Hanuman Jayanti: ಕೊಪ್ಪಳ ಅಂಜನಾದ್ರಿ ಬೆಟ್ಟದಲ್ಲಿ ಭಕ್ತರ ದಂಡು, ರಾಮಭಕ್ತನ ಸನ್ನಿಧಿಯಲ್ಲಿ ಹನುಮ ಮಾಲೆ ವಿಸರ್ಜನೆ

Hanuman Jayanti: ಕೊಪ್ಪಳ ಅಂಜನಾದ್ರಿ ಬೆಟ್ಟದಲ್ಲಿ ಭಕ್ತರ ದಂಡು, ರಾಮಭಕ್ತನ ಸನ್ನಿಧಿಯಲ್ಲಿ ಹನುಮ ಮಾಲೆ ವಿಸರ್ಜನೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 06, 2023 | 10:30 AM

ಮಾಜಿ ಸಚಿವ ಶಿವರಾಜ ತಂಗಡಗಿ ಕೂಡ ಅಂಜನಾದ್ರಿ ಬೆಟ್ಟದ ಮೇಲೆ ಹನುಮ ಮಾಲೆ ವಿಸರ್ಜಿಸಿದ ಭಕ್ತರಲ್ಲಿ ಒಬ್ಬರು.

ಕೊಪ್ಪಳ: ದೇಶದಾದ್ಯಂತ ಹನುಮ ಜಯಂತಿಯನ್ನು (Hanuman Jayanti) ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಲಾಗುತ್ತಿದೆ. ಹನುಮನ ಜನ್ಮಸ್ಥಳವೆಂದು ಐತಿಹ್ಯ ಪಡೆದಿರುವ ಗಂಗಾವತಿಯ ಅಂಜನಾದ್ರಿ ಬೆಟ್ಟದಲ್ಲಿ (Anjanadri Betta) ಶ್ರೀರಾಮನ ಪರಮ ಭಕ್ತನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಹನುಮ ಜಯಂತಿಗೆ 41 ದಿನ ಮೊದಲು ಉತ್ತರ ಕರ್ನಾಟಕದ ಹಲವರು ಭಾಗಗಳಲ್ಲಿ ಭಕ್ತರು ಹನುಮ ಮಾಲೆ ಧರಿಸಿ ಇಂದು ಅದನ್ನು ವಿಸರ್ಜಿಸುತ್ತಾರೆ. ಅಂಜನಾದ್ರಿ ಬೆಟ್ಟದಲ್ಲಿ ಬೆಳಗ್ಗೆಯಿಂದಲೇ ಮಾಲೆ ಧರಿಸಿದ ಭಕ್ತರ ದಂಡನ್ನು ಕಾಣಬಹುದುದಿತ್ತು. ಅವರಲ್ಲಿ ಮಾಜಿ ಸಚಿವ ಶಿವರಾಜ ತಂಗಡಗಿ (Shivaraj Tangadagi) ಕೂಡ ಒಬ್ಬರು. ಅವರೆಲ್ಲ ಬೆಟ್ಟದ ಮೇಲೆ ಹನುಮ ಮಾಲೆ ವಿಸರ್ಜಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ