ಪೊಲೀಸರಿಂದ ಕಾರು ಚೆಕ್ಕಿಂಗ್: ಕವರ್ನಲ್ಲಿರೋದು ದುಡ್ಡಲ್ಲ ಸರ್ ತಂದೂರಿ ರೋಟಿ ಎಂದ ಸವಾರ
ವಿಧಾನಸಭೆ ಚುನಾವಣೆ ದಿನಾಂಕ ನಿಗದಿಯಾದ ಬೆನ್ನಲ್ಲೆ ಚುನಾವಣಾ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಚುನಾವಣಾ ಅಧಿಕಾರಿಗಳು ಜಿಲ್ಲೆಯಲ್ಲಿ ಪ್ರತಿಯೊಂದು ವಾಹನ ಪರಿಶೀಲಿಸುತ್ತಿದ್ದಾರೆ.
ತುಮಕೂರು: ವಿಧಾನಸಭೆ ಚುನಾವಣೆ ದಿನಾಂಕ ನಿಗದಿಯಾದ ಬೆನ್ನಲ್ಲೆ ಚುನಾವಣಾ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಚೆಕ್ಪೋಸ್ಟ್ಗಳನ್ನ ನಿರ್ಮಿಸಿ ಚುನಾವಣಾ ಅಧಿಕಾರಿಗಳು ಹದ್ದಿನ ಕಣ್ಣು ಇಟ್ಟಿದ್ದಾರೆ. ಅದರಂತೆ ತುಮಕೂರು ಜಿಲ್ಲೆಯಲ್ಲಿ ಪ್ರತಿಯೊಂದು ವಾಹನವನ್ನ ಆಫೀಸರ್ಸ್ಗಳು ಚೆಕ್ ಮಾಡುತ್ತಿದ್ದು, ಪೊಲೀಸರಿಂದ ಕಾರು ಚೆಕ್ಕಿಂಗ್ ವೇಳೆ ಕವರ್ನಲ್ಲಿರುವುದು ಏನು ಎಂದು ಪೊಲೀಸ್ ಅಧಿಕಾರಿ ಪ್ರಶ್ನಿಸಿದ ಬೆನ್ನಲ್ಲೆ ಸವಾರ ‘ದುಡ್ಡಲ್ಲ ಸರ್ ಅದು ತಂದೂರಿ ರೋಟಿ ಎಂದಿದ್ದಾನೆ. ಹೌದು ಕಾರುಗಳಲ್ಲಿನ ಇಂಚಿಂಚೂ ಜಾಗವನ್ನ ಪರಿಶೀಲಿಸುತ್ತಿದ್ದಾರೆ. ಜೊತೆಗೆ ವಾಹನಗಳಲ್ಲಿ ಪ್ರಯಾಣಿಸುತ್ತಿರುವ ಪ್ರತಿಯೊಬ್ಬರ ಮಾಹಿತಿಯನ್ನ ಕೂಡ ಚುನಾವಣೆ ಹಿನ್ನಲೆ ದಾಖಲು ಮಾಡಿಕೊಳ್ಳಲಾಗುತ್ತಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ