ಚೀಟಿ ಹಣ ಕೇಳಿದ್ದಕ್ಕೆ ಸಾಮಾಜಿಕ ಬಹಿಷ್ಕಾರ; ಅನಿಷ್ಟ ಪದ್ಧತಿಗೆ ಬೇಸತ್ತ ಕುಟುಂಬ

Updated on: Sep 21, 2025 | 6:10 PM

ಸಮಾಜ ಎಷ್ಟೇ ಮುಂದುವರೆದಿದ್ದರೂ ಶತಮಾನಗಳಿಂದಲೂ ಅಸ್ತಿತ್ವದಲ್ಲಿದ್ದಂತಹ ಅನಿಷ್ಟ ಪದ್ಧತಿಗಳು ಇನ್ನೂ ಜೀವಂತವಿದ್ದಂತೆ ಕಾಣುತ್ತಿದೆ. ಇದಕ್ಕೆ ನಿದರ್ಶನದಂತಿರುವ ಘಟನೆಯೊಂದು ಇದೀಗ ನಡೆದಿದ್ದು, ಕೇವಲ ಚೀಟಿ ಹಣ ಕೇಳಿದ್ದಕ್ಕೆ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಈ ಅಮಾನವೀಯ ಘಟನೆ ಚಾಮರಾಜನಗರದ ಬೆಂಡರವಾಡಿಯಲ್ಲಿ ನಡೆದಿದ್ದು, ಸಮಾಜದ ಈ ಅನಿಷ್ಟ ಪದ್ಧತಿಯಿಂದ ಆ ಕುಟುಂಬದ ಸದಸ್ಯರು ಬೇಸತ್ತು ಹೋಗಿದ್ದಾರೆ.

ಚಾಮರಾಜನಗರ, ಸೆಪ್ಟೆಂಬರ್‌ 21: ಸಮಾಜ ಎಷ್ಟೇ ಅಭಿವೃದ್ಧಿ ಹೊಂದಿದರೂ, ನಾಗರಿಕತೆ ಎಷ್ಟೇ ಮುಂದುವರೆದಿದ್ದರೂ ನಮ್ಮ ಸಮಾಜದಲ್ಲಿ ಕೆಲವೊಂದಿಷ್ಟು ಅನಿಷ್ಟ ಪದ್ಧತಿಗಳು ಇಂದಿಗೂ ಜೀವಂತವಿದೆ. ಇದಕ್ಕೆ ಉದಾಹರಣೆಯಂತಿರುವ ಅಮಾನವೀಯ ಘಟನೆಯೊಂದು ಚಾಮರಾಜನಗರದ ಬೆಂಡರವಾಡಿಯಲ್ಲಿ ನಡೆದಿದ್ದು, ಚೀಟಿ ಹಣ ಕೇಳಿದ್ರ ಎಂಬ ಒಂದೇ ಕಾರಣಕ್ಕೆ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ (social exclusion)  ಹಾಕಲಾಗಿದೆ. ಕೇವಲ 5000 ರೂ. ಚೀಟಿ ಹಣ ಕೇಳಿದ್ದಕ್ಕೆ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದ್ದು, ಈ ಅನಿಷ್ಟ ಪದ್ಧತಿಯ ಕಾರಣದಿಂಗಾಗಿ ಬೇಸತ್ತು ರವಿ ಎಂಬವರ ಕುಟುಂಬಸ್ಥರು ಬೇಸತ್ತು ಹೋಗಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Sep 21, 2025 06:08 PM