AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿ ಕಾರ್ಟೂನ್ ಹಬ್ಬಕ್ಕೆ ವಿಭಿನ್ನವಾಗಿ ಶುಭ ಕೋರಿದ ಮರಳು ಶಿಲ್ಪ ಕಲಾವಿದ

ಉಡುಪಿ ಕಾರ್ಟೂನ್ ಹಬ್ಬಕ್ಕೆ ವಿಭಿನ್ನವಾಗಿ ಶುಭ ಕೋರಿದ ಮರಳು ಶಿಲ್ಪ ಕಲಾವಿದ

ಪ್ರಜ್ವಲ್ ಅಮೀನ್​, ಉಡುಪಿ
| Updated By: ಗಂಗಾಧರ​ ಬ. ಸಾಬೋಜಿ

Updated on: Dec 08, 2023 | 3:11 PM

ಉಡುಪಿ ಜಿಲ್ಲೆಯ ಕುಂದಾಪುರದ ಕುಂದೇಶ್ವರದ ದೀಪೋತ್ಸವ ನಡೆಯುತ್ತಿದೆ. ಈ ದೀಪೋತ್ಸವದಲ್ಲಿ ಕಳೆದ 10 ವರ್ಷದಿಂದ ಕಾರ್ಟೂನ್ ಹಬ್ಬ ಕೂಡ ನಡೆಯುತ್ತದೆ. ಈ ಬಾರಿಯ ಈ ಕಾರ್ಯಕ್ರಮಕ್ಕೆ ಉಡುಪಿಯ ಮರಳು ಶಿಲ್ಪ ಕಲಾವಿದ ಹರೀಶ್ ಸಾಗ ಮತ್ತು ತಂಡದವರು ವಿಭಿನ್ನ ಮರಳು ಶಿಲ್ಪವನ್ನು ರಚನೆ ಮಾಡುವ ಮೂಲಕ ವಿಭಿನ್ನವಾಗಿ ಶುಭ ಕೋರಿದ್ದಾರೆ. 

ಉಡುಪಿ, ಡಿಸೆಂಬರ್​​ 08: ಜಿಲ್ಲೆಯ ಕುಂದಾಪುರದ ಕುಂದೇಶ್ವರದ ದೀಪೋತ್ಸವ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕಳೆದ 10 ವರ್ಷದಿಂದ ಕಾರ್ಟೂನ್ ಹಬ್ಬದ ಮೂಲಕ ಸತೀಶ್ ಆಚಾರ್ಯ ವ್ಯಂಗ್ಯ ಚಿತ್ರಗಳ ಪ್ರದರ್ಶನ ನಡೆಸಿಕೊಂಡು ಬರುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಉಡುಪಿಯ ಮರಳು ಶಿಲ್ಪ (sand sculpture) ಕಲಾವಿದ ಹರೀಶ್ ಸಾಗ ತಂಡ ವಿಭಿನ್ನವಾಗಿ ಶುಭ ಕೋರಿದ್ದಾರೆ. ಹಳೆ ಅಳಿವೆ ಕಡಲ ತೀರ ಕೋಟೇಶ್ವರದಲ್ಲಿ ಈ ವಿಭಿನ್ನ ಮರಳು ಶಿಲ್ಪವನ್ನು ರಚನೆ ಮಾಡಲಾಗಿದೆ. ಕಾರ್ಟೂನ್ ಮೂಲಕ ರಾಜಕೀಯ ವಿಡಂಬನೆ, ಪ್ರಸಕ್ತ ಬೆಳವಣಿಗೆಗಳನ್ನು ತೆರೆದಿಡಲಾತ್ತದೆ. ಕಾರ್ಟೂನ್ ಹಬ್ಬ ದೀಪೋತ್ಸವಕ್ಕೆ ಪೂರಕವಾಗಿ ಮರಳಶಿಲ್ಪ ರಚನೆ ಮಾಡಲಾಗಿದೆ. ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ನಿಟ್ಟೆ ಸುಮಾರು ಐದು ಗಂಟೆಗಳನ್ನು ತೆಗೆದುಕೊಂಡು ಮರಳಶಿಲ್ಪ ರಚಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.