ಸಚಿವ ಜಮೀರ್ ಆಡಿದ ಮಾತುಗಳಿಗೆ ಪ್ರತಿಕ್ರಿಯೆ ನೀಡಲೊಲ್ಲದ ಶಾಸಕ ಬಿಅರ್ ಪಾಟೀಲ್
ಯಾವ ಪಂಚಾಯಿತಿಯಲ್ಲಿ ಅವ್ಯವಹಾರ ನಡೆದಿದೆ, ನೀವು ಕೇಳಿದ ಮನೆಗಳೆಷ್ಟು ಅಂತ ಪತ್ರಕರ್ತರು ಕೇಳುವ ಪ್ರಶ್ನೆಗಳಿಗೆ ಪಾಟೀಲ್ ತಮ್ಮ ಕಾರಿನತ್ತ ನಡೆಯುತ್ತಾ ಮಾತಾಡುತ್ತಾರೆ, ಆದರೆ ಯಾವುದನ್ನೂ ಸ್ಪಷ್ಟವಾಗಿ ಹೇಳಲ್ಲ. ಕಾರಿನಲ್ಲಿ ಕುಳಿತ ಬಳಿಕ ಅವರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬರಹೇಳಿದ್ದಾರೆ, ಹೋಗಿ ಮಾತಾಡುತ್ತೇನೆ ಎಂದು ಅವರು ಹೇಳುತ್ತಾರೆ.
ಬಳ್ಳಾರಿ, ಜೂನ್ 24: ರಾಜ್ಯ ರಾಜಕಾರಣದಲ್ಲಿ ಬಿರುಗಾಳು ಎಲ್ಲಿಸಿರುವ ಆಳಂದ್ ಕಾಂಗ್ರೆಸ್ ಶಾಸಕ ಬಿಅರ್ ಪಾಟೀಲ್ ಬಳ್ಳಾರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಮುಂದೆ ಸಚಿವ ಜಮೀರ್ ಅಹ್ಮದ್ ಖಾನ್ (BZ Zameer Ahmed Khan) ಆಡಿರುವ ಮಾತುಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಜಮೀರ್ ಇಂದು ಬೆಂಗಳೂರಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಪಾಟೀಲ್ ಮಾಡಿದ ಆರೋಪಗಳು ನಿಜವಾಗಿದ್ದರೆ, ವಸತಿ ಹಂಚಿಕೆ ಅವ್ಯವಹಾರದಲ್ಲಿ ತನ್ನ ಪಾಲೇನಾದರೂ ಇದ್ದರೆ ತನ್ನ ಮಕ್ಕಳು ಶಾಪಗ್ರಸ್ತರಾಗಲಿ ಎಂದು ಹೇಳಿದ್ದಾರೆ. ಇದನ್ನೇ ಪಾಟೀಲ್ ಅವರಿಗೆ ಹೇಳಿದಾಗ, ಅವರು ಏನು ಹೇಳಿದ್ದಾರೋ ಗೊತ್ತಿಲ್ಲ, ಜಮೀರ್ ಸಂಪುಟ ಸಚಿವರಾಗಿರುವುದರಿಂದ ಅವರು ಕರೆದರೆ ಹೋಗಿ ಮಾತಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ನಮ್ಮದು ಭ್ರಷ್ಟಾಚಾರರಹಿತ ಸರ್ಕಾರ, ಲಂಚಗುಳಿತನಕ್ಕೆ ಜೀರೋ ಟಾಲರನ್ಸ್ : ಈಶ್ವರ್ ಖಂಡ್ರೆ, ಅರಣ್ಯ ಸಚಿವ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ