ಪ್ರಿಯಕರನೊಂದಿಗೆ ಜಗಳ ತುಮಕೂರಿನ ಯುವತಿಯೊಬ್ಬಳನ್ನು ಸಾವಿಗೆ ಶರಣಾಗುವಂತೆ ಮಾಡಿತೇ?
ಲಭ್ಯವಿರುವ ಮಾಹಿತಿಯೊಂದರ ಪ್ರಕಾರ ಚೈತನ್ಯ ನೆರೆಯ ಊರಿನ ವಿಜಯ್ ಕುಮಾರ್ ಹೆಸರಿನ ಯುವಕನನ್ನು ಪ್ರೀತಿಸುತ್ತಿದ್ದಳು. ತಾನು ಮಾಡಿದ ರೀಲೊಂದನ್ನು ತನ್ನ ಇನ್ಸ್ಟಾ ಮತ್ತು ವಾಟ್ಸ್ಯಾಪ್ ಸ್ಟೇಟಸ್ನಲ್ಲಿ ಅಪ್ಲೋಡ್ ಮಾಡಿದ್ದಳು, ಆದರೆ ವಿಜಯ್ಗೆ ಅದು ಸರಿಕಾಣದ ಕಾರಣ ಇಬ್ಬರ ನಡುವೆ ಜಗಳವಾಗಿತ್ತು. ಇದರಿಂದ ಮನನೊಂದ ಚೈತನ್ಯ ಸಾವಿಗೆ ಶರಣಾಗಿದ್ದಾಳೆ ಎಂದು ಹೇಳಲಾಗುತ್ತಿದೆ.
ತುಮಕೂರು, ಜೂನ್ 24: ಬದುಕಿ ಬಾಳಬೇಕಿದ್ದ 22ರ ಯುವತಿ ಚೈತನ್ಯ ನಿನ್ನೆ ರಾತ್ರಿ ತುಮಕೂರಿನ ಹೊಸಹಳ್ಳಿಯಲ್ಲಿರುವ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಆಕೆಯ ಸಂಬಂಧಿಯೊಬ್ಬರು (relative of deceased) ಹೇಳುವ ಪ್ರಕಾರ ಚೈತನ್ಯ ಮಾಡೆಲಿಂಗ್ ನಲ್ಲಿ ಬಹಳ ಅಭಿರುಚಿಯಿಟ್ಟುಕೊಂಡಿದ್ದಳು ಮತ್ತು ಮೇಕಪ್ ಆರ್ಟಿಸ್ಟ್ ಕೂಡ ಆಗಿದ್ದಳು. ರೀಲ್ಸ್ ಮಾಡುವುದನ್ನು ಹವ್ಯಾಸವಾಗಿಸಿಕೊಂಡಿದ್ದ ಚೈತನ್ಯ ನಿನ್ನೆ ರಾತ್ರಿ ತನ್ನ ರೂಮಿನ ಬಾಗಿಲು ಮುಚ್ಚಿಕೊಂಡು ಸೀರೆಯೊಂದರಿಂದ ಕಿಟಿಕಿಯ ಸರಳುಗಳಿಗೆ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾಳೆ. ಪದವಿಯ ಕೊನೆ ವರ್ಷದಲ್ಲಿ ಓದುತ್ತಿದ್ದ ಚೈತನ್ಯ ಸಾವಿನ ಹಿಂದೆ ಲವ್ ಆ್ಯಂಗಲ್ ಇದೆಯೆಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಪ್ರೇಯಸಿ ಸಾವಿನ ಸುದ್ದಿ ತಿಳಿದು ಪ್ರಿಯಕರ ನೇಣಿಗೆ ಶರಣು: ಒಂದು ಸಣ್ಣ ಮನಸ್ತಾಪದಿಂದ ಪ್ರೇಮಿಗಳು ದುರಂತ ಸಾವು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ