ರಾಶಿಕಾ ಮೇಲೆ ಕಸ ಸುರಿದ ಕ್ಯಾಪ್ಟನ್ ಮಾಳು; ಮಧ್ಯ ಪ್ರವೇಶಿಸಿದ ಗಿಲ್ಲಿ ನಟ

Updated on: Nov 11, 2025 | 8:31 AM

‘ಬಿಗ್ ಬಾಸ್’ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ಸಾಕಷ್ಟು ಕುತೂಹಲ ಮೂಡಿಸುವ ರೀತಿ ಇರುತ್ತದೆ. ಈ ವಾರ ಬುಗ್ ಬಾಸ್​ನಲ್ಲಿ ಒಂದು ಘಟನೆ ನಡೆದಿದೆ. ಈ ಘಟನೆಯಲ್ಲಿ ರಾಶಿಕಾ ಮೇಲೆ ಮಾಳು ಅವರು ಕಸ ಸುರಿದಿದ್ದಾರೆ. ಇದು ನಾಮಿನೇಷನ್ ಪ್ರಕ್ರಿಯೆ ಭಾಗ ಇರಬೇಕು ಎನ್ನಲಾಗುತ್ತಿದೆ.

ಬಿಗ್ ಬಾಸ್ ಮನೆಯಲ್ಲಿ ಪ್ರತಿವಾರ ನಾಮಿನೇಷನ್ ಪ್ರಕ್ರಿಯೆ ಜೋರಾಗಿ ಸಾಗುತ್ತದೆ. ಈ ಬಾರಿಯೂ ಸ್ಪರ್ಧಿಗಳ ಮಧ್ಯೆ ಮಾತಿನಚಕಮಕಿ ನಡೆದಿದೆ. ರಾಶಿಕಾ ಅವರನ್ನು ‘ಕಸ’ ಎಂದು ಕರೆದ ಮಾಳು, ಅವರ ಮೇಲೆ ಕಸ ಚಲ್ಲಿದ್ದಾರೆ. ಆ ಬಳಿಕ ರಾಶಿಕಾ ‘ಥೂ’ ಎಂದರು. ಈ ವೇಳೆ ಗಿಲ್ಲಿ ಅವರು, ‘ಥೂ’ ಎಂದಿದ್ದಾರೆ. ಇದರಿಂದ ರಾಶಿಕಾ ಹಾಗೂ ಗಿಲ್ಲಿ ಮಧ್ಯೆ ಮಾತಿನ ಚಕಮಕಿ ನಡೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Nov 11, 2025 08:30 AM
Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More