ಮಂಡ್ಯದಲ್ಲಿ ಅವತಾರ ತಾಳಿದ ಕಾಂತಾರ ದೇವಿ: ಓ ಎಂದು ಕೂಗಿ ಜನರಿಗೆ ಮೋಸ ಮಾಡುತ್ತಿದ್ದ ಮಹಿಳೆ ವಿರುದ್ಧ ದೂರು ದಾಖಲು
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮಳವಳ್ಳಿ ಟೌನ್ ನ ಪೇಟೆ ಬೀದಿಯಲ್ಲಿ ಶಿವಲಿಂಗಮ್ಮ ಎಂಬಾಕೆ ಅಮಾಯಕ ಜನರಿಗೆ ವಂಚಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಮಂಡ್ಯ: ಕಾಂತಾರ ಚಿತ್ರ ರಿಲೀಸ್ ಆಗಿದ್ದೇ ಆಗಿದ್ದು ಎಲ್ಲೆಡೆ ಕಾಂತಾರ ದೇವರು ಪ್ರತ್ಯಕ್ಷವಾಗುತ್ತಿದ್ದಾರೆ. ಎಲ್ಲಾ ಕಡೆ ಅದರದೇ ಹವಾ ಎದ್ದಿದೆ. ಆದ್ರೆ ಸಕ್ಕರೆ ನಾಡು ಮಂಡ್ಯದಲ್ಲಿ ಮಹಿಳೆಯೊಬ್ಬಳು ತನ್ನ ಮೈ ಮೇಲೆ ಕಾಂತಾರ ದೇವರು ಬರುತ್ತಾರೆಂದು ನಂಬಿಸಿ ಮೋಸ ಮಾಡುತ್ತಿದ್ದಾಳೆ. ಮೈ ಮೇಲೆ ದೇವರು ಬರುತ್ತೆ ಎಂದು ವಂಚಿಸುತ್ತಿರು ಐನಾತಿ ಮಹಿಳೆ ಮೇಲೆ ಸದ್ಯ ದೂರು ದಾಖಲಾಗಿದೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮಳವಳ್ಳಿ ಟೌನ್ ನ ಪೇಟೆ ಬೀದಿಯಲ್ಲಿ ಶಿವಲಿಂಗಮ್ಮ ಎಂಬಾಕೆ ಅಮಾಯಕ ಜನರಿಗೆ ವಂಚಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈಕೆ ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಕೂಗುವ ರೀತಿಯೇ ಕೂಗಿ ಜನರಿಗೆ ಮರಳು ಮಾಡ್ತಿದ್ದಾರಂತೆ. ಪರಿಹಾರ ನೀಡುವುದಾಗಿ ಹಣ ಪೀಕುತ್ತಿದ್ದಾಳೆ. ಸದ್ಯ ಮಹಿಳೆಯ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು ಕಾಂತಾರ ಚಿತ್ರದ ಕ್ಲೈ ಮ್ಯಾಕ್ಸ್ ನಲ್ಲಿ ಕಿರುಚುವ ಹಾಗೆ ಕಿರುಚಿ ಜನರಿಗೆ ಮಂಕು ಬೂದಿ ಎರುಚುತ್ತಿರುವ ಮಹಿಳೆ ವಿರುದ್ಧ ಮಳವಳ್ಳಿ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಎನ್ಸಿಆರ್ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗಿದೆ.