Loading video

ಬೆಂಗಳೂರು: ಬ್ರಾಹ್ಮಿನ್ಸ್ ಕೆಫೆ ಇಡ್ಲಿ ಸಾಂಬಾರ್‌ನಲ್ಲಿ ಜಿರಳೆ ಪತ್ತೆ: ಹೋಟೆಲ್​ ಸೀಲ್​ಡೌನ್

|

Updated on: Mar 06, 2025 | 3:17 PM

ಇತ್ತೀಚೆಗೆ ಬೆಂಗಳೂರಿನ ಹಲವು ಹೋಟೆಲ್‌ಗಳಲ್ಲಿ ನೀಡಲಾಗುವ ಇಡ್ಲಿ ಸ್ಯಾಂಪಲ್‌ಗಳನ್ನು ಪರಿಶೀಲಿಸಲಾಗಿ, ಅವುಗಳಲ್ಲಿ ಕ್ಯಾನ್ಸರ್‌ಕಾರಕ ಕೆಮಿಕಲ್‌ ಅಂಶ ಕಂಡುಬಂದಿತ್ತು. ಹೀಗಾಗಿ ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಬ್ಯಾನ್‌ ಮಾಡಲಾಗಿದೆ. ಇದೀಗ ಒಂದು ಜಿರಳೆ ಹೋಟೆಲ್‌ ಮಾಲಿಕರಿಗೆ ಕುತ್ತು ತಂದಿದೆ. ಹೌದು..ಗ್ರಾಹಕರ ಇಬ್ಬರಿಗೆ ನೀಡಿದ್ದ ಇಡ್ಲಿ ಸಾಂಬಾರ್​ನಲ್ಲಿ ಜಿರಳೆ ಪತ್ತೆಯಾಗಿದ್ದು, ಕೂಡಲೇ ಗ್ರಾಹಕ ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಬೆಂಗಳೂರು, (ಮಾರ್ಚ್​ 06): ಬೆಂಗಳೂರಿನ (Bengaluru) ಹೋಟೆಲ್‌ಗಳಲ್ಲಿ ಇಡ್ಲಿ ತಯಾರಿಸಲು ಪ್ಲಾಸ್ಟಿಕ್​ ಬಳಕೆ ಮಾಡುವುದರಿಂದ ಕ್ಯಾನ್ಸರ್​ಕಾರಕ ಅಂಶ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವಾಲಯ ಹೋಟೆಲ್‌ಗಳಲ್ಲಿ ಇಡ್ಲಿ ತಯಾರಿಸಲು ಪ್ಲಾಸ್ಟಿಕ್‌ ಬಳಕೆ ಬ್ಯಾನ್‌ (Plastic ban) ಮಾಡಿದೆ. ಇದರ ಬೆನ್ನಲ್ಲೇ ಇದೀಗ ಬೆಂಗಳೂರಿನ ಬೊಮ್ಮಸಂದ್ರದ ಬ್ರಾಹ್ಮಿನ್ಸ್ ವೆಜ್‌ ಕೆಫೆ ಹೋಟೆಲ್​ನ Brahmin Cafe Hotel) ಇಡ್ಲಿ ಸಾಂಬಾರ್‌ನಲ್ಲಿ (Idly Sambar) ಜಿರಳೆ (Cockroach) ಕಂಡುಬಂದಿದೆ. ಇದರಿಂದ ಗ್ರಾಹಕ ಶಾಕ್​ ಆಗಿದ್ದು, ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಬಂದು ಬ್ರಾಹ್ಮಿನ್ ಕೆಫೆಯನ್ನು ಸೀಲ್​ಡೌನ್ ಮಾಡಿದ್ದಾರೆ.

Published on: Mar 06, 2025 03:16 PM