ಹೊಟ್ಟೆತುಂಬ ಕುಡಿದು ಕಂಟ್ರೋಲ್ ತಪ್ಪಿದ ಕುಡುಕರ ಅವಾಂತರ ಒಂದಾ ಎರಡಾ..

ಬೆಂಗಳೂರು: ಮಧು ಲೋಕ ಓಪನ್ ಆಗಿದ್ದೇ ತಡ, ಮಂಕ್ ಆಗಿದ್ದ ಮನಸ್ಸಿಗೆ ಉಲ್ಲಾಸ ಸಿಕ್ಕೇ ಬಿಟ್ಟಿತ್ತು. ಕೈಯಲ್ಲಿ ಓಲ್ಡ್​ ಮಂಕ್​ ಹಿಡಿಯುತ್ತಿದ್ದಂತೆ ಎಲ್ರೂ ಗಂಡುಗಲಿಗಳಾಗಿದ್ರು. ಬದುಕೇ ಬ್ಲ್ಯಾಕ್​​ ಅಂಡ್​ ವೈಟ್ ಆಗೋಯ್ತು ಅಂದ್ಕೊಂಡಿದ್ದೋರ ಲೈಫ್​​​ ಕಲರ್​ಫುಲ್ ಆಗೋಯ್ತು. ರಾಜ್ಯಾದ್ಯಂತ ರಾಜಾರೋಷವಾಗಿ ವಿಸ್ಕಿ ಖರೀದಿಸಿದ ಎಣ್ಣೆ ಪ್ರಿಯರು ಫುಲ್ ಚಿತ್ ಆಗಿ ಜಗತ್ತನ್ನೇ ಮರೆತಿದ್ರು. ಸುರಪಾನ ಗಂಟಲೊಳಕ್ಕೆ ಇಳೀತಿದ್ದಂತೆ ಕುಡುಕರು ಹಾವಳಿ ಮಾಡಿದ್ದೇ ಮಾಡಿದ್ದು. ಲಾಕ್​ಡೌನ್ ಎಫೆಕ್ಟ್​​ನಿಂದ ಎಣ್ಣೆ ಸಿಗದೆ ಕಂಗೆಟ್ಟಿದ್ದ ಕುಡುಕರು ಮಧುಪಾತ್ರೆಯಲ್ಲಿ ಜಳಕ ಮಾಡಿ ಪುಳಕಗೊಂಡ್ರು. […]

ಹೊಟ್ಟೆತುಂಬ ಕುಡಿದು ಕಂಟ್ರೋಲ್ ತಪ್ಪಿದ ಕುಡುಕರ ಅವಾಂತರ ಒಂದಾ ಎರಡಾ..
Follow us
ಸಾಧು ಶ್ರೀನಾಥ್​
|

Updated on:May 05, 2020 | 7:11 AM

ಬೆಂಗಳೂರು: ಮಧು ಲೋಕ ಓಪನ್ ಆಗಿದ್ದೇ ತಡ, ಮಂಕ್ ಆಗಿದ್ದ ಮನಸ್ಸಿಗೆ ಉಲ್ಲಾಸ ಸಿಕ್ಕೇ ಬಿಟ್ಟಿತ್ತು. ಕೈಯಲ್ಲಿ ಓಲ್ಡ್​ ಮಂಕ್​ ಹಿಡಿಯುತ್ತಿದ್ದಂತೆ ಎಲ್ರೂ ಗಂಡುಗಲಿಗಳಾಗಿದ್ರು. ಬದುಕೇ ಬ್ಲ್ಯಾಕ್​​ ಅಂಡ್​ ವೈಟ್ ಆಗೋಯ್ತು ಅಂದ್ಕೊಂಡಿದ್ದೋರ ಲೈಫ್​​​ ಕಲರ್​ಫುಲ್ ಆಗೋಯ್ತು. ರಾಜ್ಯಾದ್ಯಂತ ರಾಜಾರೋಷವಾಗಿ ವಿಸ್ಕಿ ಖರೀದಿಸಿದ ಎಣ್ಣೆ ಪ್ರಿಯರು ಫುಲ್ ಚಿತ್ ಆಗಿ ಜಗತ್ತನ್ನೇ ಮರೆತಿದ್ರು. ಸುರಪಾನ ಗಂಟಲೊಳಕ್ಕೆ ಇಳೀತಿದ್ದಂತೆ ಕುಡುಕರು ಹಾವಳಿ ಮಾಡಿದ್ದೇ ಮಾಡಿದ್ದು.

ಲಾಕ್​ಡೌನ್ ಎಫೆಕ್ಟ್​​ನಿಂದ ಎಣ್ಣೆ ಸಿಗದೆ ಕಂಗೆಟ್ಟಿದ್ದ ಕುಡುಕರು ಮಧುಪಾತ್ರೆಯಲ್ಲಿ ಜಳಕ ಮಾಡಿ ಪುಳಕಗೊಂಡ್ರು. ಕೇರಿ ಕೇರಿ.. ಬೀದಿ ಬೀದಿ.. ಗಲ್ಲಿ ಗಲ್ಲಿಯಲ್ಲೂ ಎಣ್ಣೆ ಪ್ರಿಯರದ್ದೇ ದರ್ಬಾರ್. ಅದ್ರಲ್ಲೂ ಮೂರೇ ಮೂರು ಪೆಗ್ ದೇಹಕ್ಕೆ ಎಂಟ್ರಿ ಕೊಡ್ತೋ ತಲೆ ಗಿರ್​ ಅನ್ನೋಕೆ ಶುರುವಾಗಿತ್ತು. ಬಾರ್, ವೈನ್ ಶಾಪ್ ಓಪನ್ ಆಗಿದ್ದು ನಿನ್ನೆ ಒಂದೇ ದಿನ ಕುಡುಕರ ಅವಾಂತರಗಳನ್ನೇ ಸೃಷ್ಟಿಸಿದ್ರು. ಪರಮಾತ್ಮನ ಆಟಕ್ಕೆ ಕಂಟ್ರೋಲ್​ ತಪ್ಪಿದ್ರು.

ಎಣ್ಣೆ ಅಮಲಿನಲ್ಲಿ ಕಾಂಪೌಂಡ್​ಗೆ ಕಾರು ಡಿಕ್ಕಿ, ವ್ಯಕ್ತಿ ಸಾವು! ಲಾಕ್​ಡೌನ್ ಬಳಿಕ ರಾಜ್ಯಾದ್ಯಂತ ಬಾರ್ ಓಪನ್ ಆಗಿದ್ದೇ ಆಗಿದ್ದು, ಮದ್ಯದ ಅಮಲು ಕೆಲವರ ಪ್ರಾಣಕ್ಕೆ ಕುತ್ತು ತಂದಿದೆ. ದೊಡ್ಡ ದೊಡ್ಡ ಅನಾಹುತವನ್ನೇ ಸೃಷ್ಟಿ ಮಾಡಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನಲ್ಲಿ ಎಣ್ಣೆಯ ಅಮಲಿನಲ್ಲಿ ಮನೆ ಕಾಪೌಂಡ್​ಗೆ ಕಾರು ಡಿಕ್ಕಿಯಾಗಿ ವ್ಯಕ್ತಿ ಮೃತಪಟ್ಟಿದ್ದಾನೆ. ಬೆಂಗಳೂರಿನಿಂದ ಇಡಗೂರು ಗ್ರಾಮಕ್ಕೆ ತೆರಳಿದ್ದ ವಿನೋದ್ ಗೌಡ ಎಂಬಾತ ಮದಿರೆ ನಶೆಯಲ್ಲಿ ಮೈಮರೆತು ಉಸಿರು ನಿಲ್ಲಿಸಿದ್ದಾನೆ.

ಬೆಣ್ಣೆ ನಗರಿಯಲ್ಲಿ ಮದ್ಯ ಸೇವಿಸಿ ವೃದ್ಧ ಬಲಿ? ದಾವಣಗೆರೆಯಲ್ಲಿ ಜಿಲ್ಲೆ ಚನ್ನಗಿರಿ ತಾಲೂಕಿನ ಸೋಮಲಾಪುರ ತಾಂಡಾದಲ್ಲಿ ಮದ್ಯ ಸೇವಿಸಿದ್ದ ವೃದ್ಧ ಸಾವನ್ನಪ್ಪಿದ್ದಾನೆ. ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ರಾಮ ನಾಯ್ಕ ಮೃತಪಟ್ಟಿದ್ದಾರೆ. ಮೃತ ವೃದ್ಧನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಆದ್ರೆ, ಕುಡಿತದಿಂದಲೇ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಅಂತರ ಪಾಲಿಸಲು ಹೇಳಿದ್ದಕ್ಕೆ ಕುಡುಕನಿಂದ ಹಲ್ಲೆ! ಇತ್ತ, ಎಣ್ಣೆ ಗುಂಗಲ್ಲಿ ಕುಡುಕರಂತೂ ನಶೆ ಏರುತ್ತಲೇ ಘೀಳಿಡೋಕೆ ಶುರುವಿಟ್ಟಿದ್ದಾರೆ. ಚಿತ್ರದುರ್ಗದ ಸಂತೆಗೊಂಡ ಬಳಿಯಲ್ಲಿರೋ ಗಿರಿ ವೈನ್ಸ್ ಬಳಿ ಸಾಮಾಜಿಕ ಅಂತರ ಪಾಲಿಸುವಂತೆ ಹೇಳಿದ್ದಕ್ಕೆ ಹೋಮ್​ಗಾರ್ಡ್ ಮೇಲೆ ಕುಡುಕ ಕಲ್ಲಿನಿಂದ ಹಲ್ಲೆ ಮಾಡಿದ್ದಾನೆ. ಹೋಮ್​ಗಾರ್ಡ್ ಶೇಖರ್ ಎಂಬುವರ ತಲೆಗೆ ಗಂಭೀರವಾದ ಗಾಯವಾಗಿದ್ದು, ಬುರುಜನಹಟ್ಟಿ ಬಡಾವಣೆ ಆರೋಪಿ ಸಮಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗೋವುಗಳ ಮಧ್ಯೆ ಕುಡುಕನ ಗಡದ್ ನಿದ್ದೆ! ಗದಗದಲ್ಲಿ ಎಣ್ಣೆ ಗುಂಗಲ್ಲಿ ಕುಡುಕನೋರ್ವ ಗೋವುಗಳ ಮಧ್ಯೆಯೇ ಗಡದ್ ನಿದ್ದೆಗೆ ಜಾರಿದ್ದ. ಮದಿರೆಯ ನಶೆಯಲ್ಲಿ ಲೋಕವನ್ನೇ ಮರೆತಿದ್ದ. ಸ್ಟೇಷನ್ ರಸ್ತೆಯ ಫುಟ್​​ಪಾತ್​ ಮೇಲೆ ಬಿದ್ದು ಹೊರಳಾಡ್ತಿದ್ದ. ಹಸುಗಳು ಮೂಸಿ ನೋಡಿದ್ರೂ ಪ್ರಪಂಚದ ಅರಿವಿವೇ ಇಲ್ಲದಂದತೆ ತನ್ನದೇ ಲೋಕದಲ್ಲಿ ಮೈ ಮರೆತಿದ್ದ.

ಎಣ್ಣೆ ಮತ್ತಲ್ಲಿ ರಸ್ತೆಯಲ್ಲೇ ಮಕಾಡೆ ಮಲಗಿದ ಮಹಾಶಯ! ಇನ್ನೊಂದೆಡೆ ಕುಡುಕರು ಫುಲ್ ಟೈಟ್ ಆಗಿ ರಸ್ತೆಯಲ್ಲಿ ತೂರಾಡಿದ್ದೇ ತೂರಾಡಿದ್ದು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕುಡುಕ ಮಹಾಶಯನೋರ್ವ ಎಣ್ಣೆ ಗುಂಗಲ್ಲಿ ನಡು ರೋಡ್​​ನಲ್ಲೇ ಮಕಾಡೆ ಮಲಗಿದ್ದ. ವಿಜಯಪುರ ಗಣಪತಿ ಪೆಂಡಾಲ್ ಬಳಿ ಟೈಟ್ ಆಗಿ ಬಿದ್ದಿದ್ದ ಕುಡುಕ ಮೇಲೆಳೋಕು ಆಗದೆ ಪರಾಡಿದ್ದ. ಇಷ್ಟೇ ಅಲ್, ಮಲಗಿದ್ದ ಜಾಗದಲ್ಲೇ ಹಾಡು ಗುನುಗುತ್ತಾ ಸಂಗೀತ ಪಂಡಿತನಂತೆ ಪೋಷ್ ಕೊಟ್ಟ.

ಎಣ್ಣೆ ಪಾರ್ಟಿಗೆ ಲಾಡ್ಜ್​​​ಗೆಳು ಫುಲ್ ಬುಕಿಂಗ್! ಲಾಕ್​ಡೌನ್ ನಡುವೆಯೂ ಮದ್ಯ ಮಾರಾಟಕ್ಕೆ ಯಾವಾಗ ಅನುಮತಿ ನೀಡಿದ್ರೋ, ಬೆಂಗಳೂರಿನಲ್ಲಿ ಬಹುತೇಕ ಲಾಡ್ಜ್​​ಗಳು ಫುಲ್ ಬುಕ್ಕಿಂಗ್ ಆಗಿವೆ. ಎಣ್ಣೆ ಪ್ರಿಯರು ಕುಡಿದು ಮಜಾ ಮಾಡೋಕೆ ರೂಮ್​ಗಳನ್ನ ಬುಕ್ ಮಾಡಿದ್ದ ಪಾರ್ಟಿ ಮೂಡ್​ಗೆ ಜಾರಿದ್ದಾರೆ. ಮದಿರೆಯಲ್ಲಿ ಮಿಂದೆದ್ದು ಎಂಜಾಯ್ ಮಾಡ್ತಿದ್ದಾರೆ.

ಮದ್ಯ ನಿಷೇಧಿಸುವಂತೆ ವಾಟಾಳ್​ ನಾಗರಾಜ್​ ಪ್ರೊಟೆಸ್ಟ್! ರಾಜ್ಯದಲ್ಲಿ ಕುಡುಕರು ಎಣ್ಣೆ ಹಾಕ್ಕೊಂಡು ಅಬ್ಬರಿಸ ಬೊಬ್ಬಿರಿತಿದ್ರೆ, ಇತ್ತ ಸರ್ಕಾರ ಮದ್ಯ ನಿಷೇಧಿಸುವಂತೆ ವಾಟಾಳ್​ ನಾಗರಾಜ್​ ಪ್ರತಿಭಟಿಸಿದ್ರು. ವಿಧಾನಸೌಧದ ಮುಂದೆ ಕೈಯಲ್ಲಿ ಖಾಲಿ ಬಾಟಲಿ ಹಿಡಿದು ಏಕಾಂಗಿಯಾಗಿ ಪ್ರೊಟೆಸ್ಟ್ ಮಾಡಿದ್ರು. ರಾಜ್ಯ ಸರ್ಕಾರ ಎಣ್ಣೆ ಮಾರಾಟ ನಿಷೇಧಿಸ್ಬೇಕು ಅಂತ ಆಗ್ರಹಿಸಿದ್ರು.

ಒಟ್ನಲ್ಲಿ, ಲಾಕ್​ಡೌನ್ ಸಡಿಲಿಕೆ ಬಳಿಕ ಮದ್ಯಪ್ರಿಯರಂತೂ ಕಿಕ್ಕೇರಿಸಿಕೊಂಡು ದಿಲ್​​ ಖುಷ್ ಆಗಿದ್ದಾರೆ. ಕೊರೊನಾಗೂ ಡೋಂಟ್ ಕೇರ್. ಎಣ್ಣೆ ಒಂದಿದ್ರೆ ನೋ ಫಿಯರ್​ ಅನ್ನೋದನ್ನ ಸಾರಿ ಸಾರಿ ಹೇಳಿದ್ದಾರೆ. ಬರೋಬ್ಬರಿ 43 ದಿನಗಳ ಅಜ್ಞಾತವಾಸದ ಬಳಿಕ ಮದಿರೆ ಪ್ರಿಯರ ಎಣ್ಣೆಯಲ್ಲಿ ಮಿಂದೆದ್ದು ಒಂದೇ ದಿನಕ್ಕೆ ಹಲವು ಅನಾಹುತಕ್ಕೆ ಎಡೆ ಮಾಡಿದೆ. ಇವತ್ತು ಕುಡುಕರು ಎಣ್ಣೆ ಹಾಕ್ಕೊಂಡು ಇನ್ನೇನ್ ಕ್ವಾಟ್ಲೆ ಕೊಡ್ತಾರೋ ಅನ್ನೋದು ಮನೆ ಮಂದಿಯವರ ನಿದ್ದೆಗೆಡಿಸಿದೆ.

Published On - 7:11 am, Tue, 5 May 20

ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ