ಟೈವಾನ್ ಮತ್ತು ಇಂಡಿಯನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತಗಳ ಹಿಂದೆ ಯುಎಸ್ ಕೈವಾಡವಿದೆ ಅಂತ ಹೇಳಿಲ್ಲವೆಂದ ಬ್ರಹ್ನ ಚೆಲ್ಲಾನಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 10, 2021 | 8:48 PM

ಇಂಡಿಯ ಮತ್ತು ರಷ್ಯಾ ನಡುವೆ ರಕ್ಷಣಾ ಒಪ್ಪಂದವೊಂದು ಏರ್ಪಟ್ಟಿದ್ದು ರಷ್ಯಾ ನಿರ್ಮಿತ S-400 ಕ್ಷಿಪಣಿ ರಕ್ಷಣಾ ಸಿಸ್ಟಂನ ಡೆಲಿವರಿಗಾಗಿ ಎದುರು ನೋಡುತ್ತಿರುವುದು ಅಮೇರಿಕಾಗೆ ಸರಿಯೆಸುತ್ತಿಲ್ಲ ಮತ್ತು ಈ ಒಪ್ಪಂದವನ್ನು ಅದು ವಿರೋಧಿಸುತ್ತಿದೆ, ಎಂದು ಗ್ಲೋಬಲ್ ಟೈಮ್ಸ್ ಹೇಳಿದೆ.

ಭಾರತದ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಪತ್ನಿ ಮತ್ತು ಇತರ 11 ರಕ್ಷಣಾ ಸೇವೆಗಳ ಅಧಿಕಾರಿಗಳು ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ಕೇವಲ ಎರಡು ದಿನಗಳ ನಂತರ ಚೀನಾ ಕೊಳಕು ಬುದ್ಧಿಯನ್ನು ಪ್ರದರ್ಶಿಸಲಾರಂಭಿಸಿದೆ. ಬುಧವಾರದಂದು ಚೀನಾದ ಕಮ್ಯುನಿಸ್ಟ್ ಪಕ್ಷದ (CCP) ಮುಖವಾಣಿ ಗ್ಲೋಬಲ್ ಟೈಮ್ಸ್ ಪತ್ರಿಕೆಯು, ಜನರಲ್ ಬಿಪಿನ್ ರಾವತ್ ಮತ್ತು ತೈವಾನ್‌ನ ಮುಖ್ಯಸ್ಥ ಜನರಲ್ ಸ್ಟಾಫ್ ಜನರಲ್ ಶೆನ್ ಯಿ-ಮಿಂಗ್ ಅವರ ಸಾವಿನ ಬಗ್ಗೆ ಲೇಖಕ, ಸ್ಟ್ರಾಟಿಜಿಕ್ ಚಿಂತಕ ಬ್ರಹ್ಮ ಚೆಲಾನಿ ಅವರು ಮಾಡಿರುವ ಟ್ವೀಟ್ಗಳಿಗೆ ಪ್ರತಿಕ್ರಿಯಿಸುತ್ತಾ, ದುರಂತಗಳ ಹಿಂದೆ ಅಮೆರಿಕದ ಕೈವಾಡವಿದೆ ಅಂತ ಚೆಲ್ಲಾನಿ ಶಂಕಿಸುತ್ತಿರುವಂತಿದೆ ಅಂತ ಹೇಳಿದೆ. ಅದರ ಪ್ರತಿಕ್ರಿಯೆಗೆ ಚೆಲ್ಲಾನಿ ತೀವ್ರ ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದಾರೆ.

ಗ್ಲೋಬಲ್ ಟೈಮ್ಸ್ ಹೆಲಿಕಾಪ್ಟರ್ ದುರಂತವನ್ನು ಭಾರತ-ರಷ್ಯಾ ರಕ್ಷಣಾ ಒಪ್ಪಂದಗಳಿಗೆ ಥಳುಕು ಹಾಕಿದೆ. ಇಂಡಿಯ ಮತ್ತು ರಷ್ಯಾ ನಡುವೆ ರಕ್ಷಣಾ ಒಪ್ಪಂದವೊಂದು ಏರ್ಪಟ್ಟಿದ್ದು ರಷ್ಯಾ ನಿರ್ಮಿತ S-400 ಕ್ಷಿಪಣಿ ರಕ್ಷಣಾ ಸಿಸ್ಟಂನ ಡೆಲಿವರಿಗಾಗಿ ಎದುರು ನೋಡುತ್ತಿರುವುದು ಅಮೇರಿಕಾಗೆ ಸರಿಯೆಸುತ್ತಿಲ್ಲ ಮತ್ತು ಈ ಒಪ್ಪಂದವನ್ನು ಅದು ವಿರೋಧಿಸುತ್ತಿದೆ, ಎಂದು ಗ್ಲೋಬಲ್ ಟೈಮ್ಸ್ ಹೇಳಿದೆ.

ಚೆಲ್ಲಾನಿ ಅವರು ತಮ್ಮ ಟ್ವೀಟ್ನಲ್ಲಿ, ‘ಇಂಡಿಯ ಮತ್ತು ಚೀನಾ ಗಡಿಭಾಗದಲ್ಲಿ ಕಳೆದ 20 ತಿಂಗಳುಗಳಿಂದ ಚೀನಾದ ಆಕ್ರಮಣಶೀಲತೆ ಉತ್ತುಂಗ ತಲುಪಿ ಹಿಮಾಲಯ ಪರ್ವಾತಗಳ ಬಳಿ ಯುದ್ಧದಂಥ ಸ್ಥಿತಿ ನಿರ್ಮಾಣಗೊಂಡಿರುವ ಕೆಟ್ಟ ಸಂದರ್ಭದಲ್ಲಿ ಜನರಲ್ ರಾವತ್, ಅವರ ಪತ್ನಿ ಮತ್ತು ಇತರ 11 ಮಿಲಿಟರಿ ಸಿಬ್ಬಂದಿಯ ದುರಂತ ಸಾವು ಸಂಭವಿಸಬಾರದಿತ್ತು,’ ಎಂದು ಟ್ವೀಟ್ ಮಾಡಿದ್ದರು.

ಮತ್ತೊಂದು ಟ್ವೀಟ್​ನಲ್ಲಿ ಅವರು, ‘ಜನರಲ್ ರಾವತ್ ಅವರ ಸಾವು 2020 ರ ಆರಂಭದಲ್ಲಿ ತೈವಾನ್‌ನ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಶೆನ್ ಯಿ-ಮಿಂಗ್ ಮತ್ತು ಇಬ್ಬರು ಮೇಜರ್ ಜನರಲ್‌ಗಳು ಸೇರಿದಂತೆ ಇತರ ಏಳು ಮಿಲಿಟರಿ ಅಧಿಕಾರಿಗಳನ್ನು ಬಲಿಪಡೆದ ಹೆಲಿಕಾಪ್ಟರ್ ದುರಂತದ ಜೊತೆ ವಿಲಕ್ಷಣ ಸಮಾನತೆಯನ್ನು ಹೊಂದಿದೆ. ಪ್ರತಿ ಹೆಲಿಕಾಪ್ಟರ್ ಅಪಘಾತವು ಚೀನಾದ ಆಕ್ರಮಣಶೀಲತೆ ವಿರುದ್ಧ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತಿದ್ದ ಪ್ರಮುಖ ವ್ಯಕ್ತಿಯನ್ನು ಬಲಿತೆಗೆದುಕೊಂಡಿದೆ,’ ಅಂತ ಹೇಳಿದ್ದರು.

ಗ್ಲೋಬಲ್ ಟೈಮ್ಸ್ ಟ್ವೀಟ್ ತನ್ನ ಟ್ವೀಟ್​ಗಳಿಗೆ ಪ್ರತಿಕ್ರಿಯಿಸುವ ಮೊದಲೇ ಚೆಲ್ಲಾನಿ, ‘ಎರಡು ಹೆಲಿಕಾಪ್ಟರ್ ದುರಂತಗಳ ನಡುವೆ ಹೊರಗಿನವರ ಕೈವಾಡ ಇರಬಹುದು, ಬೇರೆ ದೇಶವೊಂದಕ್ಕೆ ದುರ್ಘಟನೆ ಜೊತೆ ಸಂಬಂಧವಿದೆ ಅನ್ನೋದು ನನ್ನ ಟ್ವೀಟ್ನ ಅರ್ಥವಲ್ಲ. ಮೂಲಭೂತ ಸಂಗತಿಯೇನೆಂದರೆ, ಪ್ರತಿ ದುರಂತವು ಪ್ರಮುಖ ಆಂತರಿಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ, ವಿಶೇಷವಾಗಿ ಉನ್ನತ ಜನರಲ್‌ಗಳನ್ನು ಸಾಗಿಸುವ ಮಿಲಿಟರಿ ಹೆಲಿಕಾಪ್ಟರ್‌ಗಳ ನಿರ್ವಹಣೆಯ ಬಗ್ಗೆ,’ ಎಂದು ಅವರು ಹೇಳಿದ್ದರು.

ಅದಾದ ಮೇಲೆ ಗ್ಲೋಬಲ್ ಟೈಮ್ಸ್‌ನ ಟ್ವಿಟ್ಟರ್ ಕಾಮೆಂಟ್‌ಗೆ ಪ್ರತಿಕ್ರಿಯಿಸಿದ ಚೆಲ್ಲಾನಿ, ಈ ದುರಂತಗಳನ್ನು ತಾನು ಅಮೇರಿಕ ಜೊತೆ ಲಿಂಕ್ ಮಾಡುವ ಪ್ರಯತ್ನ ಮಾಡಿಲ್ಲ ಅಂತ ಸ್ಪಷ್ಟಪಡಿಸಿದರು. ತಮ್ಮ ಮುಂದಿನ ಟ್ವೀಟ್ ನಲ್ಲಿ ಅವರು, ‘ಭಾರತೀಯ ರಕ್ಷಣಾ ಪಡೆಗಳ ಅತ್ಯುನ್ನತ ಜನರಲ್‌ ಅವರ ಸಾವಿಗೆ ಕಾರಣವಾದ ಹೆಲಿಕಾಪ್ಟರ್ ಅಪಘಾತದ ಹಿಂದೆ ಯುಎಸ್ ಇದೆ ಎಂದು ಆರೋಪಿಸಲು ಸಿಸಿಪಿ ಮುಖವಾಣಿ ನನ್ನ ಟ್ವೀಟ್ ಅನ್ನು ದುರುಪಯೋಗಪಡಿಸಿಕೊಂಡಿದೆ. ಯಾಕೆಂದರೆ ಭಾರತವು ರಷ್ಯಾದಿಂದ S-400 ವ್ಯವಸ್ಥೆಯನ್ನು ಖರೀದಿಸುತ್ತಿದೆ! ಅದರ ಟ್ವೀಟ್ ದೌರ್ಭಾಗ್ಯಕರ ಮತ್ತು ಸಿಸಿಪಿ ಜನರ ವಿಕೃತ ಮನಸ್ಥಿತಿಯನ್ನು ಅದು ಸೂಚಿಸುತ್ತದೆ,’ ಎಂದು ಬರೆದಿದ್ದರು.

ಇದನ್ನೂ ಓದಿ:  Child Marriage: ರಾಜಸ್ಥಾನದಲ್ಲಿ ಇನ್ನೂ ಚಾಲ್ತಿಯಲ್ಲಿದೆ ಬಾಲ್ಯವಿವಾಹ; ಮಕ್ಕಳ ಮದುವೆಯ ಶಾಕಿಂಗ್ ವಿಡಿಯೋ ವೈರಲ್