AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಲಗ್ಗೆರೆಯಲ್ಲಿ ಅನಾಮತ್ತಾಗಿ ಉರುಳಿದ ಸೆಲ್ ಪೋನ್ ಟವರ್, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಇಲ್ಲ!

ಬೆಂಗಳೂರಿನ ಲಗ್ಗೆರೆಯಲ್ಲಿ ಅನಾಮತ್ತಾಗಿ ಉರುಳಿದ ಸೆಲ್ ಪೋನ್ ಟವರ್, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಇಲ್ಲ!

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 08, 2023 | 4:44 PM

ಮೊಬೈಲ್ ಟವರ್ ಗಳಿಂದ ಹೊರಬೀಳುವ ಇಎಮ್ ಎಫ್ ತರಂಗಗಳು ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಣಾಮ ಬೀರುತ್ತವೆ ಅಂತ ತಜ್ಞರು ಎಚ್ಚರಿಸಿದರೂ ಜನ ಮೊಬೈಲ್ ಕಂಪನಿಗಳು ನೀಡುವ ಆಕರ್ಷಕ ಮೊತ್ತದ ಆಮಿಶಕ್ಕೊಳಗಾಗಿ ತಮ್ಮ ಮನೆಯ ಮೇಲೆ ಅದನ್ನು ಸ್ಥಾಪಿಸಲು ಒಪ್ಪಿಗೆ ನೀಡುತ್ತಾರೆ. ಅಸಲಿಗೆ ಟವರ್ ಗಳನ್ನು ಜನವಸತಿ ಪ್ರದೇಶಗಳಲ್ಲಿ ಸ್ಥಾಪಿಸಲೇಬಾರದು ಅಂತ ತಜ್ಞರು ಅಭಿಪ್ರಾಯಪಡುತ್ತಾರೆ.

ಬೆಂಗಳೂರು: ಇಂಥ ಘಟನೆಗಳು ನಡೆದಾಗಲೇ ಜನರಿಗೆ ಮೊಬೈಲ್ ಫೋನ್ ಟವರ್ ಗಳ (cell phone tower) ಅಪಾಯದ ಅರಿವಾಗುತ್ತದೆ. ಮೊಬೈಲ್ ಫೋನಲ್ಲಿ ಸೆರೆಯಾಗಿರುವ ಈ ದೃಶ್ಯ ನೋಡಿ ಮಾರಾಯ್ರೇ. ನಗರದ ಲಗ್ಗೆರೆ (laggere) ಏರಿಯಾದ ಪಾರ್ವತಿನಗರದ ಮನೆಯೊಂದರ ಮೇಲೆ ಅನಾಮತ್ತಾಗಿ ಸ್ಥಾಪಿಸಲಾಗಿದ್ದ ಮೊಬೈಲ್ ಪೋನ್ ಟವರ್ ಧರೆಗುರುಳಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ (no casualties). ಸ್ಥಳೀಯರು ಹೇಳುವ ಪ್ರಕಾರ ಟವರನ್ನು ಸುಮಾರು 30 ವರ್ಷಗಳ ಹಿಂದೆ ಇಲ್ಲಿ ಸ್ಥಾಪಿಸಲಾಗಿತ್ತು. ಅದಕ್ಕೆ ಮಜಬೂತಾದ ಅಡಿಪಾಯ ಇರದ ಕಾರಣ ಉರುಳಿ ಬಿದ್ದಿದೆ ಎಂದು ಅವರು ಹೇಳುತ್ತಾರೆ. ಅದನ್ನು ಭದ್ರ ಅಡಿಪಾಯ ಹಾಕಿ ಎರೆಕ್ಟ್ ಮಾಡಿದ್ದರೆ ಅನಾಹುತ ಸಂಭವಿಸುತ್ತಿರಲಿಲ್ಲ. ಟವರ್ ಜೊತೆ ಅದರ ಅಡಿಯಲ್ಲಿದ್ದ ಮನೆಯೂ ಧಾರಾಶಾಹಿಯಾಗಿದೆ. ಟವರ್ ಎರಕ್ಟ್ ಆಗಿದ್ದ ಮನೆಯ ಪಕ್ಕದ ಸೈಟಿನವರು ಮನೆ ಕಟ್ಟಿಸುವ ಉದ್ದೇಶದಿಂದ ಜೆಸಿಬಿ ಮೂಲಕ ಸ್ಥಳವನ್ನು ಸ್ವಚ್ಛಗೊಳಿಸುವಾಗ ಗೋಡೆಯಲ್ಲಿ ಬಿರುಕುಂಟಾಗಿದೆಯಂತೆ. ಅದನ್ನು ಮಣ್ಣಿನ ಮೂಲಕ ಕವರ್ ಮಾಡಿ ಸಪೋರ್ಟ್ ನೀಡುವ ಪ್ರಯತ್ನ ಕೂಡ ಜನ ಮಾಡಿದ್ದಾರೆ. ಅದರೆ ಸುಮಾರು 20 ಟನ್ ಭಾರದ ಟವರ್ ಹೊರುವುದು ಶಿಥಿಲಗೊಂಡಿದ್ದ ಗೋಡೆಗೆ ಸಾಧ್ಯವಾಗದೆ ಅದು ಉರುಳಿಬಿದ್ದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ