ಸೋತಿದ್ದಕ್ಕೆ ಬಿಕ್ಕಿ ಬಿಕ್ಕಿ ಅತ್ತ ಅಭಿಮಾನಿಗಳು, ಇದನ್ನು ನೋಡಿ ಗದ್ಗದಿತರಾದ ಶ್ರೀರಾಮುಲು: ವಿಡಿಯೋ ವೈರಲ್

Updated on: May 16, 2023 | 11:51 AM

ಶ್ರೀರಾಮುಲು ಸೋಲಿಗೆ ಅಭಿಮಾನಿಗಳು ಬಿಕ್ಕಿ‌ ಬಿಕ್ಕಿ ಅತ್ತಿದ್ದಾರೆ. ಇನ್ನು ಅಭಿಮಾನಿಗಳ ಕಣ್ಣೀರು ಹಾಕುತ್ತಿರುವುದನ್ನು ನೋಡಿ ಶ್ರೀರಾಮುಲು ಸಹ ಭಾವುಕರಾಗಿದ್ದಾರೆ.

ಬಳ್ಳಾರಿ: ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಘಟಾನುಘಟಿ ನಾಯಕರು ಸೋಲುಕಂಡಿದ್ದಾರೆ. ಅದರಲ್ಲೂ 12 ಹಾಲಿ ಸಚಿವರು ಪರಾಭವಗೊಂಡಿದ್ದಾರೆ. ಈ ಪಟ್ಟಿಯಲ್ಲಿ ಸಚಿವ ಶ್ರೀರಾಮುಲು ಇದ್ದಾರೆ. ಹೌದು…ಮೊಳಕಾಲ್ಮೂರು ಕ್ಷೇತ್ರ ಬಿಟ್ಟು ಬಳ್ಳಾರಿ ಗ್ರಾಮಾತರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಶ್ರೀರಾಮುಲು ಕಾಂಗ್ರೆಸ್​ನ ನಾಗೇಂದ್ರ ವಿರುದ್ಧ ಮಂಡಿಯೂರಿದ್ದಾರೆ. ಇದು ಶ್ರೀರಾಮುಲು ಅವರ ಅಭಿಮಾನಿಗಳಲ್ಲಿ ಆಘಾತವನ್ನುಂಟು ಮಾಡಿದೆ. ಶ್ರೀರಾಮುಲು ಸೋಲಿಗೆ ಅಭಿಮಾನಿಗಳು ಬಿಕ್ಕಿ‌ ಬಿಕ್ಕಿ ಅತ್ತಿದ್ದಾರೆ. ಇನ್ನು ಅಭಿಮಾನಿಗಳ ಕಣ್ಣೀರು ಹಾಕುತ್ತಿರುವುದನ್ನು ನೋಡಿ ಶ್ರೀರಾಮುಲು ಸಹ ಭಾವುಕರಾಗಿದ್ದಾರೆ. ಶ್ರೀರಾಮುಲು ಕಾಲು ಹಿಡಿದು ಕೊಂಡು ನಿಮಗೆ ಅನ್ಯಾಯ ಮಾಡಿಬಿಟ್ಟೆವು ಎಂದು ಅಭಿಮಾನಿಗಳು ಅತ್ತಿದ್ದಾರೆ. ಅಭಿಮಾನಿಗಳನ್ನ ಸಮಾಧಾನ ಮಾಡುವಲ್ಲಿ ಶ್ರೀರಾಮುಲು ಕೂಡ ಕ್ಷಣಕಾಲ ಗದ್ಗದಿತರಾಗಿ ಕಣ್ಣಿರು ಹಾಕಿದ್ದು, ಇದೀಗ ಈ ವಿಡಿಯೋ ವೈರಲ್ ಭಾರೀ ವೈರಲ್‌ ಆಗುತ್ತಿದೆ.

Published on: May 16, 2023 11:51 AM
Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More