ಸುರ್ಜೆವಾಲಾ ಜೊತೆ ನಡೆಸಿದ ಸಭೆ ಬಳಿಕ ಪಾಟೀಲ್ ಮಾಧ್ಯಮಗಳೊಂದಿಗೆ ಸರಿಯಾಗಿ ಮಾತಾಡಲಿಲ್ಲ

ಅರುಣ್​ ಕುಮಾರ್​ ಬೆಳ್ಳಿ

Updated on: Jun 30, 2025 | 7:34 PM

ತಾನು ಮಾಡಿದ ಅರೋಪಗಳಿಗೆ ಅವರು ದಾಖಲೆ ಏನಾದರೂ ಕೇಳಿದರೇ ಅಂತ ಪತ್ರಕರ್ತರು ಕೇಳಿದಾಗ, ಅವರು ಕೇಳಲಿಲ್ಲ ಮತ್ತು ತಾನು ಕೊಟ್ಟಿಲ್ಲ ಎಂದು ಬಿಅರ್ ಪಾಟೀಲ್ ಹೇಳಿದರು. ಭ್ರಷ್ಟಚಾರದಂಥ ಆರೋಪಗಳನ್ನು ಪಕ್ಷದವರ ವಿರುದ್ಧ ಮಾಡಿದ್ದಕ್ಕೆ ಸುರ್ಜೇವಾಲಾ ಅವರೇನಾದರೂ ಎಚ್ಚರಿಕೆ ನೀಡಿದರೆ ಅಂತ ಕೇಳಿದ ಪ್ರಶ್ನೆಗೆ ಪಾಟೀಲ್, ಯಾವ ಎಚ್ಚರಿಕೆಯನ್ನೂ ತನಗೆ ನೀಡಿಲ್ಲ ಎಂದರು.

ಬೆಂಗಳೂರು, ಜೂನ್ 30: ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೆವಾಲಾ (Randeep Surjewala) ಅವರನ್ನು ಭೇಟಿಯಾಗಿ ಹೊರಬಂದ ಬಳಿಕ ಆಳಂದ್ ಶಾಸಕ ಬಿಅರ್ ಪಾಟೀಲ್ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಚುಟುಕಾಗಿ ಮತ್ತು ಅರೆಮನಸ್ಸಿನಿಂದ ಉತ್ತರ ನೀಡಿದರು. ವಸತಿ ಯೋಜನೆ ಅಡಿ ಹಣ ನೀಡಿದವರಿಗೆ ಮನೆ ನೀಡಲಾಗಿದೆ ಎಂದು ಬಹಿರಂಗವಾಗಿ ಹೇಳಿದ್ದನ್ನೇ ಸುರ್ಜೇವಾಲಾ ಅವರಿಗೂ ಹೇಳಿದ್ದೇನೆ, ನನ್ನ ಮಾತುಗಳನ್ನು ಅವರು ಗಂಭೀರವಾಗಿ ಪರಿಗಣಿಸಿದ್ದಾರೆ ಮತ್ತು ನೋಟ್ ಮಾಡಿಕೊಂಡಿದ್ದಾರೆ ಎಂದರು. ಅವರೊಂದಿಗೆ ಏನೆಲ್ಲ ಮಾತಾಡಿದೆ ಅನ್ನೋದನ್ನು ಮಾಧ್ಯಮಗಳ ಮುಂದೆ ಹೇಳಲಾಗಲ್ಲ, ಅವರು ಕರೆದಿದ್ದಕ್ಕೆ ಹೋಗಿ ಮಾತಾಡಿದ್ದೇನೆ, ಹೆಚ್ಚಿನ ವಿವರಗಳನ್ನು ಬೇಕಿದ್ರೆ ಅವರನ್ನೇ ಕೇಳಿ ಎಂದು ಪಾಟೀಲ್ ಹೇಳಿದರು.

ಇದನ್ನೂ ಓದಿ:  ಬಿಆರ್ ಪಾಟೀಲ್ ಅವರೊಂದಿಗೆ ಮಾತಾಡಿದ್ದೇನೆ, ಪಕ್ಷದ ಅಧ್ಯಕ್ಷನಾಗಿ ವಿಷಯ ತಿಳಿದುಕೊಳ್ಳಬೇಕಿತ್ತು: ಶಿವಕುಮಾರ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.