ರಾಮ ಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯರನ್ನು ಆಹ್ವಾನಿಸದೆ ಬಿಜೆಪಿ ರಾಜಕಾರಣ ಮಾಡುತ್ತಿದೆ: ಎನ್ ಚಲುವರಾಯಸ್ವಾಮಿ

|

Updated on: Jan 02, 2024 | 2:55 PM

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರೆಂಬ ವದಂತಿಗೆ ಪ್ರತಿಕ್ರಿಯೆ ನೀಡಿದ ಸಚಿವ ಚಲುವರಾಯಸ್ವಾಮಿ, ಅವರು ಎಲ್ಲಿಂದಾದರೂ ಸ್ಪರ್ಧಿಸಲಿ ಅದು ತಮ್ಮ ಪಕ್ಷಕ್ಕೆ ಸಂಬಂಧಪಟ್ಟ ವಿಚಾರವಲ್ಲ, ಮತ್ತು ಅವರು ಎಲ್ಲಿಂದ ಸ್ಪರ್ಧಿಸಬೇಕೆಂದು ಹೇಳುವ ಅವಶ್ಯಕತೆ ತನಗಿಲ್ಲ ಎಂದರು.

ಬೆಂಗಳೂರು: ರಾಮ ಮಂದಿರ ವಿಷಯದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ, ಒಂದು ರಾಜ್ಯದ ಮುಖ್ಯಮಂತ್ರಿಯನ್ನು ಅವರು ರಾಮ ಮಂದಿರ ಪ್ರಾಣ ಪ್ರತಿಷ್ಠೆ (Ram Temple Consecration Ceremony) ಕಾರ್ಯಕ್ರಮಕ್ಕೆ ಆಹ್ವಾನಿಸುವುದಿರೋದು ರಾಜಕಾರಣವಲ್ಲದೆ ಮತ್ತೇನು ಎಂದು ರಾಜ್ಯ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ (N Cheluvarayaswamy) ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ರಾಮ ಕೇವಲ ಬಿಜೆಪಿಯವರಿಗೆ ಮಾತ್ರ ಮೀಸಲೇ? ಅವರಿಗಿಂತ ಜಾಸ್ತಿ ಕಾಂಗ್ರೆಸ್ ಪಕ್ಷದವರು (Congress party leaders) ರಾಮನನ್ನು ಪೂಜಿಸುತ್ತಾರೆ, ಆರಾಧಿಸುತ್ತಾರೆ ಎಂದರು. ರಾಜಕಾರಣ ಮಾಡಲು ಮತ್ತು ಹಿಂದೂಗಳ ವೋಟು ಸೆಳೆಯಲು ಮಾತ್ರ ಬಿಜೆಪಿ ರಾಮನಾಮ ಜಪಿಸುತ್ತದೆ, ಯಾಕೆಂದರೆ ಜನರ ಒಲವು ಗಳಿಸಲು ಬಿಜೆಪಿ ನಾಯಕರಿಗಿರೋದು ಅದೊಂದೇ ದಾರಿ, ಅಭಿವೃದ್ಧಿ ಕಾರ್ಯಗಳನ್ನು ಮಾಡುವುದು ಅವರಿಗೆ ಗೊತ್ತಿಲ್ಲ, ಅವರಲ್ಲಿ ಯಾವುದೇ ಜನಪರ ಯೋಜನೆ ಇಲ್ಲ ಎಂದು ಚಲುವರಾಯಸ್ವಾಮಿ ಹೇಳಿದರು. ಬರ ಪರಿಹಾರ ನಿಧಿ ಮತ್ತು ರಾಜ್ಯಕ್ಕೆ ನೀಡುವ ಅನುದಾನಗಳ ಬಗ್ಗೆ ಕೇಂದ್ರ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಇಲ್ಲ ಎಂದು ಹೇಳಿದ ಸಚಿವ, ಅನುದಾನ ಬಿಡುಗಡೆ ಮಾಡದಿರುವುದಕ್ಕೆ ಯಾವುದೇ ಕಾರಣ ಅವರು ನೀಡೋದಿಲ್ಲ, ಚರ್ಚೆಗೂ ಕರೆಯಲ್ಲ ಎಂದರು.

.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ