Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಸ್ಪಾ ಕೆಲಸಕ್ಕಿದ್ದ ದೆಹಲಿ ಮೂಲದ ಯುವತಿ ನೇಣಿಗೆ ಶರಣು

ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ದೆಹಲಿಯಿಂದ ಬೆಂಗಳೂರಿಗೆ ಬಂದು ಸ್ಪಾ ಕೆಲಸಕ್ಕಿದ್ದ ಸುಂದರ ಯುವತಿಯೊಬ್ಬಳು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ದೆಹಲಿಯ ವಾತಾವರಣಕ್ಕೆ ಬೇಸತ್ತು ಬೆಂಗಳೂರಿಗೆ ಬಂದಿದ್ದ ಯುವತಿ ದುರಂತ ಅಂತ್ಯ ಕಂಡಿದ್ದಾಳೆ.

ಬೆಂಗಳೂರಿನಲ್ಲಿ ಸ್ಪಾ ಕೆಲಸಕ್ಕಿದ್ದ ದೆಹಲಿ ಮೂಲದ ಯುವತಿ ನೇಣಿಗೆ ಶರಣು
ಸೋನಿಯ(24) ಮೃತ ಯುವತಿ
Follow us
ಬಿ ಮೂರ್ತಿ, ನೆಲಮಂಗಲ
| Updated By: ರಮೇಶ್ ಬಿ. ಜವಳಗೇರಾ

Updated on: Nov 28, 2024 | 3:10 PM

ಬೆಂಗಳೂರು, (ನವೆಂಬರ್ 28): ಸ್ಪಾನಲ್ಲಿ ಕೆಲಸ ಮಾಡುತ್ತಿದ್ದ ನವದೆಹಲಿ ಮೂಲದ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಬಾಗಲಗುಂಟೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಯುವತಿಯನ್ನು ಸೋನಿಯಾ (24) ಎಂದು ಗುರುತಿಸಲಾಗಿದೆ. ದೆಹಲಿ ಮೂಲದ ಸೋನಿಯಾ ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಬಂದು ಬೆಂಗಳೂರಿನ 8ನೇ ಮೈಲಿಯ ಎಲೆಗೆನ್ಸ್ ಸ್ಪಾನಲ್ಲಿ ಕೆಲಸ ಮಾಡುತ್ತಿದ್ದಳು. ಆದ್ರೆ, ನಿನ್ನೆ(ನವೆಂಬರ್ 27) ರೂಮ್​ನಲ್ಲಿ ಏಕಾಏಕಿ ಪ್ಯಾನ್​​ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಬೆಂಗಳೂರಿನ 8ನೇ ಮೈಲಿಯ ಎಲೆಗೆನ್ಸ್ ಸ್ಪಾದಲ್ಲಿ ಕೆಲಸಕ್ಕೆ ಸೇರಿದ್ದ ಯುವತಿ, ಕಳೆದ 2 ತಿಂಗಳ ಹಿಂದೆಯಷ್ಟೇ ಸ್ಪಾದಲ್ಲಿ ಕೆಲಸಕ್ಕೆ ಸೇರಿದ್ದಳು. ಪ್ರತಿ ತಿಂಗಳೂ 30 ಸಾವಿರ ರೂ. ವೇತನ ಪಡೆಯುತ್ತಿದ್ದಳು. ಆದ್ರೆ, ಏಕಾಏಕಿ ರೂಮ್​​ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೊಂದು ಭಯಾನಕ ಕೃತ್ಯ; ಪ್ರೇಯಸಿಯನ್ನು ಕೊಂದ 1 ದಿನ ಕಳೆದು ಪರಾರಿಯಾದ ಪ್ರಿಯಕರ!

ಸೋನಿಯಾ ಎಂದಿನಂತೆ ಸ್ಪಾಗೆ ಬರಲಿಲ್ಲ ಎಂದು ಸ್ಪಾ ಮಾಲೀಕ ಯುವತಿಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದಿದ್ದಾಗ ಅನುಮಾನಗೊಂಡು ಮನೆ ಬಳಿ ಬಂದು ನೋಡಿದ್ದಾನೆ. ಎಷ್ಟೇ ಬಾಗಿಲು ಬಡಿದರೂ ಮನೆ ಬಾಗಿಲು ತೆರೆಯದಿದ್ದಾಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಬಾಗಿಲು ಮುರಿದು ನೋಡಿದಾಗ ಯುವತಿ ತನ್ನ ರೂಮಿನಲ್ಲಿ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.

ದೆಹಲಿ ಮೂಲದ ಸೋನಿಯಾ ಅವರ ಪೋಷಕರು ದೆಹಲಿಯಲ್ಲಿ ವಾಸವಾಗಿದ್ದು, ಪೊಲೀಸರು ಅವರಿಗೆ ಮಗಳ ಸಾವಿನ ಸುದ್ದಿಯನ್ನು ತಿಳಿಸಿದ್ದಾರೆ. ಇದೀಗ ಸೋನಿಯಾಳ ಪೋಷಕರು ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಈ ಘಟನೆ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದು, ಸಾಕ್ಷಿಗಳನ್ನು ಸಂಗ್ರಹಣೆ ಮಾಡುತ್ತಿದ್ದಾರೆ. ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದು, ಸ್ಪಾ ಮಾಲೀಕರು ಹಾಗೂ ಇತರೆ ಸಿಬ್ಬಂದಿಯನ್ನು ವಿಚಾರಣೆ ಮಾಡುತ್ತಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ