Karnataka Budget Session: ಬಹಳ ದಿನಗಳ ನಂತರ ಸದನದಲ್ಲಿ ಮಾತಾಡಿದ ಬಸನಗೌಡ ಪಾಟೀಲ್ ಸಭಾಧ್ಯಕ್ಷರ ಕಾಲೆಳೆದರು!
ವಿಷಯದ ಮೇಲೆ ಅನಿಸಿಕೆ ಹೇಳಿದ ಯತ್ನಾಳ್ ಸ್ಪೀಕರ್ ಅವರನ್ನು ಕುರಿತು ಎರಡು ದಿನಗಳ ತಾವು ಸಹ ವಿಜಯಪುರದ ದ್ರಾಕ್ಷಿ ತಿಂದಿರಬಹುದು ಅಂತ ಕಾಲೆಳೆಯುತ್ತಾರೆ.
ಬೆಂಗಳೂರು: ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ (Basangouda Patil Yatnal) ಅವರು ಈ ಬಾರಿಯ ಬಜೆಟ್ ಅಧಿವೇಶನದಲ್ಲಿ (Budget Session) ಮಾತಾಡಿದ್ದೇ ಇಲ್ಲ. ಯಾಕೆ ಅಂತ ನಮ್ಮೆಲ್ಲರಿಗೆ ಗೊತ್ತಿರುವ ವಿಷಯವೇ. ಮಾಧ್ಯಮಗಳ ಮುಂದೆ ಇಲ್ಲವೇ ಸಾರ್ವಜನಿಕ ಸಭೆಗಳಲ್ಲಿ ಮಾತಾಡುವಾಗ ಅವರ ಧಾಟಿ ಬೇರೆ ಇರುತ್ತದೆ. ತಮ್ಮ ಪಕ್ಷದವರಾಲೀ ಅಥವಾ ವಿರೋಧ ಪಕ್ಷದವರಾಗಲೀ ಯತ್ನಾಳ್ ರಿಂದ ಕಟು ಟೀಕೆಗೆ ಗುರಿಯಾಗುತ್ತಾರೆ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಎಚ್ಚರಿಕೆಯ ನಂತರ ಅವರು ತಮ್ಮ ನಾಲಗೆ ಮೇಲೆ ಕಡಿವಾಣ ಹಾಕಿದ್ದರು. ಇಂದು ಸದನದಲ್ಲಿ ವಿಜಯಪುರ ಜಿಲ್ಲೆ ದ್ರಾಕ್ಷಿ ಬೆಳೆ ಮತ್ತು ವೈನ್ ತಯಾರಿಸುವ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಎದ್ದು ನಿಂತು ಮಾತಾಡಿದ ಅವರು ವಿಷಯದ ಮೇಲೆ ಅನಿಸಿಕೆ ಹೇಳಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಅವರನ್ನು ಕುರಿತು ಎರಡು ದಿನಗಳ ತಾವು ಸಹ ವಿಜಯಪುರದ ದ್ರಾಕ್ಷಿ ತಿಂದಿರಬಹುದು ಅಂತ ಕಾಲೆಳೆಯುತ್ತಾರೆ. ಆ ಕಾರಣಕ್ಕಾಗೇ ವಿಷಯವನ್ನು ಅಷ್ಟು ಆಸಕ್ತಿಯಿಂದ ಕೇಳುತ್ತಿರುವುದು ಎಂದು ಕಾಗೇರಿ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ