ಪ್ರಚಾರಕ್ಕೆ ತೆರಳಿದ್ದ ಬಿಎಸ್​ ಯಡಿಯೂರಪ್ಪ ಕಾರು ಪಂಚರ್; ಬೇರೆ ಕಾರ್​ನಲ್ಲಿ ತೆರಳಿದ ರಾಜಹುಲಿ

|

Updated on: Apr 16, 2024 | 6:30 PM

ಬಿ.ಎಸ್​.ಯಡಿಯೂರಪ್ಪ (BS Yediyurappa) ಕಾರು ಪಂಕ್ಚರ್ ಆಗಿದ್ದು, ಕಾರಿನಿಂದ ಇಳಿದು ಮತ್ತೊಂದು ಕಾರಿನಲ್ಲಿ ತೆರಳಿದ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ(Kudligi) ತಾಲೂಕಿನ  ಖಾನಾಹೊಸಹಳ್ಳಿಯಲ್ಲಿ ನಡೆದಿದೆ. ಬಿಜೆಪಿ ಸಮಾವೇಶ ಮುಗಿಸಿ ಹೊರಟಿದ್ದ ವೇಳೆ ಕಾರು ಪಂಕ್ಚರ್ ಆಗಿದ್ದು ಗೊತ್ತಾಗಿದೆ.

ವಿಜಯನಗರ, ಏ.16: ರಾಜ್ಯದೆಲ್ಲೆಡೆ ಲೋಕಸಭಾ ಚುನಾವಣಾ ಕಾವು ರಂಗೇರಿದ್ದು, ಅದರಂತೆ ಉಭಯ ಪಕ್ಷಗಳು ಅಬ್ಬರದ ಪ್ರಚಾರ ಕೈಗೊಂಡಿವೆ. ಅದರಂತೆ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ (BS Yediyurappa) ಕೂಡ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಇದೇ ವೇಳೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ(Kudligi) ತಾಲೂಕಿನ  ಖಾನಾಹೊಸಹಳ್ಳಿಯಲ್ಲಿ ಬಿ.ಎಸ್​.ಯಡಿಯೂರಪ್ಪ  ಕಾರು ಪಂಕ್ಚರ್ ಆಗಿದ್ದು, ಕಾರಿನಿಂದ ಇಳಿದು ಮತ್ತೊಂದು ಕಾರಿನಲ್ಲಿ ತೆರಳಿದ್ದಾರೆ. ಬಿಜೆಪಿ ಸಮಾವೇಶವನ್ನು ಮುಗಿಸಿ ಹೊರಟಿದ್ದರು, ಈ ವೇಳೆ ಕಾರು ಹತ್ತುತ್ತಿದ್ದಂದೆ ಪಂಕ್ಚರ್ ಆಗಿರುವುದು ಗೊತ್ತಾಗಿದ್ದು, ಹತ್ತಿದ ಕಾರು ಇಳಿದು, ಬೇರೆ ಕಾರಿನ ಮೂಲಕ ಹೂವಿನ ಹಡಗಲಿ ಕಡೆ ಹೊರಟಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published on: Apr 16, 2024 06:14 PM