Video: ಗೊತ್ತಿಲ್ಲದೆ ಹಿಂದಕ್ಕೆ ಹೆಜ್ಜೆ ಇಟ್ಟು ಎರಡನೇ ಮಹಡಿಯ ಬಾಲ್ಕನಿಯಿಂದ ಬಿದ್ದ ಯುವಕ

Updated on: Sep 19, 2025 | 9:08 AM

ಯುವಕನೊಬ್ಬ ಎರಡನೇ ಮಹಡಿಯ ಬಾಲ್ಕನಿಯಿಂದ ಕೆಳಗೆ ಬಿದ್ದಿರುವ ಘಟನೆ ರಾಜಸ್ಥಾನದ ಜೋಧ್​​ಪುರದಲ್ಲಿ ನಡೆದಿದೆ. ನೀರು ಕುಡಿಯುತ್ತಾ ಹಿಂದಕ್ಕೆ ಹೆಜ್ಜೆ ಇಟ್ಟ ಪರಿಣಾಮ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಬಾಲ್ಕನಿಯ ಗೋಡೆ ಸಾಕಷ್ಟು ಎತ್ತರವಾಗಿಲ್ಲದಿರುವುದು ಹಾಗೂ ಯಾವುದೇ ಗ್ರಿಲ್​ ಕೂಡ ಅಳವಡಿಸದಿರುವುದು ಈ ಅಪಘಾತಕ್ಕೆ ಕಾರಣವಾಗಿದೆ. ನಜೀರ್ ಎಂದು ಗುರುತಿಸಲ್ಪಟ್ಟ ವ್ಯಕ್ತಿ ನೀರಿನ ಬಾಟಲಿಯನ್ನು ಹಿಡಿದುಕೊಂಡು ಹಿಂದಕ್ಕೆ ಹೆಜ್ಜೆ ಇಡುತ್ತಾರೆ ಆಗ ಎಡವಿ ಹಿಂದಕ್ಕೆ ಬಿದ್ದಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ನಜೀರ್ ಪಾನ್ ಅಂಗಡಿ ಮತ್ತು ಜವಳಿ ಅಂಗಡಿಯನ್ನು ಹೊಂದಿರುವ ಕಟ್ಟಡದ ಮೇಲಿನ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದರು.

ಜೋಧ್​ಪುರ್, ಸೆಪ್ಟೆಂಬರ್ 19: ಯುವಕನೊಬ್ಬ ಎರಡನೇ ಮಹಡಿಯ ಬಾಲ್ಕನಿಯಿಂದ ಕೆಳಗೆ ಬಿದ್ದಿರುವ ಘಟನೆ ರಾಜಸ್ಥಾನದ ಜೋಧ್​​ಪುರದಲ್ಲಿ ನಡೆದಿದೆ. ನೀರು ಕುಡಿಯುತ್ತಾ ಹಿಂದಕ್ಕೆ ಹೆಜ್ಜೆ ಇಟ್ಟ ಪರಿಣಾಮ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ.  ಕಾಲುಗಳಿಗೆ ಗಂಭೀರ ಗಾಯವಾಗಿದೆ.  ಬಾಲ್ಕನಿಯ ಗೋಡೆ ಸಾಕಷ್ಟು ಎತ್ತರವಾಗಿಲ್ಲದಿರುವುದು ಹಾಗೂ ಯಾವುದೇ ಗ್ರಿಲ್​ ಕೂಡ ಅಳವಡಿಸದಿರುವುದು ಈ ಅಪಘಾತಕ್ಕೆ ಕಾರಣವಾಗಿದೆ. ನಜೀರ್ ಎಂದು ಗುರುತಿಸಲ್ಪಟ್ಟ ವ್ಯಕ್ತಿ ನೀರಿನ ಬಾಟಲಿಯನ್ನು ಹಿಡಿದುಕೊಂಡು ಹಿಂದಕ್ಕೆ ಹೆಜ್ಜೆ ಇಡುತ್ತಾರೆ ಆಗ ಎಡವಿ ಹಿಂದಕ್ಕೆ ಬಿದ್ದಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ನಜೀರ್ ಪಾನ್ ಅಂಗಡಿ ಮತ್ತು ಜವಳಿ ಅಂಗಡಿಯನ್ನು ಹೊಂದಿರುವ ಕಟ್ಟಡದ ಮೇಲಿನ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದರು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ