ಬೆಳಗಾವಿ ಗೂಂಡಾಗಳ ಗುಂಪಿನ ಅಟ್ಟಹಾಸ: ನಾವಗೆ ಗ್ರಾಮ ಸದ್ಯಕ್ಕೆ ಶಾಂತವಾಗಿದೆ, ಆದರೆ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ!

ಬೆಳಗಾವಿ ಗೂಂಡಾಗಳ ಗುಂಪಿನ ಅಟ್ಟಹಾಸ: ನಾವಗೆ ಗ್ರಾಮ ಸದ್ಯಕ್ಕೆ ಶಾಂತವಾಗಿದೆ, ಆದರೆ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 02, 2024 | 11:46 AM

ಸದ್ಯಕ್ಕೆ ಗ್ರಾಮದಲ್ಲಿ ಪೊಲೀಸರು ಬೀಡು ಬಿಟ್ಟಿರುವುದರಿಂದ ಶಾಂತಿ ನೆಲೆಸಿದೆ. ಆದರೆ ಅದು ತಾತ್ಕಾಲಿಕ. ಯಾಕೆಂದರೆ ಪುಂಡಾಟ ನಡೆಸಿದ್ದು ಯಾರೆಂದು ನಾವಗೆ ಗ್ರಾಮದ ಯುವಕರಿಗೆ ಗೊತ್ತಿದೆ ಮತ್ತು ಪ್ರತೀಕಾರದ ಜ್ವಾಲೆ ಅವರಲ್ಲಿ ಹೊತ್ತಿರಲೂಬಹುದು. ಈ ಹಿನ್ನೆಲೆಯಲ್ಲೇ ಜಿಲ್ಲಾ ಉಸ್ತುವಾರಿ ಸಚಿವರ ಮಧ್ಯಸ್ಥಿಕೆ ಮುಖ್ಯ ಮತ್ತು ಮಹತ್ವದೆನಿಸುತ್ತದೆ. ಸತೀಶ್ ಜಾರಕಿಹೊಳಿ ಎರಡೂ ಗುಂಪಗಳನ್ನು ಕೂರಿಸಿಕೊಂಡು ಮಾತಾಡಲೇಬೇಕು.

ಬೆಳಗಾವಿ: ಕಳೆದ ರಾತ್ರಿ ಶಸ್ತ್ರಧಾರಿ ಗೂಂಡಾಗಳ (armed goondas) ಗುಂಪೊಂದು ಬೆಳಗಾವಿ ತಾಲ್ಲೂಕಿನ ನಾವಗೆ ಗ್ರಾಮಕ್ಕೆ (Navage village) ನುಗ್ಗಿ ನಾಲ್ಕೈದು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ ಮನೆಗಳ ಮುಂದಿದ್ದ ವಾಹನಗಳನ್ನು ಜಖಂಗೊಳಿರುವ ಘಟನೆ ಗ್ರಾಮಸ್ಥರನ್ನು (residents) ಹೆದರಿಕೆ ಮತ್ತು ಆತಂಕದಿಂದ ತಲ್ಲಣಿಸುವಂತೆ ಮಾಡಿದೆ. ಗ್ರಾಮದ ಈ ಮಹಿಳೆ ಹೇಳುವ ಹಾಗೆ ಸುಮಾರ 25-30 ಸದಸ್ಯರಿದ್ದ ಮುಸಕುಧಾರಿ ಪುಂಡರ ಗುಂಪು ಕೈಗಳಲ್ಲಿ ತಲ್ವಾರ್, ರಾಡ್ ಮತ್ತು ಪಿಸ್ತೂಲುಗಳನ್ನು ಹಿಡಿದು ಪಂಚಾಯಿತಿ ಸದಸ್ಯರು ಮತ್ತು ಬೇರೆ ಕೆಲವರ ಮನೆಗಳನ್ನು ಸಹ ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ತೀವ್ರ ಸ್ವರೂಪದ ಭಯ ಮತ್ತು ಆತಂಕಕ್ಕೊಳಗಾಗಿದ್ದ ತಾವು ಮನೆಗಳಿಂದ ಯುವಕರನ್ನು ಹೊರಗೆ ಹೋಗಲು ಬಿಡಲಿಲ್ಲ, ಅವರೇನಾದರೂ ಹೋಗಿದ್ದರೆ ಜೀವಗಳಿಗೆ ಅಪಾಯವಿತ್ತು ಎಂದು ಆಕೆ ಹೇಳುತ್ತಾರೆ. ಪ್ರೀತಿ-ಪ್ರೇಮದ ವಿಷಯದಲ್ಲಿ ಗಲಾಟೆ ನಡೆದಿದೆ ಅಂತ ಹೇಳಲಾಗುತ್ತಿದೆಯಾದರೂ, ಪೊಲೀಸರಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ವಿಷಯ ಏನೇ ಇರಲಿ, ನಾಗರಿಕ ಸಮಾಜದಲ್ಲಿ ಇಂಥ ಘಟನೆಗಳು ಸಲ್ಲವು. ಗೂಂಡಾಗಳು ಆಯಧಗಳನ್ನು ಹಿಡಿದು ಊರುಗಳಿಗೆ ನುಗ್ಗಿ ದಾಂಧಲೆ ನಡೆಸುವುದು ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಮಾತ್ರ ನಡೆಯುತ್ತದೆ. ಆ ಸಂಸ್ಕೃತಿ ನಮ್ಮಲ್ಲೂ ಶುರುವಾಯಿತೇ ಎಂಬ ಆತಂಕ ಕನ್ನಡಿಗರನ್ನು ಕಾಡದಿರದು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಇದುವರೆಗೆ ಹೇಳಿಕೆ ನೀಡಿಲ್ಲ. ಅವರು ಮಾತಾಡುವ ಅವಶ್ಯಕತೆಯಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ