ಸದನದಲ್ಲಿ ಬಿಜೆಪಿ ಅಹೋರಾತ್ರಿ ಧರಣಿ; ಅಶೋಕ ವಾದ್ಯ, ಸಿಟಿ ರವಿ ತಾಳಕ್ಕೆ ಹೆಜ್ಜೆ ಹಾಕಿದ ಶಾಸಕ ಪ್ರಭು ಚವ್ಹಾಣ್
ಮುಡಾ ಹಗರಣದ ಕುರಿತು ಚರ್ಚೆಗೆ ಅವಕಾಶ ನೀಡದ ಹಿನ್ನಲೆ ವಿಧಾನಸಭೆ ಒಳಗಡೆಯೇ ಬಿಜೆಪಿ ಹಾಗೂ ಜೆಡಿಎಸ್ ಅಹೋರಾತ್ರಿ ಧರಣಿ ನಡೆಸಿದೆ. ವಿಧಾನಸೌಧದ ಕಾರಿಡಾರ್ಗಳಲ್ಲಿ ಕುಳಿತು ವಿಠ್ಠಲ ಭಜನೆ ಮಾಡಿದ್ದು, ಈ ವೇಳೆ ವಿಪಕ್ಷ ನಾಯಕ ಆರ್ ಅಶೋಕ ವಾದ್ಯ ಮತ್ತು ಸಿಟಿ ರವಿ ತಾಳಕ್ಕೆ ಶಾಸಕ ಪ್ರಭು ಚವ್ಹಾಣ್ ಹೆಜ್ಜೆ ಹಾಕಿದರು.
ಬೆಂಗಳೂರು, ಜು.24: ಮುಂಗಾರು ಅಧಿವೇಶನ ಶುರುವಾಗಿದೆ. ಅದರಂತೆ ಇಂದು(ಬುಧವಾರ) ಸದನದಲ್ಲಿ ಮುಡಾ ಹಗರಣದ ಕುರಿತು ಚರ್ಚೆಗೆ ಅವಕಾಶ ನೀಡದ ಹಿನ್ನಲೆ ವಿಧಾನಸಭೆ ಒಳಗಡೆಯೇ ಬಿಜೆಪಿ ಹಾಗೂ ಜೆಡಿಎಸ್ ಅಹೋರಾತ್ರಿ ಧರಣಿ ನಡೆಸಿದೆ. ಇದರ ಜೊತೆಗೆ ವಿಧಾನಸಭೆಯಿಂದ ತಾಳ ಬಡಿಯುತ್ತಾ ಭಜನೆ ಮಾಡುತ್ತಲೇ ವಿಧಾನ ಪರಿಷತ್ಗೆ ತೆರಳಿದ ಬಿಜೆಪಿ ವಿಧಾನ ಪರಿಷತ್ ಸದಸ್ಯರು, ವಿಧಾನಸೌಧದ ಕಾರಿಡಾರ್ಗಳಲ್ಲೂ ವಿಠ್ಠಲ ಭಜನೆ ಮಾಡಿದರು. ವಿಪಕ್ಷ ನಾಯಕ ಆರ್ ಅಶೋಕ ವಾದ್ಯ ಮತ್ತು ಸಿಟಿ ರವಿ ತಾಳಕ್ಕೆ ಶಾಸಕ ಪ್ರಭು ಚವ್ಹಾಣ್ ಹೆಜ್ಜೆ ಹಾಕಿದರು. ಇನ್ನು ಭಜನೆ ಮೂಲಕವೇ ಕಾಂಗ್ರೆಸ್ ಸರ್ಕಾರಕ್ಕೆ ಲೆವಡಿ ಮಾಡಿದ ಬಿಜೆಪಿ, ‘ಸಮಾಜವಾದ ಅಂತಾರೆ ಮಜಾವನ್ನೇ ಮಾಡ್ತಾರೆ. ಸಮಾಜವಾದ ಅಂತಾರೆ ದಲಿತರ ಹಣವನ್ನು ನುಂಗ್ತಾರೆ ಎಂದು ಭಜನೆ ಮೂಲಕ ಕಾಂಗ್ರೆಸ್ ಸರ್ಕಾರಕ್ಕೆ ಟಾಂಗ್ ಕೊಟ್ಟರು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos