ಹೈದರಾಬಾದ್‌ನಲ್ಲಿ ಸೊಳ್ಳೆ ಪರದೆ ಧರಿಸಿ ಪ್ರತಿಭಟನೆ ನಡೆಸಿದ ಬಿಆರ್‌ಎಸ್ ಶಾಸಕ

Updated on: Apr 02, 2026 | 4:14 PM

ಬಿಆರ್‌ಎಸ್ ಶಾಸಕ ಸುಧೀರ್ ರೆಡ್ಡಿ ಇಂದು ಹೈದರಾಬಾದ್​ನ ವಿಧಾನಸಭೆ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಗೆ ಸೊಳ್ಳೆ ಪರದೆ ಧರಿಸಿಕೊಂಡು, ಫಾಗಿಂಗ್ ಯಂತ್ರವನ್ನು ಹಿಡಿದುಕೊಂಡು ಆಗಮಿಸಿದ್ದಾರೆ. ಹೈದರಾಬಾದ್ ನಗರದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಸೊಳ್ಳೆ ಸಮಸ್ಯೆಯ ವಿರುದ್ಧ ಅವರು ಈ ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಮೊದಲು ಮಾಧ್ಯಮ ಕೇಂದ್ರಕ್ಕೆ ಸೊಳ್ಳೆ ಪರದೆ ಮತ್ತು ಫಾಗಿಂಗ್ ಯಂತ್ರವನ್ನು ಕೊಂಡೊಯ್ಯಲು ಪ್ರಯತ್ನಿಸಿದಾಗ ಸುಧೀರ್ ರೆಡ್ಡಿ ಅವರಿಗೆ ವಿಧಾನಸಭೆ ಸಿಬ್ಬಂದಿ ಅನುಮತಿ ನಿರಾಕರಿಸಿದರು. ಭದ್ರತಾ ಸಿಬ್ಬಂದಿಯ ಈ ವರ್ತನೆಯ ಬಗ್ಗೆ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್, ಏಪ್ರಿಲ್ 2: ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಶಾಸಕ ಸುಧೀರ್ ರೆಡ್ಡಿ ಇಂದು ಹೈದರಾಬಾದ್​ನ (Hyderabad) ವಿಧಾನಸಭೆ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಗೆ ಸೊಳ್ಳೆ ಪರದೆ ಧರಿಸಿಕೊಂಡು, ಫಾಗಿಂಗ್ ಯಂತ್ರವನ್ನು ಹಿಡಿದುಕೊಂಡು ಆಗಮಿಸಿದ್ದಾರೆ. ಹೈದರಾಬಾದ್ ನಗರದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಸೊಳ್ಳೆ ಸಮಸ್ಯೆಯ ವಿರುದ್ಧ ಅವರು ಈ ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಮೊದಲು ಮಾಧ್ಯಮ ಕೇಂದ್ರಕ್ಕೆ ಸೊಳ್ಳೆ ಪರದೆ ಮತ್ತು ಫಾಗಿಂಗ್ ಯಂತ್ರವನ್ನು ಕೊಂಡೊಯ್ಯಲು ಪ್ರಯತ್ನಿಸಿದಾಗ ಸುಧೀರ್ ರೆಡ್ಡಿ ಅವರಿಗೆ ವಿಧಾನಸಭೆ ಸಿಬ್ಬಂದಿ ಅನುಮತಿ ನಿರಾಕರಿಸಿದರು. ಭದ್ರತಾ ಸಿಬ್ಬಂದಿಯ ಈ ವರ್ತನೆಯ ಬಗ್ಗೆ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಸುಧೀರ್ ರೆಡ್ಡಿ, ಸೊಳ್ಳೆ ಸಮಸ್ಯೆಯ ತೀವ್ರತೆಯಿಂದಾಗಿ ಜನರು ಹೈದರಾಬಾದ್‌ನಿಂದ ಪಲಾಯನ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಪರಿಸ್ಥಿತಿಯು ನಗರದ ಬ್ರಾಂಡ್ ಇಮೇಜ್‌ಗೆ ಹಾನಿ ಮಾಡುತ್ತಿದೆ ಎಂದ ಅವರು ಸೊಳ್ಳೆಗಳ ಕಾಟದಿಂದ ಸಾರ್ವಜನಿಕರನ್ನು ರಕ್ಷಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More