Video: ಬಂಡೆಯ ಸಂದಿಯಲ್ಲಿ ಸಿಲುಕಿದ ಬಾಲಕನ ತಲೆ, ಕಣ್ಣೆದುರೇ ಹೆಡೆ ಎತ್ತಿ ನಿಂತ ನಾಗರಹಾವು

Updated on: May 07, 2026 | 7:46 AM

ಒಡಿಶಾದ ನಯಾಗಢದಲ್ಲಿ ಜೇನುತುಪ್ಪ ತರಲು ಹೋದ ಶಿಬಾ ಪ್ರಧಾನ್ ಎಂಬ ಬಾಲಕನ ಪಾಲಿಗೆ ಕಾಡು ದುಃಸ್ವಪ್ನವಾಯಿತು. ಬಂಡೆಯ ಬಿರುಕಿನಲ್ಲಿದ್ದ ಜೇನುಗೂಡು ತೆಗೆಯಲು ಹೋದಾಗ, ಬಾಲಕನ ತಲೆ ಇಕ್ಕಟ್ಟಾದ ಸಂದಿಯಲ್ಲಿ ಸಿಲುಕಿಕೊಂಡಿತು. ಆತಂಕದ ವಿಷಯವೆಂದರೆ, ಅದೇ ಕಿರಿದಾದ ಜಾಗದಲ್ಲಿ ಬಾಲಕನ ಮುಖದ ಮುಂದೆಯೇ ಭೀಕರ ವಿಷಪೂರಿತ ಹಾವೊಂದು ಹೆಡೆ ಎತ್ತಿ ಕುಳಿತಿತ್ತು. ಅತ್ತ ಕದಲಲಾಗದೆ, ಇತ್ತ ಹಾವಿನ ಭಯದಿಂದ ಬಾಲಕ ಎಂಟು ಗಂಟೆಗಳ ಕಾಲ ಸಿಲುಕಿಯೇ ಇದ್ದ.

ನಯಾಗಢ, ಮೇ 07: ಒಡಿಶಾದ ನಯಾಗಢದಲ್ಲಿ ಜೇನುತುಪ್ಪ ತರಲು ಹೋದ ಶಿಬಾ ಪ್ರಧಾನ್ ಎಂಬ ಬಾಲಕನ ಪಾಲಿಗೆ ಕಾಡು ದುಃಸ್ವಪ್ನವಾಯಿತು. ಬಂಡೆಯ ಬಿರುಕಿನಲ್ಲಿದ್ದ ಜೇನುಗೂಡು ತೆಗೆಯಲು ಹೋದಾಗ, ಬಾಲಕನ ತಲೆ ಇಕ್ಕಟ್ಟಾದ ಸಂದಿಯಲ್ಲಿ ಸಿಲುಕಿಕೊಂಡಿತು. ಆತಂಕದ ವಿಷಯವೆಂದರೆ, ಅದೇ ಕಿರಿದಾದ ಜಾಗದಲ್ಲಿ ಬಾಲಕನ ಮುಖದ ಮುಂದೆಯೇ ಭೀಕರ ವಿಷಪೂರಿತ ಹಾವೊಂದು ಹೆಡೆ ಎತ್ತಿ ಕುಳಿತಿತ್ತು. ಅತ್ತ ಕದಲಲಾಗದೆ, ಇತ್ತ ಹಾವಿನ ಭಯದಿಂದ ಬಾಲಕ ಎಂಟು ಗಂಟೆಗಳ ಕಾಲ ಸಿಲುಕಿಯೇ ಇದ್ದ.

ಪೊಲೀಸರು ಮತ್ತು ಅಗ್ನಿಶಾಮಕ ದಳದ ಎರಡು ತಂಡಗಳು ಹಾವಿನ ಸವಾಲನ್ನೂ ಮೀರಿ ಕಾರ್ಯಾಚರಣೆ ನಡೆಸಿ, ಬಾಲಕನನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಅದೃಷ್ಟವಶಾತ್ ಬಾಲಕನಿಗೆ ಯಾವುದೇ ಗಾಯಗಳಾಗಿಲ್ಲ. ಕಿರಿದಾದ ಸಂದು, ಎದುರಿಗಿದ್ದ ಹಾವು ಮತ್ತು ಎಂಟು ಗಂಟೆಗಳ ಹೋರಾಟ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More