ಎಮ್ ಪಿ ರೇಣುಕಾಚಾರ್ಯ ಮಗನ ಕಾರು ಹೊನ್ನಾಳಿಯಿಂದ ಕೇವಲ 13 ಕಿಮೀ ದೂರವಿರುವ ನ್ಯಾಮತಿಯಲ್ಲೂ ಕಾಣಿಸಿಕೊಂಡಿದೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 03, 2022 | 3:56 PM

ನ್ಯಾಮತಿಯಲ್ಲಿ ಕಾರಿನ ಚಲನೆಯನ್ನು ಸೆರೆಹಿಡಿದಿರುವ ಸಿಸಿಟಿವಿ ಪುಟೇಜ್ ಗಮನಿಸಿದಾಗ ಕಾರಲ್ಲಿ ಚಂದ್ರಶೇಖರ್ ಜೊತೆ ಒಬ್ಬ ಅಪರಿಚಿತ ವ್ಯಕ್ತಿ ಇದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.

ದಾವಣಗೆರೆ: ಮಾಜಿ ಸಚಿವ ಎಮ್ ಪಿ ರೇಣುಕಾಚಾರ್ಯ (MP Renukacharya) ಅವರ ಅಣ್ಣನ ಮಗ ಚಂದ್ರಶೇಖರ್ (Chandrashekar) 5 ದಿನಗಳಿಂದ ನಾಪತ್ತೆಯಾಗಿರುವ ಪ್ರಕರಣ ದಿನದಿಂದ ದಿನಕ್ಕೆ ನಿಗೂಢವಾಗುತ್ತಿದೆ. ನಿನ್ನೆಯಷ್ಟೇ ಅವರ ಕಾರು ಶಿವಮೊಗ್ಗದ ಸುರಹೊನ್ನೆಯಲ್ಲಿರುವ (Surahonne) ಪೆಟ್ರೋಲ್ ಬಂಕ್ ಮುಂದಿನ ರಸ್ತೆಯಿಂದ ಹಾದು ಹೋಗಿರುವ ಬಗ್ಗೆ ನಾವು ವರದಿ ಮಾಡಿದ್ದೆವು. ಈಗ ಮತ್ತೊಂದು ವಿಡಿಯೋ ಲಭ್ಯವಾಗಿದ್ದು ಸುರಹೊನ್ನೆಯಿಂದ ಮುಂದಕ್ಕೆ ಚಲಿಸಿರುವ ಚಂದ್ರಶೇಖರ್ ಕಾರು ಮಧ್ಯರಾತ್ರಿ ನ್ಯಾಮತಿ ಪಟ್ಟಣವನ್ನು ಪ್ರವೇಶಿಸಿದೆ ಆದರೆ ಹೊನ್ನಾಳಿ ಮಾತ್ರ ತಲುಪಿಲ್ಲ. ನ್ಯಾಮತಿಯಲ್ಲಿ ಕಾರಿನ ಚಲನೆಯನ್ನು ಸೆರೆಹಿಡಿದಿರುವ ಸಿಸಿಟಿವಿ ಪುಟೇಜ್ ಗಮನಿಸಿದಾಗ ಕಾರಲ್ಲಿ ಚಂದ್ರಶೇಖರ್ ಜೊತೆ ಒಬ್ಬ ಅಪರಿಚಿತ ವ್ಯಕ್ತಿ ಇದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ನ್ಯಾಮತಿಯಿಂದ ಕೇವಲ 13 ಕಿಮೀ ದೂರದಲ್ಲಿದಲ್ಲಿರುವ ಹೊನ್ನಾಳಿಯಲ್ಲಿ ರೇಣುಕಾಚಾರ್ಯ ಅವರ ಮನೆಯಿದೆ.