ರೈಲಿನಲ್ಲಿ ಅಸಭ್ಯ ವರ್ತನೆ: ಕೇಳಲು ಬಂದ ಪೊಲೀಸರ ಮುಂದೆಯೇ ಅಂಗಿ, ಪ್ಯಾಂಟ್ ಬಿಚ್ಚಿದ
ರೈಲ್ವೆ ಎಸಿ ಬೋಗಿಯಲ್ಲಿ ಪ್ರಯಾಣಿಕನೊಬ್ಬನ ಅಸಭ್ಯ ವರ್ತನೆ ಮಾಡಿರುವ ಘಟನೆ ರಾಯಚೂರು ರೈಲ್ವೆ ನಿಲ್ದಾಣದಲ್ಲಿ ನಡೆದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಮುಂಬೈಯಿಂದ ಕೊಯಂಬತ್ತೂರು ಮಾರ್ಗದ ಕುರ್ಲಾ ರೈಲಿನಲ್ಲಿ ಮಹಿಳಾ ಟಿಟಿ ಹಾಗೂ ಸಹ ಮಹಿಳಾ ಪ್ರಯಾಣಿಕರ ಜೊತೆ ಯುವಕ ಬಟ್ಟೆ ಬಿಚ್ಚಿ ಅಸಭ್ಯ ವರ್ತನೆ ಮಾಡಿದ್ದಾನೆ.
ರಾಯಚೂರು, (ಜೂನ್ 24): ರೈಲ್ವೆ ಎಸಿ ಬೋಗಿಯಲ್ಲಿ ಪ್ರಯಾಣಿಕನೊಬ್ಬನ ಅಸಭ್ಯ ವರ್ತನೆ ಮಾಡಿರುವ ಘಟನೆ ರಾಯಚೂರು ರೈಲ್ವೆ ನಿಲ್ದಾಣದಲ್ಲಿ ನಡೆದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಮುಂಬೈಯಿಂದ ಕೊಯಂಬತ್ತೂರು ಮಾರ್ಗದ ಕುರ್ಲಾ ರೈಲಿನಲ್ಲಿ ಮಹಿಳಾ ಟಿಟಿ ಹಾಗೂ ಸಹ ಮಹಿಳಾ ಪ್ರಯಾಣಿಕರ ಜೊತೆ ಯುವಕ ಬಟ್ಟೆ ಬಿಚ್ಚಿ ಅಸಭ್ಯ ವರ್ತನೆ ಮಾಡಿದ್ದಾನೆ. ಈ ಸಂಬಂಧ ರೈಲು ರಾಯಚೂರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು, ಏನು ಗೊತ್ತಿಲ್ಲದಂತೆ ಮಲಗಿದ್ದ ಪ್ರಯಾಣಿಕನನ್ನು ಎಬ್ಬಿಸಿದ್ದಾರೆ. ಆದ್ರೆ, ಪ್ರಯಾಣಿಕ ಎದ್ದೇಳುತ್ತಲೇ ತನ್ನ ಶರ್ಟ್, ಪ್ಯಾಂಟ್ ಬಿಚ್ಚಿದ್ದಾನೆ. ಇದರಿಂದ ಮುಜುಗರಕ್ಕೀಡಾಡ ಪೊಲಿಸರು ಅಲ್ಲಿಂದ ಹೊರಟು ಹೋಗಿದ್ದಾರೆ. ನಂತರ ಮಹಿಳಾ ಟಿಟಿ ಯಾಕೆ ಹಾಗೇ ಸುಮ್ನೆ ಹೋಗುತ್ತಿದ್ದೀರಿ? ಹೀಗಾದ್ರೆ ಹೇಗೆ, ಮಹಿಳಾ ಪ್ರಯಾಣಿಕರು ಭಯಪಡುತ್ತಿದ್ದಾರೆ ಎಂದು ಪೊಲೀಸರಿಗೆ ಹೇಳಿದ್ದಾರೆ. ಆದ್ರೆ, ಪೊಲೀಸರು ಅದ್ಯಾವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ರೈಲು ಇಳಿದು ಹೋಗಿಬಿಟ್ಟರು. ಲೇಡಿ ಟಿಟಿ ತೋರಿದ ಧೈರ್ಯ ಪೊಲೀಸರು ತೋರಲಿಲ್ಲ. ಇದರಿಂದ ರಾಯಚೂರು ರೈಲ್ವೆ ಪೊಲೀಸರ ನಡೆಗೆ ಟೀಕೆಗಳು ವ್ಯಕ್ತವಾಗಿವೆ.