ಅಡುಗೆ ಅನಿಲ ಸಿಲಿಂಡರ್ ಬೆಲೆ ರೂ. 450 ಆದಾಗ ಬೀದಿಗಿಳಿದು ಪ್ರತಿಭಟನೆ ನಡೆಸಿದ ಬಿಜೆಪಿಯ ಮಹಾನ್ ನಾಯಕಿಯರು ಈಗೆಲ್ಲಿ? ಕುಸುಮಾ, ಕಾಂಗ್ರೆಸ್ ಕಾರ್ಯಕರ್ತೆ

Arun Kumar Belly

|

Updated on: Mar 02, 2023 | 4:26 PM

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಸಿಲಿಂಡರ್ ಬೆಲೆ ರೂ 450 ಆಗಿದ್ದಕ್ಕೆ ಬೀದಿಗಿಳಿದು ಪ್ರತಿಭಟನೆ ನಡೆಸಿದ ಆ ಬಿಜೆಪಿ ಮಹಾನ್ ನಾಯಕಿಯರು ಈಗೆಲ್ಲಿದ್ದಾರೋ? ಅಂತ ಕುಸುಮಾ ಕೇಳಿದರು.

ಬೆಂಗಳೂರು: ಅಡುಗೆ ಅನಿಲ ಸಿಲಿಂಡರ್ (cooking gas cylinder) ಬೆಲೆ ನಿನ್ನೆಯಿಂದ ರೂ. 50 ಜಾಸ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಮಹಿಳಾ ಕಾಂಗ್ರೆಸ್ ಘಟಕದ ಕಾರ್ಯಕರ್ತೆಯರು ಕೆಪಿಸಿಸಿ ಮಹಿಳಾ ವಿಭಾಗದ ಅಧ್ಯಕ್ಷೆ ಪುಷ್ಪಾ ಅಮರನಾಥ್ (Pushpa Amarnath) ನೇತೃತ್ವದಲ್ಲಿ ನಗರದ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದರು. ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡಿದ ಕಾರ್ಯಕರ್ತೆ ಕುಸುಮಾ (Kusuma), ಬಿಜೆಪಿ ಸರ್ಕಾರದಲ್ಲಿ ಸಿಲಿಂಡರ್ ಬೆಲೆ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಜನ ಸಾಮಾನ್ಯರ ಕೈಗೆಟುಕದಂತಾಗಿವೆ, ಆ ಪಕ್ಷದವರು ಬಿಜೆಪಿಯೇ ಭರವಸೆ ಅಂತ ಅವರು ಹೇಳಿಕೊಂಡು ತಿರುಗುತ್ತಿದ್ದಾರೆ, ಅಸಲಿಗೆ ಅದು ಬಿಜೆಪಿಯೇ ಭರವಸೆ ಅಲ್ಲ ಬಿಜೆಪಿಯೇ ‘ಭಾರ’ವಸೆ ಎಂದು ಹೇಳಿದರು. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಸಿಲಿಂಡರ್ ಬೆಲೆ ರೂ 450 ಆಗಿದ್ದಕ್ಕೆ ಬೀದಿಗಿಳಿದು ಪ್ರತಿಭಟನೆ ನಡೆಸಿದ ಬಿಜೆಪಿಯ ಆ ಮಹಾನ್ ನಾಯಕಿಯರು ಈಗೆಲ್ಲಿದ್ದಾರೋ? ಅಂತ ಕುಸುಮಾ ಕೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada