ಬಿಲಾಲ್ ಮಸೀದಿ ನಿರ್ಮಾಣಕ್ಕೆ ಭೂಮಿಪೂಜೆ: ಮುಸ್ಲಿಮರ ಟೋಪಿ ಧರಿಸಿ ಮತಬೇಟೆಗಿಳಿದ ಬಿಜೆಪಿ ಶಾಸಕ ರಾಜುಗೌಡ
ಬಿಲಾಲ್ ಮಸೀದಿ ನಿರ್ಮಾಣಕ್ಕೆ ಶಾಸಕ ರಾಜುಗೌಡ ಭೂಮಿ ಪೂಜೆ ನೆರವೇರಿಸಿದ್ದಾರೆ. ಮುಸ್ಲಿಮರ ಟೋಪಿ ಧರಿಸಿ ಕೋಮು ಸೌಹಾರ್ದತೆ ಸಂದೇಶ ಸಾರಿದ್ದಾರೆ.
ಯಾದಗಿರಿ: ಯಾದಗಿರಿ ಜಿಲ್ಲೆಯಲ್ಲಿ ಚುನಾವಣಾ ಕಣ ರಂಗೇರಿದೆ. ಮುಸ್ಲಿಂ ಟೋಪಿ ಧರಿಸಿ ಸುರಪುರ ಮತಕ್ಷೇತ್ರದ ಬಿಜೆಪಿ ಶಾಸಕ ರಾಜುಗೌಡ ಅಲ್ಪಸಂಖ್ಯಾತರ ಮತಬೇಟೆಗಿಳಿದಿದ್ದಾರೆ. ಸುರಪುರ ತಾಲೂಕಿನ ಕೊಡೇಕಲ್ ಗ್ರಾಮದಲ್ಲಿ ಮುಸ್ಲಿಂ ಟೋಪಿ ಧರಿಸಿ ಬಿಲಾಲ್ ಮಸೀದಿ ನಿರ್ಮಾಣಕ್ಕೆ ಶಾಸಕ ರಾಜುಗೌಡ ಭೂಮಿ ಪೂಜೆ ನೆರವೇರಿಸಿದ್ದಾರೆ. ಭೂಮಿ ಪೂಜೆ ಸಲ್ಲಿಸಿ ಕೋಮು ಸೌಹಾರ್ದತೆ ಸಂದೇಶ ಸಾರಿದ್ದಾರೆ. ತಾನು ಮುಸ್ಲಿಂ ಟೋಪಿ ಧರಿಸಿ, ಮುಸ್ಲಿಂ ಸಮುದಾಯದವರಿಗೆ ಕೇಸರಿ ಶಾಲು ಹೊದಿಸಿ ಭಾತೃತ್ವ ಭಾವನೆ ಮೆರೆದಿದ್ದಾರೆ.
ಇನ್ನು ಈ ವೇಳೆ ಮಾತನಾಡಿದ ಅವರು, ನಾನು ಹಿಂದೂ ಆಗಿದ್ದರೂ ಮುಸ್ಲಿಂ ಟೋಪಿ ಹಾಕಿಕೊಳ್ಳುತ್ತೇನೆ. ಈತ ಒಬ್ಬ ಮುಸ್ಲಿಂ ಆಗಿ ಕೇಸರಿ ಶಾಲು ಹಾಕಿಕೊಳ್ತಾನೆ. ನಮ್ಮ ಬಳಿ ಯಾವುದೇ ಜಾತಿ-ಧರ್ಮ, ಭೇದ-ಭಾವ ಇಲ್ಲ. ನಮ್ಮ ಮುಂದಿನ ಪೀಳಿಗೆ ಇದೇ ಸಂಪ್ರದಾಯ ಮುಂದುವರಿಸಬೇಕು ಎಂದರು.
Published on: Mar 22, 2023 10:29 AM