ತಾಳಿ ಕಟ್ಟಿಸಿಕೊಳ್ಳಲು ಒಲ್ಲೆನೆಂದ ಚಿತ್ರದುರ್ಗದ ಯುವತಿಗೆ ರೂ. 4.70 ಲಕ್ಷ ವಧುದಕ್ಷಿಣೆ ನೀಡಲಾಗಿತ್ತಂತೆ!

|

Updated on: Dec 08, 2023 | 5:34 PM

ಯುವತಿ ಮಾಂಗಲ್ಯ ಸೂತ್ರ ಕಟ್ಟಿಸಿಕೊಳ್ಳಲು ಒಲ್ಲೆ ಅಂದಾಗ ವಧು ಮತ್ತು ವರನ ಕುಟುಂಬದವರ ನಡುವೆ ಮಾತಿನ ಜಟಾಪಟಿ ನಡೆದಿದ್ದು ನಿಜ. ಆದರೆ, ಮದುವೆ ನಿಂತುಹೋಗಿದ್ದು ಎರಡು ಕುಟುಂಬಗಳಿಗೂ ಒಳ್ಳೆಯದೇ. ಯುವತಿ ತನಗೆ ಬೇಡದ ಗಂಡನ ಜೊತೆ ಸಂಸಾರವನ್ನಂತೂ ನಡೆಸುತ್ತಿರಲಿಲ್ಲ, ಯುವಕ ಮತ್ತು ಅವನ ಕುಟುಂಬದವರು ಪ್ರತಿದಿನ ನೊಂದುಕೊಳ್ಳಬೇಕಾಗುತಿತ್ತು.

ಚಿತ್ರದುರ್ಗ: ತಾಳಿ ಕಟ್ಟುವ ಶುಭ ವೇಳೆ… ಅಶುಭವಾಗಿದ್ದನ್ನು ನಾವು ಈಗಾಗಲೇ ಹೇಳಿದ್ದೇವೆ. ಜಿಲ್ಲೆಯ ಹೊಸದುರ್ಗ (Hosadurga) ತಾಲ್ಲೂಕಿನ ಚಿಕ್ಕಬ್ಯಾಲದಕೆರೆಯ ಬೈರವೇಶ್ವರ ಕಲ್ಯಾಣ ಮಂಟಪದಲ್ಲಿ ವಧುವಾಗಿ (bride) ಕುಳಿತಿದ್ದ ಯುವತಿಯೊಬ್ಬಳು, ತನ್ನೊಂದಿಗೆ ಮದುವೆಗೆ ನಿಶ್ಚಿತಾರ್ಥಗೊಂಡಿದ್ದ ವರ (bridegroom) ಇನ್ನೇನು ಕೊರಳಿಗೆ ಮಾಂಗಲ್ಯಸೂತ್ರ ಕಟ್ಟುವ ಸಮಯದಲ್ಲಿ ಮದುವೆ ಬೇಕಿಲ್ಲ ಎಂದು ಮಂಟಪದಿಂದ ಎದ್ದಿದ್ದಳು. ಯುವಕನ ಸಂಬಂಧಿಯಾಗಿರುವ ರಮೇಶ್ ಎನ್ನುವವರು ಟಿವಿ9 ವರದಿಗಾರನೊಂದಿಗೆ ಮಾತಾಡಿದ್ದು ಯುವತಿ ಮದುವೆ ಯಾಕೆ ನಿರಾಕರಿಸಿದಳು ಅನ್ನೋದಕ್ಕೆ ಸ್ಪಷ್ಟ ಕಾರಣ ನೀಡಲ್ಲ. ಯುವತಿ ಕುಟುಂಬಕ್ಕೆ ರೂ. 4.7 ಲಕ್ಷ ವಧು ದಕ್ಷಿಣೆ ರೂಪದಲ್ಲಿ ನೀಡಲಾಗಿತ್ತು ಮತ್ತು ಸಾಕಷ್ಟು ಒಡವೆಯನ್ನೂ ಹಾಕಲಾಗಿತ್ತು, ಆದರೂ ಆಕೆ ತಾಳಿ ಕಟ್ಟಿಸಿಕೊಳ್ಳಲಿಲ್ಲ ಎಂದು ರಮೇಶ್ ಹೇಳುತ್ತಾರೆ. ಪ್ರಾಯಶಃ ಯುವತಿಗೆ ಇದಕ್ಕಿಂತ ಮೊದಲೇ ನಿಶ್ಚಿತಾರ್ಥವಾಗುತ್ತಿನೋ ಎಂಬ ಸಂಶಯ ಅವರು ವ್ಯಕ್ತಪಡಿಸುತ್ತಾರೆ. ಲವ್-ಪ್ರೀತಿ-ಪ್ರೇಮ ಬಗ್ಗೆ ಏನಾದರೂ ಸುಳಿವು ಅಂತ ಕೇಳಿದರೆ ಗೊತ್ತಿಲ್ಲ ಎನ್ನುವ ರಮೇಶ್ ವಿದ್ಯಾವಂತೆರಾಗುತ್ತಿರುವ ಮಹಿಳೆಯರ ಸ್ವಾವಲಂಬಿಗಳಾಗಿ ಜೀವಿಸಲು ಇಷ್ಟಪಡುತ್ತಾರೆ ಎಂದು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ