AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಧಾನ ಸಭಾ ಚುನಾವಣೆಯಲ್ಲಿ ಸೋತ ರಾಜುಗೌಡಗೂ ಬಿಜೆಪಿ ರಾಜ್ಯಾಧ್ಯಕ್ಷನಾಗುವ ಆಸೆ!

ವಿಧಾನ ಸಭಾ ಚುನಾವಣೆಯಲ್ಲಿ ಸೋತ ರಾಜುಗೌಡಗೂ ಬಿಜೆಪಿ ರಾಜ್ಯಾಧ್ಯಕ್ಷನಾಗುವ ಆಸೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 12, 2023 | 12:28 PM

ರಾಜು ಗೌಡ, ಆಫ್ ಕೋರ್ಸ್ ಯುವಕ ಮತ್ತು ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಅದರಲ್ಲಿ ಎರಡು ಮಾತಿಲ್ಲ. ಆದರೆ ಅವರು ಯಾದಗಿರಿ ಜಿಲ್ಲೆಯೊಂದನ್ನು ಬಿಟ್ಟರೆ, ಪಕ್ಕದ ಕಲಬುರಗಿ, ಬೀದರ್ ಮತ್ತು ರಾಯಚೂರು ಜಿಲ್ಲೆಗಳ ಜನರಿಗೆ ಹೆಚ್ಚು ಪರಿಚಿತರಲ್ಲ. ಇನ್ನು ಕೇಂದ್ರ, ದಕ್ಷಿಣ ಮತ್ತು ಕರಾವಳಿ ಕರ್ನಾಟಕದಲ್ಲಿ ಜನ ಅವರನ್ನು ಗುರುತಿಸಿಯಾರೇ?

ಯಾದಗಿರಿ: ವಿಧಾನ ಸಭಾ ಚುನಾವಣೆಯಲ್ಲಿ (Assembly polls) ಹೀನಾಯ ಸೋಲು ಅನುಭವಿಸಿದ ಬಳಿಕ ರಾಜ್ಯ ಬಿಜೆಪಿ ನಾಯಕರು ಹತಾಷರಾಗಿರೋದು ಸತ್ಯ. ಆದರೆ ವಿಡಂಬನೆಯ ಸಂಗತಿಯೆಂದರೆ ಅವರಲ್ಲಿ ಅಧಿಕಾರದ ಲಾಲಸೆ ಬತ್ತಿಲ್ಲ. ವಿಡಯೋದಲ್ಲಿ ಕಾಣುತ್ತಿರೋರು ಚುನಾವಣೆಯಲ್ಲಿ ಸೋತ ಬಿಜೆಪಿ ನಾಯಕ ನರಸಿಂಹ ನಾಯಕ್ (Narasimha Nayak) ಅಲಿಯಾಸ್ ರಾಜುಗೌಡ. ಇವರು ರಾಜುಗೌಡ ಅಂತ ಪರಿಚಿತರು. ಎಲೆಕ್ಷನ್ ನಲ್ಲಿ ಸೋತರೂ ಇವರು ಬಿಜೆಪಿಯ ರಾಜ್ಯಾಧ್ಯಕ್ಷ (BJP state unit president) ನಾಯಕನಾಗುವ ಆಸೆ ಇಟ್ಟುಕೊಂಡಿದ್ದಾರೆ! ಪಕ್ಷದ ಹಿರಿಯ ಮತ್ತು ಪ್ರಬಲ ನಾಯಕರು ತೆಪ್ಪಗೆ ಕುಳಿತಿರೋದು ಕನ್ನಡಿಗರಿಗೆ ಗೊತ್ತಿಲ್ಲದ ಸಂಗತಿಯೇನಲ್ಲ. ರಾಜಕೀಯ ನಾಯಕರಿಗೆ ಆಸೆ ಆಕಾಂಕ್ಷೆ ಇರಬಾರದು ಅಂತೇನಿಲ್ಲ, ಆದರೆ ದುರಾಸೆ ಇರಬಾರದು ಮಾರಾಯ್ರೇ. ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ, ಇಂದು ಜಿಲ್ಲೆಯ ಹುಣಸಗಿಯಲ್ಲಿ ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ರಾಜು ಗೌಡ, ಆಫ್ ಕೋರ್ಸ್ ಯುವಕ ಮತ್ತು ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಅದರಲ್ಲಿ ಎರಡು ಮಾತಿಲ್ಲ. ಆದರೆ ಅವರು ಯಾದಗಿರಿ ಜಿಲ್ಲೆಯೊಂದನ್ನು ಬಿಟ್ಟರೆ, ಪಕ್ಕದ ಕಲಬುರಗಿ, ಬೀದರ್ ಮತ್ತು ರಾಯಚೂರು ಜಿಲ್ಲೆಗಳ ಜನರಿಗೆ ಹೆಚ್ಚು ಪರಿಚಿತರಲ್ಲ. ಇನ್ನು ಕೇಂದ್ರ, ದಕ್ಷಿಣ ಮತ್ತು ಕರಾವಳಿ ಕರ್ನಾಟಕದಲ್ಲಿ ಜನ ಅವರನ್ನು ಗುರುತಿಸಿಯಾರೇ? ಅವರು ಮಾಸ್ ಲೀಡರ್ ಅಂತ ಗುರುತಿಸಿಕೊಂಡವರೂ ಅಲ್ಲ. ಪರಿಸ್ಥಿತಿ ಹೀಗಿರುವಾಗ ಅವರು ಬಿಜೆಪಿ ರಾಜ್ಯಾಧ್ಯಕ್ಷನ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿ ಅಂತ ಅದ್ಹೇಗೆ ಹೇಳುತ್ತಾರೋ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ