ಬೆಂಗಳೂರಲ್ಲಿ ಶುಕ್ರವಾರ ನಡುರಾತ್ರಿ ಮದ್ಯದ ಅಮಲೇರಿಸಿಕೊಂಡವನಿಗೆ ಪಿತ್ತವೂ ನೆತ್ತಿಗೇರಿದ ಕ್ಷಣದ ವಿಡಿಯೋ!
ಕೊನೆಗೊಂದು ಹಂತದಲ್ಲಿ ಅವನು ತನ್ನ ಸ್ಕೂಟರ್ ನಡು ರಸ್ತೆಯಲ್ಲಿ ಮತ್ತು ಕಾರಿಗೆ ಅಡ್ಡಲಾಗಿ ಪಾರ್ಕ್ ಮಾಡಿ ಕಾರಿನಲ್ಲಿದ್ದವರ ಬಳಿಗೆ ಬರುತ್ತಾನೆ. ಗ್ಲಾಸ್ ಗಳನ್ನು ಓಪನ್ ಮಾಡ್ಬೇಡ ಅಂತ ಕಾರಿನಲ್ಲಿದ್ದವನೊಬ್ಬ ಹೇಳೋದು ಕೇಳಿಸುತ್ತದೆ. ಕಾರಿನ ಬಳಿಗೆ ಬಂದವನು ಸುಮ್ಮನೆ ವಾಪಸ್ಸು ಹೋಗುತ್ತಾನೆ. ಅಷ್ಟು ಮಾತ್ರ ವಿಡಿಯೋ ಕ್ಲಿಪ್ಪಿಂಗ್ ನಿಂದ ಗೊತ್ತಾಗುತ್ತದೆ. ಅಂದಹಾಗೆ ಈ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು: ನಗರದ ರಸ್ತೆಗಳಲ್ಲಿ ಮಧ್ಯರಾತ್ರಿ ವೇಳೆ ಮದ್ಯದ ಅಮಲೇರಿಸಿಕೊಂಡವರಿಂದ (inebriated) ಇಂಥ ಕೃತ್ಯಗಳೂ ನಡೆಯುತ್ತವೆ. ಬೆಂಗಳೂರಿನ ಕೋರಮಂಗಲದಲ್ಲಿ (Koramangala) ಶುಕ್ರವಾರ ತಮ್ಮ ಪಾಡಿಗೆ ತಾವು ಕಾರಲ್ಲಿ ಹೋಗುತ್ತಿದ್ದ ಒಂದು ಗುಂಪಿಗೆ ಸ್ಕೂಟರ್ ಮೇಲೆ ಹೋಗುತ್ತಿದ್ದವನೊಬ್ಬ ಸುಖಾಸುಮ್ಮನೆ ಕಿರಿಕ್ ಮಾಡುತ್ತಾನೆ. ಪ್ರಾಯಶಃ ಕಾರಿನಲ್ಲಿದ್ದವರು ಹಾರ್ನ್ ಮಾಡಿದ್ದಕ್ಕೆ (honk) ಮದ್ಯದ ನಶೆ ತಲೆಗೇರಿಸಿಕೊಂಡವನಿಗೆ ಪಿತ್ತವೂ ನೆತ್ತಿಗೇರಿರಬೇಕು. ಇವರಿಗೆ ಹೋಗಲು ಸೈಡ್ ಬಿಡದೆ, ಸ್ಕೂಟರನ್ನು ಅಡ್ಡಾದಿಡ್ಡಿಯಾಗಿ ಓಡಿಸುತ್ತಾನೆ. ಕಾರಲ್ಲಿದ್ದವರು ಪೊಲೀಸ್ ಕಂಟ್ರೋಲ್ ರೂಮಿಗೆ ಫೋನ್ ಮಾಡುತ್ತಾರೆ. ಕಾರಲ್ಲಿರುವರು ಉತ್ತರಭಾರತೀಯರು ಅನಿಸುತ್ತೆ, ಹಿಂದಿ ಮಾತಾಡುತ್ತಿದ್ದಾರೆ. ಸ್ಕೂಟರ್ ನವನು ಸ್ಥಳೀಯನೋ ಅಥವಾ ಹೊರಗಿನವನೋ ಗೊತ್ತಾಗಿಲ್ಲ. ಕೊನೆಗೊಂದು ಹಂತದಲ್ಲಿ ಅವನು ತನ್ನ ಸ್ಕೂಟರ್ ನಡು ರಸ್ತೆಯಲ್ಲಿ ಮತ್ತು ಕಾರಿಗೆ ಅಡ್ಡಲಾಗಿ ಪಾರ್ಕ್ ಮಾಡಿ ಕಾರಿನಲ್ಲಿದ್ದವರ ಬಳಿಗೆ ಬರುತ್ತಾನೆ. ಗ್ಲಾಸ್ ಗಳನ್ನು ಓಪನ್ ಮಾಡ್ಬೇಡ ಅಂತ ಕಾರಿನಲ್ಲಿದ್ದವನೊಬ್ಬ ಹೇಳೋದು ಕೇಳಿಸುತ್ತದೆ. ಕಾರಿನ ಬಳಿಗೆ ಬಂದವನು ಸುಮ್ಮನೆ ವಾಪಸ್ಸು ಹೋಗುತ್ತಾನೆ. ಅಷ್ಟು ಮಾತ್ರ ವಿಡಿಯೋ ಕ್ಲಿಪ್ಪಿಂಗ್ ನಿಂದ ಗೊತ್ತಾಗುತ್ತದೆ. ಅಂದಹಾಗೆ ಈ ವಿಡಿಯೋ ವೈರಲ್ ಆಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ