ಬೆಂಗಳೂರಲ್ಲಿ ಮತ್ತೊಂದು ಭಯಾನಕ ಕೃತ್ಯ; ಪ್ರೇಯಸಿಯನ್ನು ಕೊಂದ 1 ದಿನ ಕಳೆದು ಪರಾರಿಯಾದ ಪ್ರಿಯಕರ!

ಬೆಂಗಳೂರು ನಗರದಲ್ಲಿ ಮತ್ತೊಂದು ಅಮಾನುಷ ಕೃತ್ಯ ಬೆಳಕಿಗೆ ಬಂದಿದೆ. ಪ್ರಿಯಕರನ ಕೈಯಿಂದ ಪ್ರೇಯಸಿಯ ಬರ್ಬರ ಹತ್ಯೆಯಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಯುವತಿ ದುರಂತ ಅಂತ್ಯವಾಗಿದೆ. ಹೋಟೆಲ್​ನಲ್ಲಿ ತಂಗಿರುವಾಗಲೇ ಪ್ರಿಯತಮೆಯನ್ನು ಕೊಂದು ಪ್ರಿಯಕರ ಎಸ್ಕೇಪ್ ಆಗಿದ್ದಾನೆ.

ಬೆಂಗಳೂರಲ್ಲಿ ಮತ್ತೊಂದು ಭಯಾನಕ ಕೃತ್ಯ;  ಪ್ರೇಯಸಿಯನ್ನು ಕೊಂದ 1 ದಿನ ಕಳೆದು ಪರಾರಿಯಾದ ಪ್ರಿಯಕರ!
ಮಾಯಾ ಗೊಗೋಯ್
Follow us
ರಾಚಪ್ಪಾಜಿ ನಾಯ್ಕ್
| Updated By: ರಮೇಶ್ ಬಿ. ಜವಳಗೇರಾ

Updated on: Nov 26, 2024 | 3:21 PM

ಬೆಂಗಳೂರು, (ನವೆಂಬರ್ 26): ಪ್ರಿಯಕನೋರ್ವ ತನ್ನ ಪ್ರೇಯಸಿಯನ್ನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಂಗಳೂರಿನ ಇಂದಿರಾ ನಗರದ ಸರ್ವಿಸ್ ಅಪಾರ್ಟ್ ಮೆಂಟ್​ನಲ್ಲಿ ನಡೆದಿದೆ. ಕೊಲೆಯಾದ ಯುವತಿಯನ್ನು ಅಸ್ಸಾಂ ಮೂಲದ ಮಾಯಾ ಗೊಗೋಯಿ ಎಂದು ಗುರುತಿಸಲಾಗಿದ್ದು, ಮಾಯಾಳನ್ನು ಕೊಂದು ಆರವ್ ಹಾರ್ನಿ ಎನ್ನುವಾತ​ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಇಂದಿರಾನಗರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಾಗಿ ಬಲೆ ಬೀಸಿದ್ದಾರೆ.

ಈಕೆ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡು ಹೆಚ್​ಎಸ್​ಆರ್​ ಲೇಔಟ್​​ನಲ್ಲಿ ವಾಸವಿದ್ದ ಮಾಯಾ ಗೊಗೋಯಿ, ನವೆಂಬರ್ 23ರಂದು ಮಾಯಾ ಹಾಗೂ ಆಕೆಯ ಪ್ರಿಯಕರ ಆರವ್ ಹಾರ್ನಿ ಇಂದಿರಾನಗರದ ಸರ್ವಿಸ್ ಅಪಾರ್ಟ್ ಮೆಂಟ್ ನಲ್ಲಿ ರೂಮ್ ಬುಕ್​ ಮಾಡಿಕೊಂಡು ತಂಗಿದ್ದರು. ಆದ್ರೆ, ಅದೇನಾಯ್ತೋ ಏನೋ ನಿನ್ನೆ (ನವೆಂಬರ್ 25) ಸಂಜೆ ಪ್ರಿಯಕರ ಆರವ್ ಹಾರ್ನಿ, ತನ್ನ ಪ್ರೇಯಸಿ ಮಾಯಾಳನ್ನು ಕೊಂದು ಪರಾರಿಯಾಗಿದ್ದಾನೆ.

ಇದನ್ನೂ ಓದಿ: ಸಂಬಂಧಿ ಮನೆಯಲ್ಲಿ ಸ್ನಾನಕ್ಕೆಂದು ಹೋಗಿದ್ದ ಮಹಿಳೆ ಬಾತ್​ರೂಮ್​ನಲ್ಲಿ ನಿಗೂಢ ಸಾವು

ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಇಂದಿರಾನಗರ ಪೊಲೀಸರು ದೌಡಾಯಿಸಿ ಪರಿಶೀನಲೆ ನಡೆಸಿದ್ದು ಕೊಲೆಗೆ ನಿಖರ ಕಾರಣ ಏನು ಎನ್ನುವುದನ್ನು ತನಿಖೆ ನಡೆಸಿದ್ದಾರೆ. ಆದ್ರೆ, ಹೋಟೆಲ್​ ರೂಮ್ ಒಳಗ್ಗೆ ಇಬ್ಬರೇ ಹೋಗಿರುವುದರಿಂದ ಪ್ರಿಯಕರನಿಂದಲೇ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು, ಪ್ರಾಥಮಿಕ ಮಾಹಿತಿ ಸಂಗ್ರಹ ಮಾಡಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

ಅಪಾರ್ಟ್ ಮೆಂಟ್ ಗೆ ಆಗಮಿಸಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ನವೆಂಬರ್ 23ರಂದು ಮಧ್ಯಾಹ್ನ ಮಾಯಾ ಗೊಗೋಯ್ ಹಾಗೂ ಆರವ್ ಹಾರ್ನಿ ಇಬ್ಬರು ಒಟ್ಟಿಗೆ ತಂಗಲು ಅಪಾರ್ಟ್ ಮೆಂಟ್ ಗೆ ಆಗಮಿಸಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 24 ರಂದೇ ಮಾಯಾ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ. ಕೊಲೆ ಬಳಿಕ ಅದೇ ರೂಮ್ ನಲ್ಲಿಯೇ ಉಳಿದುಕೊಂಡಿದ್ದಾನೆ. ಅಲ್ಲಿಯೇ ಕೂತು ಸಿಗರೇಟ್ ಸೇದಿದ್ದಾನೆ. ಮೃತದೇಹ ಜೊತೆಯಲ್ಲೇ ಕಾಲ ಕಳೆದಿದ್ದು, ಇಂದು(ನವೆಂಬರ್ 26) ಬೆಳಗ್ಗೆ ಕ್ಯಾಬ್ ಬುಕ್ ಮಾಡಿಕೊಂಡು ಸರ್ವಿಸ್ ಅಪಾರ್ಟ್ ಮೆಂಟ್​ನಿಂದ ಕಾಲ್ಕಿತ್ತಿದ್ದಾನೆ.

ಮೃತದೇಹ ಪೀಸ್ ಮಾಡೋ ಪ್ಲಾನ್ ಇತ್ತಾ?

ಹೌದು..ಪ್ರೇಯಸಿಯ ಮೃತದೇಹವನ್ನು ಪೀಸ್ ಪೀಸ್​ ಮಾಡುವ ಏನಾದರೂ ಪ್ಲಾನ್ ಮಾಡಿದ್ದ ಎನ್ನುವ ಅನುಮಾನ ಇಂದಿರಾನಗರ ಪೊಲೀಸರಿಗೆ ಬಂದಿದೆ. ಯಾಕಂದ್ರೆ, ಒಂದು ದಿನ ಮೃತದೇಹದ ಜೊತೆಗೆ ಕಾಲ‌ ಕಳೆದಿದ್ದಾನೆ. ಹಾಗಾಗಿ ಮೃತದೇಹ ಪೀಸ್ ಪೀಸ್ ಮಾಡಿರುವ ಪ್ಲಾನ್ ಮಾಡಿದ್ದ ಎಂಬ ಅನುಮಾನ ವ್ಯಕ್ತವಾಗಿದೆ. ಕೊನೆಗೆ ಪ್ಲಾನ್ ಫೇಲ್ ಆಗಿ ಮೃತದೇಹ ಬಿಟ್ಟು ಪಾರಾರಿಯಾಗಿದ್ದಾನೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!
ಹಾಸನದಲ್ಲಿ ಜೆಡಿಎಸ್ ಪ್ರಭಾವ ಸಂಪೂರ್ಣವಾಗಿ ತಗ್ಗಿಸಲು ಕಾಂಗ್ರೆಸ್ ಹುನ್ನಾರ
ಹಾಸನದಲ್ಲಿ ಜೆಡಿಎಸ್ ಪ್ರಭಾವ ಸಂಪೂರ್ಣವಾಗಿ ತಗ್ಗಿಸಲು ಕಾಂಗ್ರೆಸ್ ಹುನ್ನಾರ
ವಿಜಯೇಂದ್ರ ತಂಡದಿಂದ ಕಲ್ಯಾಣ ಕರ್ನಾಟಕದಲ್ಲಿ ರೈತರ ಪರ ಹೋರಾಟ ಬೇಕಿತ್ತಾ?
ವಿಜಯೇಂದ್ರ ತಂಡದಿಂದ ಕಲ್ಯಾಣ ಕರ್ನಾಟಕದಲ್ಲಿ ರೈತರ ಪರ ಹೋರಾಟ ಬೇಕಿತ್ತಾ?
ಲಕ್ಷ್ಮಿದೇವಿ ಸಮುದಾಯ ಭವನ ಉದ್ಘಾಟಿಸಿದ ಸಿದ್ದರಾಮಯ್ಯ
ಲಕ್ಷ್ಮಿದೇವಿ ಸಮುದಾಯ ಭವನ ಉದ್ಘಾಟಿಸಿದ ಸಿದ್ದರಾಮಯ್ಯ