Video: ವಿಮಾನ ರನ್​ ವೇನಲ್ಲಿ ಇಳಿಯುವಾಗ ಅಡ್ಡ ಬಂದೇ ಬಿಡ್ತು ಮತ್ತೊಂದು ವಿಮಾನ

Updated on: Feb 26, 2025 | 10:25 AM

ಚಿಕಾಗೋದ ಮಿಡ್‌ವೇ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದ ಸೌತ್‌ವೆಸ್ಟ್ ಏರ್‌ಲೈನ್ಸ್ ವಿಮಾನದ ಎದುರು ಮತ್ತೊಂದು ವಿಮಾನ ಏಕಾಏಕಿ ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿತ್ತು. ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಸೌತ್ ವೆಸ್ಟ್​ ವಿಮಾನವು ಇಳಿಯಲು ಪ್ರಯತ್ನಿಸುತ್ತಿರುವಾಗ ಮತ್ತೊಂದು ವಿಮಾನ ಅಡ್ಡ ಬಂದ ಹಿನ್ನೆಲೆಯಲ್ಲಿ ಕೂಡಲೇ ಪೈಲಟ್ ಆ ವಿಮಾನವನ್ನು ಸಂಪೂರ್ಣವಾಗಿ ಕೆಳಗಿಳಿಸಿದೇ ಮತ್ತೆ ಆಕಾಶಕ್ಕೆ ಹಾರಿಸಿ ಆಗಬಹುದಾದ ದೊಡ್ಡ ಅಪಘಾತವನ್ನು ತಪ್ಪಿಸಿದ್ದಾರೆ.

ಚಿಕಾಗೋದ ಮಿಡ್‌ವೇ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದ ಸೌತ್‌ವೆಸ್ಟ್ ಏರ್‌ಲೈನ್ಸ್ ವಿಮಾನದ ಎದುರು ಮತ್ತೊಂದು ವಿಮಾನ ಏಕಾಏಕಿ ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿತ್ತು. ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಅದರಲ್ಲಿ ಸೌತ್ ವೆಸ್ಟ್​ ವಿಮಾನವು ಇಳಿಯಲು ಪ್ರಯತ್ನಿಸುತ್ತಿರುವಾಗ ಮತ್ತೊಂದು ವಿಮಾನ ಅಡ್ಡ ಬಂದ ಹಿನ್ನೆಲೆಯಲ್ಲಿ ಕೂಡಲೇ ಪೈಲಟ್ ಆ ವಿಮಾನವನ್ನು ಸಂಪೂರ್ಣವಾಗಿ ಕೆಳಗಿಳಿಸಿದೇ ಮತ್ತೆ ಆಕಾಶಕ್ಕೆ ಹಾರಿಸಿ ಆಗಬಹುದಾದ ದೊಡ್ಡ ಅಪಘಾತವನ್ನು ತಪ್ಪಿಸಿದ್ದಾರೆ. ಬಳಿಕ ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ಕೆಳಗಿಳಿಯಿತು. ಏರ್ ಟ್ರಾಫಿಕ್ ಕಂಟ್ರೋಲರ್ ಹಾಗೂ ಪೈಲಟ್​​ ತುರ್ತು ನಿರ್ಧಾರದಿಂದ ಅಪಘಾತ ತಪ್ಪಿದೆ. ಇನ್ನೊಂದು ವಿಮಾನವು ರನ್‌ವೇಗೆ ತಪ್ಪಾಗಿ ಪ್ರವೇಶಿಸಿದ್ದರಿಂದ ಈ ಘಟನೆ ಸಂಭವಿಸಿದೆ. ಅದರ ಬಗ್ಗೆ ತನಿಖೆ ನಡೆಯುತ್ತಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ