ಮೊಬೈಲ್ ಟವರ್ಗಳನ್ನೇ ಟಾರ್ಗೇಟ್ ಮಾಡಿ RRU ಕಾರ್ಡ್ಗಳ ಕಳವು; ದೂರು ನೀಡಿದ ಇಂಡಸ್ ಟವರ್ ಕಂಪನಿ
Bengaluru news: ಬೆಂಗಳೂರು ನಗರದಲ್ಲಿ ಮೊಬೈಲ್ ಟವರ್ಗಳನ್ನೇ ಟಾರ್ಗೆಟ್ ಮಾಡಿಕೊಂಡು ಆರ್‌ಆರ್‌ಯು ಕಾರ್ಡ್ಗಳನ್ನು ಕಳ್ಳತನ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರು: ಮೊಬೈಲ್ ಟವರ್ಗಳನ್ನೇ (Mobile Tower) ಟಾರ್ಗೆಟ್ ಮಾಡಿಕೊಂಡು ಆರ್‌ಆರ್‌ಯು ಕಾರ್ಡ್ಗಳನ್ನು (RRU Cards) ಕಳ್ಳತನ ಮಾಡಿದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಟವರ್ ಬಳಿ RRU ಕಾರ್ಡ್ ಕಳವು (RRU Card Theft) ಮಾಡಲು ತೆರಳುವ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದ್ದು, ಈ ಬಗ್ಗೆ ಇಂಡಸ್ ಟವರ್ ಕಂಪೆನಿಯು (Indus Tower Company) ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಿಸಿ ಕ್ಯಾಮಾರ ದೃಶ್ಯಾವಳಿ ಆಧರಿಸಿ ಆರೋಪಿಗಳ ಬಂಧನಕ್ಕೆ ತನಿಖೆ ಆರಂಭಿಸಿದ್ದಾರೆ.
ಕೆಂಗೇರಿ, ನಾಗರಬಾವಿ, ಚಂದ್ರಲೇಔಟ್, ಪದ್ಮನಾಭನಗರ ಸೇರಿದಂತೆ ಹಲವೆಡೆ ಕಡೆಗಳಲ್ಲಿನ ಮೊಬೈಲ್ ಟವರ್ಗಳನ್ನು ಟಾರ್ಗೆಟ್ ಮಾಡಿಕೊಂಡ ಖದೀಮರು 10 ಲಕ್ಷಕ್ಕೂ ಹೆಚ್ಚು ಮೌಲ್ಯದ RRU (Remote Radio Unit)ಗಳನ್ನು ಕಳವು ಮಾಡಿದ್ದಾರೆ. ಆರ್‌ಆರ್‌ಯು ಕಾರ್ಡ್ಗಳ ಕಳ್ಳತನಕ್ಕೆ ತೆರಳುತ್ತಿರುವ ಖದೀಮರ ಚಲನವಲನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದರ ಕಾಪಿ ಟಿವಿ9ಗೆ ಲಭ್ಯವಾಗಿದೆ.
ಇದನ್ನೂ ಓದಿ: ಪ್ರೀತಿಸಿ ಮೋಸ ಮಾಡಿದ ಬಿಜೆಪಿ ಕಾರ್ಯಕರ್ತ: ಚಿಕಿತ್ಸೆ ಪಡೆಯುವ ವೇಳೆ ಡೆತ್ ನೋಟ್ ಬರೆದಿಟ್ಟು ಬಾಲಕಿ ನಿಧನ
ಏನಿದು ರಿಮೋಟ್ ರೇಡಿಯೋ ಯುನಿಟ್? (Remote Radio Unit)
ಮೊಬೈಲ್ ಟವರ್ನ ಟ್ರಾನ್ಸ್‌ಸಿವರ್ ಅನ್ನು ರಿಮೋಟ್ ರೇಡಿಯೋ ಯುನಿಟ್ (RRU) ಎಂದು ಕರೆಯಲಾಗುತ್ತದೆ. ಇದು ಮೊಬೈಲ್ ಫೋನ್‌ಗೆ ನೆಟ್‌ವರ್ಕ್ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಂದೇಶಗಳು ಮತ್ತು ಕರೆಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಕ್ರಿಯಗೊಳಿಸುತ್ತದೆ. ಒಂದೊಮ್ಮೆ ರಿಮೋಟ್ ರೇಡಿಯೋ ಯುನಿಟ್ ಸಂಪರ್ಕ ಕಡಿತಗೊಂಡರೆ ನಿರ್ದಿಷ್ಟ ಪ್ರದೇಶದಲ್ಲಿ ಸಂವಹನಕ್ಕೆ ಅಡಚಣೆ ಉಂಟಾಗುತ್ತದೆ.
ಇದನ್ನೂ ಓದಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಹಾಕಿದವನು ಯಾರು? ಆತನ ಕ್ರೈಂ ಹಿಸ್ಟರಿ ಇಲ್ಲಿದೆ ನೋಡಿ
ಆರ್‌ಆರ್‌ಯು ಕನಿಷ್ಠ 1.75 ಲಕ್ಷ ರೂಪಾಯಿ ವೆಚ್ಚವಾಗುತ್ತದೆ ಮತ್ತು ಹೆಚ್ಚಿನ ಆವರ್ತನದ ರೇಡಿಯೊ ತರಂಗಗಳನ್ನು ಸ್ವೀಕರಿಸುವ ಮತ್ತು ಕಳುಹಿಸುವ ಅತ್ಯಾಧುನಿಕ ಸಾಧನವಾಗಿದೆ. ಅವುಗಳನ್ನು ದೂರಸಂಪರ್ಕ ವಲಯದಲ್ಲಿ ಮಾತ್ರ ಬಳಸಬಹುದಾಗಿರುತ್ತದೆ ಮತ್ತು ಬೇರೆ ಯಾವುದೇ ರೀತಿಯ ಬಳಕೆಗಳಿಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುವುದಿಲ್ಲ. ಸದ್ಯ ಖದೀಮರು ಕದ್ದಿರುವ ಆರ್ಆರ್ಯುಗಳನ್ನು ಯಾವ ಉದ್ದೇಶಕ್ಕಾಗಿ ಕಳ್ಳತನ ಮಾಡಿದ್ದಾರೆ ಎಂದು ತಿಳಿದುಬಂದಿಲ್ಲ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:31 pm, Sun, 15 January 23