ಜೆಡಿಎಸ್ ಜೊತೆ ಮೈತ್ರಿಯ ಬಗ್ಗೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ನಿರ್ಧಾರ ತೆಗೆದುಕೊಳ್ಳುತ್ತಾರೆ: ಬಿಎಸ್ ಯಡಿಯೂರಪ್ಪ

|

Updated on: Sep 12, 2023 | 2:19 PM

ಕಳೆದ 2-3 ತಿಂಗಳುಗಳ ಜಡತ್ವವನ್ನು ಕೊಡವಿಕೊಂಡಿರುವ ಯಡಿಯೂರಪ್ಪ ಮೊದಲಿನ ಹಾಗೆ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಇಂದು ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಬಿಜೆಪಿ ಚುನಾವಣಾ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ಬುಧವಾರ ದೆಹಲಿಗೆ ಹೋಗುತ್ತಿರುವೆನೆಂದು ಹೇಳಿದರು.

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಅವರನ್ನು ಕಡೆಗಣಿಸಿದರೆ ರಾಜ್ಯದಲ್ಲಿ ಬಿಜೆಪಿ ಶೋಚನೀಯ ಸ್ಥಿತಿ ತಲುಪಲಿದೆ ಅಂತ ತಡವಾದರೂ ದೆಹಲಿ ವರಿಷ್ಠರಿಗೆ ಮನವರಿಕೆಯಾದಂತಿದೆ. ಹಾಗಾಗೇ, ಕಳೆದ 2-3 ತಿಂಗಳುಗಳ ಜಡತ್ವವನ್ನು ಕೊಡವಿಕೊಂಡಿರುವ ಯಡಿಯೂರಪ್ಪ ಮೊದಲಿನ ಹಾಗೆ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಇಂದು ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಬಿಜೆಪಿ ಚುನಾವಣಾ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ಬುಧವಾರ ದೆಹಲಿಗೆ ಹೋಗುತ್ತಿರುವೆನೆಂದು ಹೇಳಿದರು. ಜೆಡಿಎಸ್ ಜೊತೆ ಮೈತ್ರಿಯ ಪ್ರಸ್ತಾಪ ಅವರೇ ಮುಂದಿಟ್ಟಿದ್ದರೂ ಆ ಬಗ್ಗೆ ಕೇಳಿದ ಪ್ರಶ್ನೆಗೆ, ತನಗೇನು ಗೊತ್ತ್ತಿಲ್ಲ, ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಮತ್ತು ಅಮಿತ್ ಶಾ (Amit Shah) ಮೈತ್ರಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು. ದೆಹಲಿಯಿಂದ ವಾಪಸ್ಸಾದ ಬಳಿಕ ಯಡಿಯೂರಪ್ಪ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರಂತೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Sep 12, 2023 02:19 PM