ತುಮಕೂರು, ಸೆ.30: ತಮಿಳುನಾಡಿಗೆ ಕಾವೇರಿ(Cauvery) ನೀರು ಹರಿಸುತ್ತಿರುವ ವಿಚಾರ ಕುರಿತು ಸರ್ಕಾರ ಹೇಳಿಕೆ ಕೊಡುವಾಗ ಎಚ್ಚರಿಕೆಯಿಂದ ಕೊಡಬೇಕಿತ್ತು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(Basavaraj Bommai) ಹೇಳಿದರು. ಸರ್ಕಾರ ತನ್ನ ಸ್ಥಾನ ಮತ್ತು ಅಧಿಕಾರಕ್ಕೆ ಹೆದರಿಕೊಂಡಿದ್ದರೆ, ಅದು ಸುಪ್ರೀಂಕೋರ್ಟ್ ಮೇಲೆ ಯಾವ ರೀತಿಯ ಪರಿಣಾಮ ಬಿರುತ್ತೆ ಇವರಿಗೆ ಗೊತ್ತಿಲ್ಲ. ಇನ್ನು ಸರ್ಕಾರಕ್ಕೆ ಕಾವೇರಿ ಗಲಾಟೆ ಪರಿಸ್ಥಿತಿ, ಬದ್ಧತೆ ಬಗ್ಗೆ ಗೊತ್ತಿಲ್ಲದೆ ಇಂತಹ ಹೇಳಿಕೆ ನೀಡುವುದರಿಂದ ಕರ್ನಾಟಕದ ಜನತೆಗೆ ಪೆಟ್ಟು ಬೀಳುತ್ತಿದೆ. ಹೀಗಾಗಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಮಾತನಾಡುವಾಗ ಬಹಳ ಜವಾಬ್ದಾರಿಯುತವಾಗಿ ಹೇಳಿಕೆ ನೀಡಲಿ ಎಂದು ಕಿವಿ ಮಾತು ಹೇಳುವುದಕ್ಕೆ ಇಷ್ಟಪಡುತ್ತೇನೆ ಎಂದರು.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ