ಸಿದ್ದರಾಮಯ್ಯ ಸಿಎಂ ಆದರೆ ಬರ ಯಡಿಯೂರಪ್ಪ ಆದರೆ ಅತಿವೃಷ್ಟಿ ಅನ್ನೋದು ನಾಣ್ಣುಡಿಯಾಗಿದೆ: ಆರಗ ಜ್ಞಾನೇಂದ್ರ
ಶಾಸಕ ಎನ್ ಹೆಚ್ ಕೋನರೆಡ್ಡಿ, ಜ್ಞಾನೇಂದ್ರ ಅದ್ಹೇಗೆ ಅಂಥ ಹೋಲಿಕೆ ಮಾಡುತ್ತಾರೆ? ಬರಕ್ಕೂ ಸಿದ್ದರಾಮಯ್ಯ ಏನು ಸಂಬಂಧ ಎಂದಾಗ ಜ್ಞಾನೇಂದ್ರ, ಕೋನರೆಡ್ಡಿಯವರೇ ಹೆಚ್ಚು ಆವೇಶ ತೋರಿಸಬೇಡಿ ನಿಮ್ಮನ್ನು ಆದಷ್ಟು ಬೇಗ ಮಂತ್ರಿ ಮಾಡುವಂತೆ ನಾವು ಸಹ ಶಿಫಾರಸ್ಸು ಮಾಡುತ್ತೇವೆ ಎನ್ನುತ್ತಾರೆ.
ಬೆಳಗಾವಿ: ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ (Araga Jnanendra) ಸದನದಲ್ಲಿ ಮಾತಾಡುವಾಗ ಎಡವಟ್ಟುಗಳನ್ನು ಮಾಡೋದು ಹೊಸದೇನಲ್ಲ. ಇವತ್ತು ಅಧಿವೇಶನದಲ್ಲಿ ಮಾತಾಡುವಾಗ ಅವರು ರಾಜ್ಯ ಭೀಕರ ಬರದಿಂದ ತತ್ತರಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ಹೆಚ್ಚು ಸಂವೇದನಾಶೀಲವಾಗಬೇಕಿದೆ ಅಂತ ಹೇಳುವ ಭರದಲ್ಲಿ; ಸಿದ್ದರಾಮಯ್ಯ (Siddaramaiah) ಮುಖ್ಯಮಂತ್ರಿಯಾದಾಗ ಬರ ಯಡಿಯೂರಪ್ಪ (BS Yediyurappa) ಮುಖ್ಯಮಂತ್ರಿಯಾದಾಗ ಅತಿವೃಷ್ಟಿ ಅನ್ನೋದು ನಾಣ್ಣುಡಿಯಾಗಿಬಿಟ್ಟಿದೆ ಅಂತ ಹೇಳುತ್ತಾರೆ. ಅವರ ಮಾತಿನಿಂದ ಕೆರಳುವ ಕಾಂಗ್ರೆಸ್ ನಾಯಕರು ಎದ್ದು ನಿಂತು ಕೂಗಾಡಲಾರಂಭಿಸುತ್ತಾರೆ. ಶಾಸಕ ಎನ್ ಹೆಚ್ ಕೋನರೆಡ್ಡಿ (NH Konareddy), ಜ್ಞಾನೇಂದ್ರ ಅದ್ಹೇಗೆ ಅಂಥ ಹೋಲಿಕೆ ಮಾಡುತ್ತಾರೆ? ಬರಕ್ಕೂ ಸಿದ್ದರಾಮಯ್ಯ ಏನು ಸಂಬಂಧ ಎಂದಾಗ ಜ್ಞಾನೇಂದ್ರ, ಕೋನರೆಡ್ಡಿಯವರೇ ಹೆಚ್ಚು ಆವೇಶ ತೋರಿಸಬೇಡಿ ನಿಮ್ಮನ್ನು ಆದಷ್ಟು ಬೇಗ ಮಂತ್ರಿ ಮಾಡುವಂತೆ ನಾವು ಸಹ ಶಿಫಾರಸ್ಸು ಮಾಡುತ್ತೇವೆ ಎನ್ನುತ್ತಾರೆ. ಅವರ ಮಾತಿನಿಂದ ಮತ್ತಷ್ಟು ರೊಚ್ಚಿಗೇಳುವ ಕೋನರೆಡ್ಡಿ, ಅಧ್ಯಕ್ಷರೇ ಶಾಸಕರ ಮಾತನ್ನು ಕಡತದಿಂದ ತೆಗೆಯಿರಿ ಅಂತ ಪಟ್ಟು ಹಿಡಿಯುತ್ತಾರೆ. ತಾನು ಬಳಸಿದ ಪದ ಅಸಂಸದೀಯ ಅಲ್ಲವೆಂದು ಜ್ಞಾನೇಂದ್ರ ಹೇಳಿದರೂ ಸಭಾಧ್ಯಕ್ಷ ಕಡತಕ್ಕೆ ಸೇರಿಸಲ್ಲ ಅನ್ನುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ