಿ ಆಸ್ಪತ್ರೆಯ ಮುಂಭಾಗದಲ್ಲಿ ನಡೆದಿದೆ.

ಬೆಂಗಳೂರು: ಒನ್‌ವೇನಲ್ಲಿ ಬಂದಿದ್ದ ಬೈಕ್ ಸವಾರನನ್ನು ಕಾನ್ಸ್‌ಟೇಬಲ್​ (Constable) ತಡೆದಿದ್ದಕ್ಕೆ ಸವಾರ ಅವಾಚ್ಯ ಶಬ್ದಗಳಿಂದ ನಿಂದಿಸಿರುವಂತಹ ಘಟನೆ ನಗರದ ಹೆಚ್‌ಎಎಲ್‌ನ ಖಾಸಗಿ ಆಸ್ಪತ್ರೆಯ ಮುಂಭಾಗದಲ್ಲಿ ನಡೆದಿದೆ. ಇತರೆ ವಾಹನ ಸವಾರರು ವಿಡಿಯೋ ಸೆರೆ ಹಿಡಿದಿದ್ದು, ಸದ್ಯ ಎಲ್ಲೆಡೆ ವೈರಲ್​ ಆಗಿದೆ. ತೆರೆಗೆ ಕಟ್ಟುತ್ತೇನೆ ಎಂದು ಹೇಳಿ ಬೈಕ್​ ಸವಾರ ದರ್ಪ ಮೆರೆದಿದ್ದಾರೆ. ನಡುರಸ್ತೆಯಲ್ಲಿ ಬೈಕ್‌ ನಿಲ್ಲಿಸಿ ಸಂಚಾರಕ್ಕೂ ತೊಂದರೆ ಕೊಟ್ಟಿದ್ದಾನೆ. ಹೆಚ್‌ಎಎಲ್‌ ಠಾಣೆಗೆ ಸಂಚಾರಿ ಪೊಲೀಸ್‌ ಕಾನ್ಸ್‌ಟೇಬಲ್‌ ದೂರು ನೀಡಿದ್ದು, ಸವಾರನನ್ನು ವಶಕ್ಕೆ ಪಡೆದು ಬೈಕ್‌ ಸೀಜ್ ಮಾಡಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.