ಗೇಮ್ ಚೇಂಜರ್ಸ್ ಅಂತ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ನೇಮ್ ಚೇಂಜರ್ ಆಗಿದೆ: ಪ್ರಿಯಾಂಕ್ ಖರ್ಗೆ

|

Updated on: Sep 07, 2023 | 3:16 PM

ಹೆಸರುಗಳನ್ನು ಚೇಂಜ್ ಮಾಡುವ ಬದಲು ಜನರ ಹಣೆಬರಹ ಚೇಂಜ್ ಮಾಡಲಿ ಎಂದ ಖರ್ಗೆ ಈಗಲೂ ಶೇಕಡ 74ರಷ್ಟು ಭಾರತೀಯರಿಗೆ ಪೌಷ್ಟಿಕ ಆಹಾರ ಸಿಗುತ್ತಿಲ್ಲ ಅಂತ ಸರ್ಕಾರದ ವರದಿಯೇ ಹೇಳುತ್ತದೆ, ಮೊದಲು ಆ ಸ್ಥಿತಿಯನ್ನು ಬಿಜೆಪಿ ಸರ್ಕಾರ ಚೇಂಜ್ ಮಾಡಲಿ ಅಂತ ಹೇಳಿದರು.

ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಮ್ಮನ್ನು ಟೀಕಿಸುತ್ತಿರುವ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು. ಬಿಜೆಪಿ (BJP) ಮತ್ತು ಆರ್ ಎಸ್ ಎಸ್ ನವರಿಗೆ (RSS) ಭಾರತ ಇತಿಹಾಸದ ಬಗ್ಗೆ ಗೊತ್ತಿದೆಯಾ? ಇಂಡಿಯಾ ಮತ್ತು ಭಾರತ್ ಅಂತ ಹೆಸರು ಯಾಕೆ ಬಂತು ಅನ್ನೋದು ಅವರಿಗೆ ಗೊತ್ತಿದೆಯಾ? ವಾಟ್ಸ್ಯಾಪ್ ಯೂನಿವರ್ಸಿಸಿಟಿ ವಿದ್ಯಾರ್ಥಿಗಳಿಗೆ ಅದು ಹೇಗೆ ಗೊತ್ತಿರಲು ಸಾಧ್ಯ ಅಂತ ಅವರು ವ್ಯಂಗ್ಯವಾಡಿದರು. ಗೇಮ್ ಚೇಂಜರ್ಸ್ ಅಂತ ಜನರನ್ನು ನಂಬಿಸುತ್ತಾ ಅಧಿಕಾರಕ್ಕೆ ಬಂದವರು ನೇಮ್ ಚೇಂಜ್ ಮಾಡುತ್ತಿದ್ದಾರೆ, ಹೆಸರುಗಳನ್ನು ಚೇಂಜ್ ಮಾಡುವ ಬದಲು ಅವರು ಜನರ ಹಣೆಬರಹ ಚೇಂಜ್ ಮಾಡಲಿ ಎಂದರು. ಈಗಲೂ ಶೇಕಡ 74ರಷ್ಟು ಭಾರತೀಯರಿಗೆ ಪೌಷ್ಟಿಕ ಆಹಾರ ಸಿಗುತ್ತ್ತಿಲ್ಲ ಅಂತ ಸರ್ಕಾರದ ವರದಿಯೇ ಹೇಳುತ್ತದೆ, ಮೊದಲು ಆ ಸ್ಥಿತಿಯನ್ನು ಬಿಜೆಪಿ ಸರ್ಕಾರ ಚೇಂಜ್ ಮಾಡಲಿ ಅಂತ ಖರ್ಗೆ ಹೇಳಿದರು. ಅಖಂಡ ಭಾರತ ಅಂತ ಬಿಜೆಪಿ ಅಂತ ಹೇಳುತ್ತದೆ, ಅದರೆ ಅರುಣಾಚಲ ಪ್ರದೇಶದಲ್ಲಿ ಚೀನಾ ನಮ್ಮ ಹಳ್ಳಿಗಳನ್ನು ಅತಿಕ್ರಮಿಸಿಕೊಳ್ಳುತ್ತಿದೆ, ಅದನ್ನು ಚೇಂಜ್ ಮಾಡಲಿ ಎಂದು ಖರ್ಗೆ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ