ಸಮಸ್ಯೆ ಎಷ್ಟೇ ದೊಡ್ಡದಿದ್ದರೂ ಬಗೆಹರಿಸಲು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇದ್ದಾರೆ: ಕೃಷ್ಣ ಭೈರೇಗೌಡ, ಕಂದಾಯ ಸಚಿವ

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Jul 31, 2023 | 2:38 PM

ಜನತೆ ಸರ್ಕಾರದ ಮೇಲೆ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ, ಅವರ ನಿರೀಕ್ಷೆ ಹುಸಿಹೋಗಬಾರದೆನ್ನುವುದೇ ಸರ್ಕಾರ ಗುರಿಯಾಗಿದೆ ಎಂದು ಕೃಷ್ಣ ಭೈರೇಗೌಡ ಹೇಳಿದರು.

ಕಲಬುರಗಿ: ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತಾಡಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ (Krishna Byre Gowda) ಶಾಸಕರಿಗೆ ಅನುದಾನ ಹಂಚಿಕೆಯಲ್ಲಿ ಹೆಚ್ಚು ಕಡಿಮೆ ಆಗೋದು ಸಹಜ ಯಾರಿಗೂ ಕೇಳಿದಷ್ಟು ಅನುದಾನ ಸಿಗೋದಿಲ್ಲ, ಹೆಚ್ಚು ಕಡಿಮೆಯಾದಾಗ ಎಲ್ಲವನ್ನು ಸರಿದೂಗಿಸಿಕೊಂಡು ಹೋಗೋದು ಮಾನವನನ ಸ್ವಾಭಾವಿಕ ಗುಣ ಎಂದು ಹೇಳಿದರು. ಕ್ಯಾಪ್ಟನ್ ಸಿದ್ದರಾಮಯ್ಯ (Captain Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನೇತೃತ್ವದದ ಸರ್ಕಾರದ ಗುರಿಯನ್ನು ಶಾಸಕರು ಮರೆಯಬಾರದು, ಜನರಿಗೆ ಉತ್ತಮ ಆಡಳಿತ ನೀಡುವುದು ಸರಕಾರದ ಸಂಕಲ್ಪವಾಗಿದೆ, ಜನತೆ ಸರ್ಕಾರದ ಮೇಲೆ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ, ಅವರ ನಿರೀಕ್ಷೆ ಹುಸಿಹೋಗಬಾರದದೆನ್ನುವುದೇ ಸರ್ಕಾರ ಗುರಿಯಾಗಿದೆ ಎಂದು ಕೃಷ್ಣ ಭೈರೇಗೌಡ ಹೇಳಿದರು. ಇಬ್ಬರಿದ್ದ ಕಡೆ ಒಂದೇ ಅಭಿಪ್ರಾಯ ಇರೋದಿಲ್ಲ, ಸಣ್ಣಪುಟ್ಟ ವ್ಯತ್ಯಾಸಗಳಿರೋದು ಸಹಜ, ಸಮಸ್ಯೆಗಳನ್ನು ಬಗೆಹರಿಸಲು ಮುಖ್ಯಮಂತ್ರಿಗಳಿದ್ದಾರೆ ಮತ್ತು ಉಪ ಮುಖ್ಯಮುಖ್ಯಮಂತ್ರಿಗಳಿದ್ದಾರೆ. ಕೂತು ಚರ್ಚಿಸಿದರೆ ಭಿನ್ನಾಭಿಪ್ರಾಯಗಳು ನಿವಾರಣೆಯಾಗುತ್ತವೆ ಎಂದು ಭೈರೇಗೌಡ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
TV9 Web

TV9 Kannada

Read More