ಬೆಂಗಳೂರು: ಒತ್ತುವರಿ ಕಾರ್ಯಾಚರಣೆ ವಿರೋಧಿಸಿ ದಂಪತಿ ನಡೆಸಿದ ಬ್ಲ್ಯಾಕ್ ಮೇಲೆ ತಂತ್ರ ಫಲನೀಡಲಿಲ್ಲ
ಒತ್ತುವರಿ ತೆರವು ಕಾರ್ಯಾಚರಣದ ಭಾಗವಾಗಿ ಬಿ ಬಿ ಎಮ್ ಪಿ ಸಿಬ್ಬಂದಿ ಮತ್ತು ಪೊಲಸರು ಅಲ್ಲಿಗೆ ಹೋದಾಗ ಮನೆಯನ್ನು ಕೆಡವಿದರೆ ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಳ್ತೀವಿ ಅಂತ ಹೆದರಿಸಿದ್ದಾರೆ
ಬೆಂಗಳೂರು: ಕೆ ಆರ್ ಪುರಂ ಗಾಯತ್ರಿ ಲೇಔಟ್ ನಿವಾಸಿಗಳಾಗಿರುವ ದಂಪತಿ ನಡೆಸಿದ ಬ್ಲ್ಯಾಕ್ ಮೇಲ್ (Blackmail) ತಂತ್ರ ಫಲಿಸಲಿಲ್ಲ ಮಾರಾಯ್ರೇ. ಆಸಲಿಗೆ ನಡೆದಿರೋದು ಏನು ಅಂದರೆ ದಂಪತಿ ಸದರಿ ಏರಿಯಾದಲ್ಲಿರುವ ರಾಜಾಕಾಲುವೆ (SWD) ಜಾಗವನ್ನು ಒತ್ತುವರಿ ಮಾಡಿಕೊಂಡು ಮನೆ ಕಟ್ಟಿಕೊಂಡಿದ್ದಾರೆ. ಒತ್ತುವರಿ ತೆರವು ಕಾರ್ಯಾಚರಣದ ಭಾಗವಾಗಿ ಬಿ ಬಿ ಎಮ್ ಪಿ (BBMP) ಸಿಬ್ಬಂದಿ ಮತ್ತು ಪೊಲಸರು ಅಲ್ಲಿಗೆ ಹೋದಾಗ ಮನೆಯನ್ನು ಕೆಡವಿದರೆ ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಳ್ತೀವಿ ಅಂತ ಹೆದರಿಸಿದ್ದಾರೆ. ಪೊಲೀಸರು, ಅಗ್ನಿಶಾಮಕ ದಳ ಮತ್ತು ಬಿಬಿಎಂಪಿ ಸಿಬ್ಬಂದಿ ಉಪಾಯದಿಂದ ಆದರೆ ಸಿನಿಮೀಯ ರೀತಿಯಲ್ಲಿ ಅವರ ಪ್ರಯತ್ನವನ್ನು ವ್ಯರ್ಥಗೊಳಿಸಿದ್ದಾರೆ. ವಿಡಿಯೋ ರೋಚಕವಾಗಿದೆ!