ಸಿಎಂ ನಿವಾಸದ ಬಳಿ ಕಾರು ಪಾರ್ಕಿಂಗ್ ಕಿರಿಕಿರಿ: ಅಡ್ಡಗಟ್ಟಿ ಸಿದ್ದರಾಮಯ್ಯಗೆ ದೂರು ನೀಡಿದ ಪಕ್ಕದ ಮನೆ ಮಾಲೀಕ

Edited By: ಆಯೇಷಾ ಬಾನು

Updated on: Jul 27, 2023 | 2:03 PM

ಸಿಎಂ ಸಿದ್ದರಾಮಯ್ಯ ಮನೆಯಿಂದ ಹೊರಗಡೆ ಬರ್ತಿದ್ದ ಹಾಗೇ ಸಿಎಂ ಕಾರು ಅಡ್ಡಗಟ್ಟಿ ಸಿಎಂಗೆ ವ್ಯಕ್ತಿ ದೂರು ನೀಡಿದರು. ಸಿಎಂ ಭೇಟಿಗೆ ಬರುವ ಕಾರ್​ಗಳ ಪಾರ್ಕಿಂಗ್​ನಿಂದ ಸಮಸ್ಯೆಯಾಗುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.

ಬೆಂಗಳೂರು, ಜುಲೈ 27: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದ ಎದುರು ನಿಂತು ವ್ಯಕ್ತಿಯೋರ್ವರು ಆಕ್ರೋಶ ಹೊರ ಹಾಕಿದ್ದಾರೆ. ಸಿಎಂ ನಿವಾಸದ ಬಳಿಯ ರಸ್ತೆಗೆ ಬ್ಯಾರಿಕೇಡ್ ಹಾಕಿದ್ದಕ್ಕೆ ಸಿಎಂ ನಿವಾಸ ಎದುರುಗಡೆ ಇರುವ ಮನೆ ಯಜಮಾನ ಸಿಎಂ ಕಾರಿಗೆ ಅಡ್ಡಗಟ್ಟಿ ಅಕ್ರೋಶ ಹೊರ ಹಾಕಿದ್ದಾರೆ.

ಸಿಎಂ ಭೇಟಿಗೆ ಬರುವ ವಾಹನಗಳು ನಮ್ಮ ಮನೆ ಮುಂದೆ ನಿಲ್ಲಿಸಿ ಹೋಗ್ತಾರೆ. ಹೇಗ ಬೇಕೋ ಹಾಗೇ ಪಾರ್ಕ್ ಮಾಡಿ ಹೋಗ್ತಾರೆ. ಪೊಲೀಸರಿಗೆ ಹೇಳಿದ್ರೂ ಪ್ರಯೋಜವಾಗಿಲ್ಲ ಎಂದು ಸಿಎಂ ಕಾರಿಗೆ ಅಡ್ಡಗಟ್ಟಿ ಸಿಎಂ ಬಳಿ ದೂರು ನೀಡಿದ್ರು. ಸಿಎಂ ಸಿದ್ದರಾಮಯ್ಯ ಮನೆಯಿಂದ ಹೊರಗಡೆ ಬರ್ತಿದ್ದ ಹಾಗೇ ಸಿಎಂ ಕಾರು ಅಡ್ಡಗಟ್ಟಿ ಸಿಎಂಗೆ ವ್ಯಕ್ತಿ ದೂರು ನೀಡಿದರು. ಕಳೆದ 5 ವರ್ಷದಿಂದ ಹೀಗೆ ಆಗ್ತಿದೆ. ಇದನ್ನ ಸರಿಪಡಿಸಿ ಎಂದು ಮನವಿ ಮಾಡಿದರು.

Loading...
Unable to load recommendations.
Follow Us